ಸಬರಕಾಂಠ(ಗುಜರಾತ್): ಇಲ್ಲಿನ ವಿಜಯನಗರದ ಗಡಿ ವಾಂಕದ ಗ್ರಾಮದವರಾದ ಗೆಮಾಜಿ ನಿನಾಮ ಅವರಿಗೆ ಪ್ರಸ್ತುತ 95 ವರ್ಷ ವಯಸ್ಸಾಗಿದ್ದರೂ ಇನ್ನು ಚಿರ ಯುವಕನಂತೆ ದುಡಿದು ತಿನ್ನುತ್ತಿದ್ದಾರೆ. ಅವರ ದೇಹಕ್ಕೆ ವಯಸ್ಸಾಗಿದೆಯೇ ಹೊರತು ಅವರ ಆತ್ಮಸ್ಥೈರ್ಯ ಇನ್ನೂ ಕುಗ್ಗಿಲ್ಲ. ಈಗಲೂ ಅವಿಭಕ್ತ ಕುಟುಂಬದ ಜವಾಬ್ದಾರಿ ಹೊತ್ತಿದ್ದಾರೆ.
1927ರಲ್ಲಿ ಸ್ವಾತಂತ್ರ್ಯದ ಮೊದಲು ಜನಿಸಿದ್ದ ಗೆಮಾಜಿ 1947ರ ನಂತರ ಸರ್ಕಾರಿ ಕೆಲಸಕ್ಕೆ ಸೇರಿದ್ದರು. ಆದರೆ, 1960ರಲ್ಲಿ ವೈದ್ಯಕೀಯ ರಜೆ ಪಡೆದುಕೊಂಡು ಅಲ್ಲಿಂದ ಹೊರ ಬಂದರು. ಅಂದು ರಾಜ್ಯ ಸರ್ಕಾರವು ಅವರಿಗೆ ಪಿಂಚಣಿ ನೀಡಲು ಪ್ರಾರಂಭಿಸಿತು. ಆ ಪಿಂಚಣಿ ಇಂದಿಗೂ ನಿಂತಿಲ್ಲ.
ದೊಡ್ಡ ಕುಟುಂಬದ ಯಜಮಾನ :ಅಹಮದಾಬಾದ್‌ನ ಶಾಹಿಬಾಗ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದ ಗೆಮಾಜಿ ನಿನಾಮಾ ಅವರು ಈಗ ಕುಟುಂಬಕ್ಕೆ ಸಹಾಯ ಮಾಡಲು ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಇವರ ಈ ಕುಟುಂಬದಲ್ಲಿ ಇಂದು 22 ಜನ ಸದಸ್ಯರಿದ್ದಾರೆ.
ದೇಹದಾರ್ಢ್ಯದ ಕಲೆಯನ್ನು ಕರಗತ ಮಾಡಿಕೊಂಡಿರುವ ಇವರು ಇಂದಿಗೂ ಅದನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಗೆಮಾಜಿ ನಿನಾಮ ಅವರ ಕುಟುಂಬವು ಅವಿಭಕ್ತ ಕುಟುಂಬದ ವ್ಯಾಖ್ಯಾನಕ್ಕೆ ಉತ್ತಮ ಮಾದರಿಯಾಗಿದೆ. ಈ ಏಕೀಕೃತ ಕುಟುಂಬವು ಸಂತೋಷ ಮತ್ತು ಸಾಮರಸ್ಯವನ್ನು ಸಾಧಿಸುತ್ತದೆ ಎಂದು ಅವರು ನಂಬಿದ್ದಾರೆ.