ಕರ್ನಾಟಕ

karnataka

ETV Bharat / bharat

26 ವರ್ಷದ ಪ್ರಿಯತಮನನ್ನು ಕೊಂದ ಆರು ಮಕ್ಕಳ 32 ವರ್ಷದ ಮಹಿಳೆ - woman is a mother of 6 childrens

26 ವರ್ಷದ ಗೆಳೆಯನನ್ನು ಚಲಿಸುತ್ತಿದ್ದ ಆಟೋದಲ್ಲಿಯೇ ಮಹಿಳೆ ಕೊಲೆ ಮಾಡಿದ್ದಾಳೆ. ಈ ಮಹಿಳೆ 6 ಮಕ್ಕಳ ತಾಯಿಯಾಗಿದ್ದಾಳೆ.

ಆಟೋದಲ್ಲಿಯೇ ಗೆಳೆಯನ ಹತ್ಯೆ
ಆಟೋದಲ್ಲಿಯೇ ಗೆಳೆಯನ ಹತ್ಯೆ

By

Published : Aug 28, 2022, 10:39 PM IST

ಮುಂಬೈ(ಮಹಾರಾಷ್ಟ್ರ) : 32 ವರ್ಷದ ಮಹಿಳೆ ತನ್ನ 26 ವರ್ಷದ ಗೆಳೆಯನನ್ನು ಚಲಿಸುತ್ತಿದ್ದ ಆಟೋದಲ್ಲಿಯೇ ಕತ್ತು ಹಿಸುಕಿ ಕೊಂದಿದ್ದಾಳೆ. ಈ ಮಹಿಳೆ 6 ಮಕ್ಕಳ ತಾಯಿಯಾಗಿದ್ದು, ಘಟನೆ ಬಳಿಕ ಮಹಿಳೆ ಪೊಲೀಸರ ಮುಂದೆ ಶರಣಾಗಿದ್ದಾಳೆ. ಈ ಕುರಿತು ಆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವರ : ಗೋರೆಗಾಂವ್ ಪೂರ್ವದ ತಾಪೇಶ್ವರ ದೇವಸ್ಥಾನದ ಬಳಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಆರೋಪಿ ಮಹಿಳೆ ಹಾಗೂ ಆಕೆಯ ಪ್ರಿಯಕರನ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪರಿಣಾಮ ಶನಿವಾರ ಮಧ್ಯಾಹ್ನ ಆತನನ್ನು ಕತ್ತು ಹಿಸುಕಿ ಕೊಂದು ಆಟೋದಲ್ಲಿಯೇ ಬಿಟ್ಟು ಹೋಗಿದ್ದಾಳೆ.

ಇಬ್ಬರೂ ಪೊವಾಯಿ ನಿವಾಸಿಗಳಾಗಿದ್ದಾರೆ. ಘಟನೆ ನಂತರ ಮಹಿಳೆ ತಕ್ಷಣ ಮುಂಬೈನ ಪೊಲೀಸರಿಗೆ ಶರಣಾಗಿದ್ದಾಳೆ. ಮಹಿಳೆಗೆ ಈಗಾಗಲೇ ಆರು ಮಕ್ಕಳಿವೆ ಎಂದು ಗೊತ್ತಿದ್ದರೂ ಯುವಕ ಆಕೆಯ ಜೊತೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದ.

ಕೊಲೆ ಯಾಕೆ: ಮಹಿಳೆ ಪ್ರೇಮಿಯನ್ನು ಮದುವೆಯಾಗಲು ಒತ್ತಾಯಿಸಿದ್ದಾಳೆ. ಆದರೆ, ಯುವಕ ಇದನ್ನು ನಿರಾಕರಿಸಿದ್ದಾನೆ. ಈ ಎಲ್ಲಾ ಗಲಾಟೆ ಆಟೋದಲ್ಲೇ ನಡೆದಿದೆ. ನಂತರ ಪೊಲೀಸ್ ಠಾಣೆಗೆ ಹೋಗುವಂತೆ ಪ್ರಿಯಕರನನ್ನು ಕೇಳಿದ್ದಾಳೆ. ಆದರೆ, ಆತ ವಾಹವನನ್ನು ಬೇರೆ ರಸ್ತೆಗೆ ತಿರುಗಿಸಿದ್ದಾನೆ. ಇದರಿಂದ ಕುಪಿತಗೊಂಡ ಮಹಿಳೆ ಹಿಂದಿನಿಂದ ತನ್ನ ದುಪಟ್ಟಾ ತೆಗೆದುಕೊಂಡು ಯುವಕನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ಇದನ್ನೂ ಓದಿ: ಬೇಡ ಬೇಡ ಎಂದು ಎಷ್ಟೇ ಕೂಗಿಕೊಂಡರು ತೊಟ್ಟಬೆಟ್ಟದಿಂದ ಹಾರಿ ವೃದ್ಧೆ ಆತ್ಮಹತ್ಯೆ

ABOUT THE AUTHOR

...view details