ಕರ್ನಾಟಕ

karnataka

ETV Bharat / bharat

ಕುಂಭಮೇಳದಿಂದ ಮಧ್ಯಪ್ರದೇಶಕ್ಕೆ ಹಿಂದಿರುಗಿದ ಶೇ.99 ರಷ್ಟು ಮಂದಿಗೆ ಕೊರೊನಾ

ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಕುಂಭಮೇಳದಿಂದ ಮಧ್ಯಪ್ರದೇಶಕ್ಕೆ ಹಿಂದಿರುಗಿದ ಶೇ.99 ರಷ್ಟು ಮಂದಿ ಯಾತ್ರಾರ್ಥಿಗಳಿಗೆ ಕೋವಿಡ್ ಸೋಂಕು​ ದೃಢಪಟ್ಟಿದೆ.

ಕುಂಭಮೇಳದಿಂದ ಮಧ್ಯಪ್ರದೇಶಕ್ಕೆ ಹಿಂದಿರುಗಿದ ಶೇ.99 ರಷ್ಟು ಮಂದಿಗೆ ಕೊರೊನಾ
99% 'Kumbh returnees' found positive for COVID-19 in Madhya Pradesh

By

Published : May 4, 2021, 7:05 AM IST

ವಿದಿಶಾ (ಮಧ್ಯಪ್ರದೇಶ): ಕೋವಿಡ್ ಸಾಂಕ್ರಾಮಿಕ ಸುಳಿಯಲ್ಲಿ ಸಿಲುಕಿ ದೇಶ ಒದ್ದಾಡುತ್ತಿದ್ದ ವೇಳೆ ನಡೆದ ಹರಿದ್ವಾರದ ಮಹಾ ಕುಂಭಮೇಳವು ಸೋಂಕು ಹರಡುವಿಕೆಗೆ ಹೆಚ್ಚಿನ ದಾರಿ ಮಾಡಿಕೊಟ್ಟಿದೆ. ಕುಂಭಮೇಳದಲ್ಲಿ ಪಾಲ್ಗೊಂಡು ಮಧ್ಯಪ್ರದೇಶಕ್ಕೆ ಹಿಂದಿರುಗಿದ ಶೇ.99 ರಷ್ಟು ಜನರ ವರದಿ ಪಾಸಿಟಿವ್​ ಬಂದಿದೆ.

ಇಲ್ಲಿನ ವಿದಿಶಾ ಜಿಲ್ಲೆಯ ಗಯಾರಸ್ಪುರ ಪಟ್ಟಣದ ಕುಂಭಮೇಳಕ್ಕೆ ತೆರಳಿದ್ದ 83 ಯಾತ್ರಾರ್ಥಿಗಳ ಪೈಕಿ 60 ಮಂದಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ. ಇನ್ನೂ 22 ಜನರನ್ನು ಪತ್ತೆಹಚ್ಚಿ, ಅವರನ್ನು ಪರೀಕ್ಷೆಗೆ ಒಳಪಡಿಸಲು ವಿದಿಶಾ ಆಡಳಿತ ಆದೇಶಿಸಿದೆ.

ಇದನ್ನೂ ಓದಿ: ಕೊರೊನಾ ಮರೆತ ಭಕ್ತರು: ಗಂಗೆಯಲ್ಲಿ 'ಶಾಹಿ ಸ್ನಾನ' ಮಾಡಿದ್ದು ಬರೋಬ್ಬರಿ 35 ಲಕ್ಷ ಮಂದಿ!

ಉತ್ತರಾಖಂಡದ ಹರಿದ್ವಾರದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ನಡೆದ ಶಾಹಿ ಸ್ನಾನದಲ್ಲಿ ಲಕ್ಷಾಂತರ ಭಕ್ತರು, ಸಾಧು-ಸಂತರು ಪಾಲ್ಗೊಂಡಿದ್ದರು. ಈ ವೇಳೆ ಕೋವಿಡ್​ ನಿಯಮಗಳನ್ನು ಗಾಳಿಗೆ ತೂರಿ ಕುಂಭಮೇಳ ಆಚರಿಸಿದ್ದರು. ದೇಶಾದ್ಯಂತ ಇದರ ವಿರುದ್ಧ ವ್ಯಾಪಕ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹಿಂದೂ ಆಚಾರ್ಯ ಸಭಾದ ಅಧ್ಯಕ್ಷರಾದ ಸ್ವಾಮಿ ಅವಧೇಶಾನಂದ ಗಿರಿ ಅವರಲ್ಲಿ ಕುಂಭಮೇಳವನ್ನು ಸಾಂಕೇತಿಕವಾಗಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು. ಆ ಬಳಿಕ ಅವಧೇಶಾನಂದ ಸ್ವಾಮೀಜಿ ಕುಂಭಮೇಳ ಮೊಟಕುಗೊಳಿಸಿದ್ದರು.

ಇದನ್ನೂ ಓದಿ: ಹರಿದ್ವಾರ ಕುಂಭಮೇಳ ಮೊಟಕು: ನಮೋ ಕರೆಗೆ ಸ್ಪಂದಿಸಿದ ಅವಧೇಶಾನಂದ ಸ್ವಾಮೀಜಿ!

ಮಧ್ಯಪ್ರದೇಶದ ಕೋವಿಡ್‌ ವಿವರ

ಮಧ್ಯಪ್ರದೇಶದಲ್ಲಿ ಈವರೆಗೆ 6,00,430 ಕೋವಿಡ್​ ಕೇಸ್​ಗಳು ಪತ್ತೆಯಾಗಿದ್ದು, 5,905 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ABOUT THE AUTHOR

...view details