ಕರ್ನಾಟಕ

karnataka

ETV Bharat / bharat

ದೇಶದಲ್ಲಿ ತೈಲ ಬೆಲೆಗಳು ತೀರಾ ಕಡಿಮೆ: ಉತ್ತರ ಪ್ರದೇಶದ ಸಚಿವನ ಸಮರ್ಥನೆ - up minister upendra tiwari

ದೇಶದಲ್ಲಿ ತೈಲ ಬೆಲೆಗಳು ತೀರಾ ಕಡಿಮೆ ಎಂದು ಉತ್ತರ ಪ್ರದೇಶದ ಸಚಿವರೊಬ್ಬರು ಹೇಳಿದ್ದು, ದೇಶದ ಶೇಕಡಾ 95 ಮಂದಿಗೆ ಪೆಟ್ರೋಲ್ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

95 pc of people don't need petrol: UP Min on fuel price hike
ದೇಶದಲ್ಲಿ ತೈಲ ಬೆಲೆಗಳು ತೀರಾ ಕಡಿಮೆ: ಉತ್ತರ ಪ್ರದೇಶದ ಸಚಿವನ ಸಮರ್ಥನೆ

By

Published : Oct 22, 2021, 5:34 AM IST

ಜಲೌನ್, ಉತ್ತರ ಪ್ರದೇಶ:ತಲಾದಾಯಕ್ಕೆ ಹೋಲಿಸಿದರೆ ದೇಶದಲ್ಲಿ ಇಂಧನ ಬೆಲೆಗಳು ತೀರಾ ಕಡಿಮೆ ಎಂದು ಉತ್ತರ ಪ್ರದೇಶ ಕ್ರೀಡಾ ಸಚಿವರಾದ ಉಪೇಂದ್ರ ತಿವಾರಿ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.

ದೇಶದಲ್ಲಿ ತೈಲ ಬೆಲೆಯ ಏರಿಕೆಯನ್ನು ಸಮರ್ಥನೆ ಮಾಡಿಕೊಂಡ ಅವರು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಪೆಟ್ರೋಲ್, ಡಿಸೇಲ್ ಅನ್ನು ಬಳಸುತ್ತಾರೆ. ದೇಶದ 95 ಮಂದಿ ಜನರಿಗೆ ಪೆಟ್ರೋಲ್ ಅಗತ್ಯವಿಲ್ಲ. ವಾಹನಗಳನ್ನು ಬಳಸುವ ಕೇವಲ ಶೇಕಡಾ 5ರಷ್ಟು ಮಂದಿಗೆ ಮಾತ್ರ ಪೆಟ್ರೋಲ್, ಡಿಸೇಲ್ ಅವಶ್ಯಕತೆ ಇದೆ ಎಂದಿದ್ದಾರೆ.

ಇದರ ಜೊತೆಗೆ ಇದಲ್ಲದೆ, ದೇಶದಲ್ಲಿ ನಡೆಸುತ್ತಿರುವ ಕೋವಿಡ್ ಲಸಿಕೆ ಅಭಿಯಾನವನ್ನು ಶ್ಲಾಘಿಸಿದ ಉಪೇಂದ್ರ ತಿವಾರಿ ಜನರಿಗೆ 100 ಕೋಟಿ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ನೀಡಲಾಗಿದೆ. ಕೊರೊನಾ ಸೋಂಕಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದ ಅವರು ದೇಶದಲ್ಲಿ ಪೆಟ್ರೋಲ್ ಬೆಲೆ ಹೆಚ್ಚು ಇಲ್ಲ ಎಂದು ಮತ್ತೆ ಸಮರ್ಥಿಸಿಕೊಂಡಿದ್ದಾರೆ.

ಇನ್ನು ದೇಶದಲ್ಲಿ ಇಂಧನ ಬೆಲೆ ನೋಡುವುದಾರೆ ಗುರುವಾರ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 35 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ ಪೆಟ್ರೋಲ್ 106.54 ರೂಪಾಯಿ, ಪ್ರತಿ ಲೀಟರ್ ಡಿಸೇಲ್ 95.27 ರೂಪಾಯಿಯಷ್ಟಾಗಿದೆ.

ಇದನ್ನೂ ಓದಿ:FATF Report: ಮತ್ತೆ ಬೂದು ಪಟ್ಟಿಯಲ್ಲೇ ಉಳಿದ ಪಾಕ್, ಟರ್ಕಿ ಹೊಸದಾಗಿ ಸೇರ್ಪಡೆ

ABOUT THE AUTHOR

...view details