ಕರ್ನಾಟಕ

karnataka

ETV Bharat / bharat

ರಾಜ್ಯದ 19 ಸಿಬ್ಬಂದಿ ಸೇರಿ 946 ಪೊಲೀಸರಿಗೆ ರಾಷ್ಟ್ರಪತಿ ಪದಕ! - 72ನೇ ಗಣರಾಜ್ಯೋತ್ಸವ ದಿನ

ರಾಜ್ಯದ 19 ಪೊಲೀಸ್ ಸಿಬ್ಬಂದಿ ಸೇರಿದಂತೆ ದೇಶದ 946 ಸಿಬ್ಬಂದಿಗಳಿಗೆ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ.

police award
police award

By

Published : Jan 25, 2021, 10:27 PM IST

ನವದೆಹಲಿ: 72ನೇ ಗಣರಾಜ್ಯೋತ್ಸವ ಅಂಗವಾಗಿ ದೇಶದ 946 ಪೊಲೀಸರಿಗೆ ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಗಿದ್ದು, ಇದರಲ್ಲಿ ರಾಜ್ಯದ 19 ಪೊಲೀಸ್​ ಸಿಬ್ಬಂದಿ ಸೇರಿಕೊಂಡಿದ್ದಾರೆ.

ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದ್ದು, ಪ್ರಮುಖವಾಗಿ ಕಳೆದ ವರ್ಷ ಫೆ. 14ರಂದು ನಡೆದಿದ್ದ ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಸಿಆರ್​ಪಿಎಫ್​ನ ಸಹಾಯಕ ಸಬ್​ ಇನ್ಸ್​ಸ್ಪೆಕ್ಟರ್​ ಮೊಹನ್ ಲಾಲ್​, ಜಾರ್ಖಂಡ್​ನ ಮಾವೋವಾದಿಗಳ ವಿರುದ್ಧ ನಡೆದಿದ್ದ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದ ಬನುವಾ ಒರಾವೊನ್​ ಅವರಿಗೆ ಮರಣೋತ್ತರವಾಗಿ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ನೀಡಲಾಗಿದೆ.

ಇದನ್ನೂ ಓದಿ: ಪದ್ಮ ಪುರಸ್ಕಾರ​ 2021: ವಿಜೇತರ ಸಂಪೂರ್ಣ ಪಟ್ಟಿ ಇಂತಿದೆ..

ಕೇಂದ್ರ ಗೃಹ ಸಚಿವಾಲಯ ಪ್ರಶಸ್ತಿ ಘೋಷಣೆ ಮಾಡಿದ್ದು, 207 ಪೊಲೀಸ್ ಪದಕ, 89 ರಾಷ್ಟ್ರಪತಿ ಪೊಲೀಸ್ ಪದಕ ಪದಕ ಸೇರಿಕೊಂಡಿವೆ. ಇದರ ಜತೆಗೆ 650 ಪೊಲೀಸ್ ಪದಕ ಇವೆ.

ABOUT THE AUTHOR

...view details