ಪುಣೆ (ಮಹಾರಾಷ್ಟ್ರ): ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಗೆ ಅರೆ ನಗ್ನ ಫೋಟೋಗಳು ಕಳುಹಿಸಿ, ನಂತರ ಆಕೆ ಅದೇ ಫೋಟೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರಿಂದ 19 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ದತ್ತವಾಡಿ ಪ್ರದೇಶದ ನಿವಾಸಿ ಪ್ರೀತಮ್ ಗಾಯಕ್ವಾಡ್ (ಹೆಸರು ಬದಲಾಯಿಸಲಾಗಿದೆ) ಎಂಬ ಯುವಕನೇ ಸಾವಿಗೆ ಶರಣಾದ ಯುವಕ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದ ಪ್ರೀತಮ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೀತ್ ಯಾದವ್ ಎಂಬ ಐಡಿ ಇರುವ ಯುವತಿಯೊಂದಿಗೆ ಪರಿಚಯವಾಗಿದೆ. ಈ ಪರಿಚಯ ಸಲುಗೆಗೆ ತಿರುಗಿ, ಅರೆಬೆತ್ತಲೆ ಫೋಟೋಗಳನ್ನು ಕೇಳಿದಾಗ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇದಾದ ಬಳಿಕ ಹಣ ನೀಡುವಂತೆ ಪ್ರೀತಮ್ ಗಾಯಕ್ವಾಡ್ಗೆ ಬೇಡಿಕೆ ಇಡಲಾಗಿದೆ. ಇಲ್ಲದಿದ್ದರೆ ನಿನ್ನ ಅರೆಬೆತ್ತಲೆ ಫೋಟೋಗಳನ್ನು ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಲಾಗಿದೆ. ಇದರಿಂದ ಆನ್ ಲೈನ್ನಲ್ಲಿ 4,500 ರೂ.ಗಳನ್ನು ಗಾಯಕ್ವಾಡ್ ಪಾವತಿಸಿದ್ದಾರೆ. ಇದಾದ ನಂತರ ನಿರಂತರವೂ ಬೆದರಿಕೆ ಹಾಗೂ ಹಣಕ್ಕೆ ಬೇಡಿಕೆ ಇಡಲಾಗಿದೆ.