ಖೇಡಾ, ಗುಜರಾತ್: ಜಿಲ್ಲೆಯಲ್ಲಿ ದುರಂತ ಘಟನೆಯೊಂದು ಬೆಳಕಿಗೆ ಬಂದಿದೆ. 42 ವರ್ಷದ ಅಂಕಲ್ವೊಬ್ಬ ಕದ್ದು ಮುಚ್ಚಿ ಪ್ರೀತಿಸುತ್ತಿದ್ದ 15 ವರ್ಷದ ಬಾಲಕಿಯನ್ನು ಕಟರ್ನಿಂದ ದಾಳಿ ಮಾಡಿದ್ದಾನೆ. ಬಳಿಕ ಆಕೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ತ್ರಾಜ್ ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ರಾಜೇಶ್ ಪಟೇಲ್ ಎಂದು ಗುರುತಿಸಲಾಗಿದೆ.
ಸೊಸೆಯ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದ ಮಾವ: ಆರೋಪಿ ರಾಜೇಶ್ ಪಟೇಲ್ ಸೊಸೆ ಮತ್ತು ಮೃತ ಕೃಪಾ ಪಟೇಲ್ ಇಬ್ಬರು ಸ್ನೇಹಿತರು. ಆಗಾಗ ಕೃಪಾ ಪಟೇಲ್ ತನ್ನ ಸ್ನೇಹಿತೆ ಮನೆಗೆ ಹೋಗಿ ಬರುತ್ತಿದ್ದಳು. ಈ ಕ್ರಮದಲ್ಲಿ ಕೃಪಾ ಪಟೇಲ್ ಮೇಲೆ ಅಂಕಲ್ ರಾಜೇಶ್ ಪಟೇಲ್ಗೆ ಲವ್ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಒನ್ ಸೈಡ್ ಲವ್ಗೆ ಬಾಲಕಿ ಬಲಿ: ಆಗಸ್ಟ್ 17ರಂದು ರಾಜೇಶ್ ಪಟೇಲ್ ಸೊಸೆ ಮತ್ತು ಕೃಪಾ ಪಟೇಲ್ ಇಬ್ಬರು ತಂಪು ಪಾನೀಯ ಕುಡಿಯಲು ಗ್ರಾಮದ ಅಂಗಡಿಯೊಂದಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದ ರಾಜೇಶ್ ಪಟೇಲ್ ಹರಿತವಾದ ಪೇಪರ್ ಕಟರ್ನಿಂದ ಕೃಪಾ ಪಟೇಲ್ ಕೈ ಮೇಲೆ ದಾಳಿ ಮಾಡಿ ಕತ್ತನ್ನು ಸೀಳಿದ್ದಾನೆ.
ಹಾಡಹಗಲೇ ಎಲ್ಲರೂ ನೋಡ - ನೋಡುತ್ತಿದ್ದಂತೆ ಬಾಲಕಿಯ ದಾಳಿ ನಡೆದು ಹೋಯಿತು. ಕೂಡಲೇ ಸ್ಥಳೀಯರು ದಾಳಿಗೊಳಗಾದ ಬಾಲಕಿಯನ್ನು ಖೇಡಾ ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದರು. ದಾಳಿ ಬಳಿಕ ಆರೋಪಿ ರಾಜೇಶ್ ಪಟೇಲ್ ಪರಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.