ಇಟಾ(ಉತ್ತರ ಪ್ರದೇಶ): ಇಲ್ಲಿನ ಕೋವಿಡ್ ಅಲ್ಲದ ವಾರ್ಡ್ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 92 ವರ್ಷದ ವೃದ್ಧನೋರ್ವನ ಕಾಲು ಸರಪಳಿಯಿಂದ ಕಟ್ಟಿ ಹಾಕಿರುವ ಘಟನೆ ನಡೆದಿದ್ದು, ಇದೀಗ ಅದರ ಚಿತ್ರ ಎಲ್ಲೆಡೆ ವೈರಲ್ ಆಗಿದೆ.
ಉತ್ತರ ಪ್ರದೇಶದ ಇಟಾದಲ್ಲಿನ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, 92 ವರ್ಷದ ಕೈದಿಯೋರ್ವನಿಗೆ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಈ ವೇಳೆ ಬೆಡ್ ಮೇಲೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈ ವೇಳೆ ಅವರ ಕಾಲುಗಳನ್ನ ಸರಪಳಿಯಂದ ಕಟ್ಟಿಹಾಕಲಾಗಿದೆ. ಕೈಗಳನ್ನು ಬಟ್ಟೆ ಸಹಾಯದಿಂದ ಹಾಸಿಗೆಗೆ ಕಟ್ಟಿದ್ದಾರೆ. ಇಟಾ ಜೈಲಿನ ವಾರ್ಡನ್ ಅಶೋಕ್ ಯಾದವ್ ಈ ರೀತಿಯಾಗಿ ನಡೆದುಕೊಂಡಿದ್ದಾನೆಂದು ತಿಳಿದು ಬಂದಿದ್ದು, ತಕ್ಷಣವೇ ಆತನನ್ನ ಅಮಾನತು ಮಾಡಲಾಗಿದೆ.