ಕರ್ನಾಟಕ

karnataka

By ETV Bharat Karnataka Team

Published : Sep 21, 2023, 2:25 PM IST

ETV Bharat / bharat

ಬಾಡಿಗೆ ಕಾರು ಚಾಲಕನ ಖಾತೆಗೆ ಬ್ಯಾಂಕ್​ನಿಂದ ಕ್ರೆಡಿಟ್​ ಆಯ್ತು 9 ಸಾವಿರ ಕೋಟಿ ರೂ! ಮುಂದೇನಾಯ್ತು ಗೊತ್ತಾ?

9 ಸಾವಿರ ಕೋಟಿ ಹಣದಲ್ಲಿ 21 ಸಾವಿರ ರೂ ಹಣವನ್ನು ರಾಜಕುಮಾರ್​ ತಮ್ಮ ಸ್ನೇಹಿತನಿಗೆ ಕಳುಹಿಸಿದ್ದರು.

9,000 crores credited to rental car driver account from bank
ಬಾಡಿಗೆ ಕಾರು ಚಾಲಕನ ಖಾತೆಗೆ ಕ್ರೆಡಿಟ್​ ಆಯ್ತು 9 ಸಾವಿರ ಕೋಟಿ ರೂ

ಚೆನ್ನೈ:ಬಾಡಿಗೆ ಚಾಲಕನೋರ್ವನ ಬ್ಯಾಂಕ್​ ಖಾತೆಗೆ ತಮಿಳುನಾಡು ಮರ್ಕೆಂಟೈಲ್​ ಬ್ಯಾಂಕ್​ನಿಂದ 9 ಸಾವಿರ ಕೋಟಿ ರೂಪಾಯಿ ಜಮಾ ಆಗಿರುವ ಘಟನೆ ಇದೀಗ ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿದೆ. ಈ ಬಗ್ಗೆ ಕಾರು ಚಾಲಕ ಹಾಗೂ ಬ್ಯಾಂಕ್​ ಕಡೆಯಿಂದ ಲಾಯರ್​ಗಳು ಮಧ್ಯಸ್ಥಿಕೆವಹಿಸಿ ರಾಜಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಪಳನಿ ನೇಯ್ಕಪಟ್ಟಿ ನಿವಾಸಿ ರಾಜಕುಮಾರ್​, ಕೋಡಂಬಾಕ್ಕಂನಲ್ಲಿ ಸ್ನೇಹಿತರೊಬ್ಬರ ರೂಂನಲ್ಲಿದ್ದು, ಬಾಡಿಗೆ ಬಾಡಿಗೆ ಕಾರು ಓಡಿಸುತ್ತಿದ್ದಾರೆ. ಸೆ. 9 ರಂದು ಮಧ್ಯಾಹ್ನ 3 ಗಂಟೆ ಹೊತ್ತಿಗೆ ರಾಜಕುಮಾರ್​ ಅವರು ತಮ್ಮ ಕಾರಿನಲ್ಲಿ ಮಲಗಿದ್ದಾಗ ಮೊಬೈಲ್​ಗೆ ಮೆಸೇಜ್​ ಬಂದಿದೆ. ರಾಜಕುಮಾರ್​ ಅವರ ಬ್ಯಾಂಕ್​ ಖಾತೆಗೆ ಮರ್ಕೆಂಟೈಲ್​ ಬ್ಯಾಂಕ್​ನಿಂದ 9 ಸಾವಿರ ಕೋಟಿ ರೂಪಾಯಿ ಜಮಾ ಆಗಿದೆ ಎಂದು ಮೆಸೇಜ್​ ಮೂಲಕ ತಿಳಿಸಲಾಗಿತ್ತು.

ಅದರಲ್ಲಿದ್ದ ಸೊನ್ನೆಗಳನ್ನು ಲೆಕ್ಕ ಹಾಕಲಾಗದೆ ಎಷ್ಟು ಹಣ ಬಂದಿದೆ ಎಂದು ಗೊಂದಲದಲ್ಲಿದ್ದ ರಾಜಕುಮಾರ್,​ ಯಾರೋ ಮೋಸ ಮಾಡಲೆಂದೇ ಈ ರೀತಿಯ ಮೆಸೇಜ್​ ಕಳುಹಿಸಿದ್ದಾರೆ, ತಮ್ಮ ಖಾತೆಯಲ್ಲಿ 15 ರೂಪಾಯಿ ಮಾತ್ರ ಇದೆ ಎಂದುಕೊಂಡಿದ್ದರು. ಆದರೂ ಒಂದು ಬಾರಿ ನೋಡೋಣ ಎಂದು ತಮ್ಮ ಸ್ನೇಹಿತರೊಬ್ಬರಿಗೆ 21 ಸಾವಿರ ರೂಪಾಯಿ ಕಳುಹಿಸಿದ್ದಾರೆ. ಆಗ ನಿಜವಾಗಿಯೂ ಅವರ ಖಾತೆಗೆ 9 ಸಾವಿರ ಕೋಟಿ ರೂಪಾಯಿ ಹಣ ಬಂದಿರುವುದು ನಿಜ ಎಂದು ನಂಬಿ ಖುಷಿಯಾಗಿದ್ದಾರೆ.

ಆದರೆ ಅಷ್ಟರಲ್ಲಿ ತಮಿಳುನಾಡು ಮರ್ಕೆಂಟೈಲ್​ ಬ್ಯಾಂಕ್​ನ ಕೇಂದ್ರ ಕಚೇರಿ ತೂತುಕುಡಿಯಿಂದ ರಾಜಕುಮಾರ್​ ಅವರಿಗೆ ದೂರವಾಣಿ ಕರೆ ಬಂದಿದೆ. ಫೋನ್​ ಮಾಡಿದವರು ತಪ್ಪಾಗಿ ನಿಮ್ಮ ಖಾತೆಗೆ 9 ಸಾವಿ ಕೋಟಿ ಹಣ ಜಮೆಯಾಗಿದೆ. ಬ್ಯಾಂಕ್​ನಿಂದ ಜಮೆ ಆಗಿರುವ ಹಣವನ್ನು ಖರ್ಚು ಮಾಡದಂತೆ ಬ್ಯಾಂಕ್​ ಆಡಳಿತ ಮಂಡಳಿ ರಾಜಕುಮಾರ್​ ಅವರಿಗೆ ತಿಳಿಸಿದೆ.

ರಾಜಕುಮಾರ್​ ಅವರು ಸ್ನೇಹಿತನಿಗೆ ಕಳುಹಿಸಿದ 21 ಸಾವಿರ ಹೊರತುಪಡಿಸಿ, ಉಳಿದ ಎಲ್ಲಾ ಹಣವನ್ನು ತಕ್ಷಣವೇ ಹಿಂಪಡೆದಿದೆ. ಇದಾದ ನಂತರ ಬ್ಯಾಂಕ್​ನವರು ಉಳಿದ 21 ಸಾವಿರ ರೂಪಾಯಿಯನ್ನು ಹಿಂತಿರುಗಿಸುವಂತೆ ರಾಜಕುಮಾರ್​ ಅವರಿಗೆ ಬೆದರಿಕೆ ಹಾಕಲು ಆರಂಭಿಸಿತ್ತು ಎನ್ನಲಾಗಿದೆ. ರಾಜಕುಮಾರ್​ ಅವರು ಹತ್ತಿರದ ಪೊಲೀಸ್​ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ. ಆದರೆ ನಂತರ ತಮಿಳುನಾಡು ಮರ್ಕೆಂಟೈಲ್​ ಬ್ಯಾಂಕ್​ನ ಕಡೆಯಿಂದ ಹಾಗೂ ಕಾರು ಚಾಲಕ ರಾಜಕುಮಾರ್​ ಕಡೆಯಿಂದ ವಕೀಲರು ಚೆನ್ನೈನ ತ್ಯಾಗರಾಯನಗರದಲ್ಲಿರುವ ಶಾಖೆಗೆ ತೆರಳಿ ಸಂಧಾನ ಮಾತುಕತೆ ನಡೆಸಿದ್ದಾರೆ.

ಸಂಧಾನ ಮಾತುಕತೆಯಲ್ಲಿ ಬ್ಯಾಂಕ್​ನವರು ರಾಜಕುಮಾರ್​ ಅವರು ಈಗಾಗಲೇ 9 ಸಾವಿರ ಕೋಟಿ ರೂಪಾಯಿಯಲ್ಲಿ ಸ್ನೇಹಿತನಿಗೆ ನೀಡಿದ 21 ಸಾವಿರ ರೂಪಾಯಿಯನ್ನು ಹಿಂತಿರುಗಿಸುವುದು ಬೇಡ ಎನ್ನುವುದರ ಜೊತೆಗೆ ಅವರಿಗೆ ವಾಹನ ಸಾಲವನ್ನು ನೀಡುವುದಾಗಿಯೂ ಹೇಳಿದ್ದಾರೆ. ಆದರೆ ರಾಜಕುಮಾರ್​ ಆ ಆಫರ್​ ಅನ್ನು ಸ್ವೀಕರಿಸಿಲ್ಲ ಎಂದು ವರದಿಯಾಗಿದೆ. ಒಬ್ಬ ಕಾರು ಚಾಲಕನ ಖಾತೆಗೆ ಏಕಾಏಕಿ 9 ಸಾವಿರ ಕೋಟಿ ಹಣ ಜಮೆ ಆಗಿರುವುದು ಭಾರಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ :ಹಾಲಶ್ರೀ ವಿಚಾರಣೆ ಚುರುಕಾದ ಬೆನ್ನಲೇ ಕಂತೆ ಕಂತೆ ಹಣ ಪತ್ತೆ.. ವಿಡಿಯೋ ಮಾಡಿ ಸಿಸಿಬಿಗೆ ಪತ್ರ ಬರೆದ ವ್ಯಕ್ತಿ

ABOUT THE AUTHOR

...view details