ಕರ್ನಾಟಕ

karnataka

ETV Bharat / bharat

10 ಲಕ್ಷ ಗಂಟೆ ಕೆಲಸ ಮಾಡಿ ಹೊಸ ಸಂಸತ್​ ಭವನಕ್ಕೆ ಆಕರ್ಷಕ ಕಾರ್ಪೆಟ್​ ನೇಯ್ದ 900 ಕುಶಲಕರ್ಮಿಗಳು! - etv bharath kannada news

ಹೊಸ ಸಂಸತ್ ಕಟ್ಟಡದ ಲೋಕಸಭೆ ಮತ್ತು ರಾಜ್ಯಸಭೆಯ ಕಾರ್ಪೆಟ್‌ಗಾಗಿ 900 ಕುಶಲಕರ್ಮಿಗಳು ಸುಮಾರು 10 ಲಕ್ಷ ಮಾನವ ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ.

ಸಂಸತ್​ ಭವನ
ಸಂಸತ್​ ಭವನ

By

Published : May 28, 2023, 5:32 PM IST

ನವದೆಹಲಿ : ಉತ್ತರ ಪ್ರದೇಶದ ಸುಮಾರು 900 ಕುಶಲಕರ್ಮಿಗಳು ಸುಮಾರು 10 ಲಕ್ಷ ಮಾನವ ಗಂಟೆಗಳ ಕಾಲ ಶ್ರಮವಹಿಸಿ ಕೈಗಳಿಂದ ನೇಯ್ದ ರತ್ನಗಂಬಳಿಗಳು (ಕಾರ್ಪೆಟ್​) ನೂತನವಾಗಿ ನಿರ್ಮಾಣವಾದ ಭವ್ಯ ಸಂಸತ್ತಿನ ಕಟ್ಟಡದ ಲೋಕಸಭೆ ಮತ್ತು ರಾಜ್ಯಸಭೆಯ ಮಹಡಿಗಳನ್ನು ಅಲಂಕರಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರಿಂದು ಉದ್ಘಾಟಿಸಿರುವ ಹೊಸ ಸಂಸತ್ ಭವನದ ಉಭಯ ಸದನಗಳನ್ನು ಅಲಂಕರಿಸಿರುವ ರತ್ನಗಂಬಳಿಗಳಲ್ಲಿ ರಾಷ್ಟ್ರೀಯ ಪಕ್ಷಿ ನವಿಲು ಮತ್ತು ರಾಷ್ಟ್ರೀಯ ಹೂವಿನ ಕಮಲದ ಸೊಗಸಾದ ಚಿತ್ರಗಳನ್ನು ಬಿಡಿಸಲಾಗಿದೆ.

100 ವರ್ಷಕ್ಕೂ ಹೆಚ್ಚು ಹಳೆಯದಾದ ಭಾರತೀಯ ಕಂಪನಿ Obeetee ಕಾರ್ಪೆಟ್ಸ್​ನ ನೇಕಾರರು ಎರಡೂ ಸದನಗಳಿಗೆ ತಲಾ 150ಕ್ಕೂ ಹೆಚ್ಚು ಕಾರ್ಪೆಟ್‌ಗಳನ್ನು ತಯಾರಿಸಿ ಕೊಟ್ಟಿದ್ದಾರೆ. ಆಕರ್ಷಕ ಕಟ್ಟಡಕ್ಕೆ ಅನುಗುಣವಾಗಿ ಹೊಂದಿಸಲು ಅರೆ ವೃತ್ತದ ರೂಪದಲ್ಲಿ ಕಾರ್ಪೆಟ್‌ಗೆ ಹೊಲಿದಿದ್ದಾರೆ. ಕಟ್ಟಡದ ವಾಸ್ತುಶಿಲ್ಪವು 35,000 ಚದರ ಅಡಿ ವಿಸ್ತೀರ್ಣ ಹೊಂದಿದೆ ಎಂಬುದು ಇಲ್ಲಿ ಗಮನಾರ್ಹ.

"ನೇಕಾರರು ತಲಾ 17,500 ಚದರ ಅಡಿ ಅಳತೆಯ ಸಭಾಂಗಣಗಳಿಗೆ ರತ್ನಗಂಬಳಿ ರಚಿಸಬೇಕಾಗಿತ್ತು. ಇದು ವಿನ್ಯಾಸ ತಂಡಕ್ಕೆ ಸವಾಲಿನ ಕೆಲಸವೇ ಆಗಿತ್ತು. ಏಕೆಂದರೆ ಅವರು ಕಾರ್ಪೆಟ್ ಅನ್ನು ಪ್ರತ್ಯೇಕ ತುಂಡುಗಳಾಗಿ ನಿಖರವಾಗಿ ತಯಾರಿಸಬೇಕಾಗಿತ್ತು. ನೇಕಾರರು ಸಾಮರಸ್ಯದಿಂದ ಬೆರೆತು ಏಕೀಕೃತ ಕಾರ್ಪೆಟ್ ರಚಿಸಿದ್ದಾರೆ. ಇದು ಅವರ ಸೃಜನಶೀಲತೆಯನ್ನು ತೋರಿಸುತ್ತದೆ" ಎಂದು ಓಬೀಟೀ ಕಾರ್ಪೆಟ್ಸ್‌ ಅಧ್ಯಕ್ಷ ರುದ್ರ ಚಟರ್ಜಿ ತಿಳಿಸಿದರು.

ಇದನ್ನೂ ಓದಿ:ರಾಷ್ಟ್ರದ ಹೆಮ್ಮೆಯ ಪ್ರತೀಕ ರಾಜದಂಡವನ್ನು ಪ್ರಧಾನಿ ಮೋದಿಗೆ ಹಸ್ತಾಂತರಿಸಿದ ಅಧೀನಂ

ರಾಜ್ಯಸಭೆಯಲ್ಲಿ ಬಳಸಲಾದ ಕಾರ್ಪೆಟ್‌ ಬಣ್ಣಗಳು ಪ್ರಾಥಮಿಕವಾಗಿ ಕೋಕಮ್ ಕೆಂಪು ಛಾಯೆಯಿಂದ ಪ್ರೇರಿತವಾಗಿದ್ದರೆ, ಲೋಕಸಭೆಯ ನೋಟವು ಭಾರತೀಯ ನವಿಲಿನ ಗರಿಗಳಿಂದ ಪಡೆದ ಸ್ಫೂರ್ತಿಯೊಂದಿಗೆ ಹಸಿರು ಬಣ್ಣ ಆಧರಿಸಿದೆ. ಕಟ್ಟಡ ಕಾಮಗಾರಿಯ ಜಟಿಲತೆಗಳಿಗೆ ಒತ್ತು ನೀಡುತ್ತಾ ಕಾರ್ಪೆಟ್‌ಗಳನ್ನು ರಚಿಸಲು ಪ್ರತಿ ಚದರ ಇಂಚಿಗೆ 120 ಗಂಟುಗಳನ್ನು ನೇಯಲಾಗಿದೆ. ಒಟ್ಟು ಕಾರ್ಪೆಟ್‌ಗಳಲ್ಲಿ 600 ಮಿಲಿಯನ್ ಗಂಟುಗಳಿವೆ ಅವರು ಮಾಹಿತಿ ನೀಡಿದರು.

ಇದನ್ನೂ ಓದಿ:ಪ್ರಧಾನಿ ಮೋದಿ ಸಂಸತ್ ಭವನ ಉದ್ಘಾಟಿಸಿದ್ದನ್ನು ಸ್ವಾಗತಿಸಿದ ರಾಷ್ಟ್ರಪತಿ ಮುರ್ಮು

ಉತ್ತರ ಪ್ರದೇಶದ ಭದೋಹಿ ಮತ್ತು ಮಿರ್ಜಾಪುರ ಜಿಲ್ಲೆಗಳಿಂದ ಬಂದಿರುವ ನೇಕಾರರು ಹೊಸ ಸಂಸತ್ ಕಟ್ಟಡದ ಮೇಲ್ಮನೆ ಮತ್ತು ಕೆಳಮನೆಗಳಿಗೆ ಕಾರ್ಪೆಟ್ ಮಾಡಲು 10 ಲಕ್ಷ ಗಂಟೆಗಳನ್ನು ವ್ಯಯಿಸಿದ್ದಾರೆ. ನಾವು 2020 ರಲ್ಲಿ ಯೋಜನೆಯನ್ನು ಕೋವಿಡ್​ ಸಮಯದಲ್ಲಿ ಪ್ರಾರಂಭಿಸಿದೆವು. ನೇಯ್ಗೆ ಪ್ರಕ್ರಿಯೆಯು ಸೆಪ್ಟೆಂಬರ್ 2021 ರ ಹೊತ್ತಿಗೆ ಶುರುವಾಯಿತು. ಮೇ 2022 ರ ಹೊತ್ತಿಗೆ ಪೂರ್ಣಗೊಂಡಿತು. ಜೋಡಣೆ ಕಾರ್ಯ ನವೆಂಬರ್ 2022 ರಲ್ಲಿ ಆರಂಭವಾಯಿತು. ಪ್ರತಿ ಚದರಕ್ಕೆ 120 ಗಂಟುಗಳ ಹೆಚ್ಚಿನ ಸಾಂದ್ರತೆಯೊಂದಿಗೆ ಪ್ರತಿ ಕಾರ್ಪೆಟ್ ಅನ್ನು ರಚಿಸುವುದಕ್ಕೆ ಸರಿಸುಮಾರು ಏಳು ತಿಂಗಳು ತೆಗೆದುಕೊಂಡಿತು" ಎಂದು ಚಟರ್ಜಿ ಹೇಳಿದರು.

ಇದನ್ನೂ ಓದಿ:ನೂತನ ಸಂಸತ್​ ಭವನ ಉದ್ಘಾಟನೆಯಲ್ಲಿ ರಾಷ್ಟ್ರಪತಿಗಳು ಏಕೆ ಭಾಗವಹಿಸಬಾರದು?: ಮೋದಿಗೆ ಕಮಲ್​ ಹಾಸನ್​ ಪ್ರಶ್ನೆ

ABOUT THE AUTHOR

...view details