ತಿರುನೆಲ್ವೇಲಿ(ತಮಿಳುನಾಡು):ತಮಿಳುನಾಡಿನ ಕೆಲವೊಂದು ಜಿಲ್ಲೆಗಳಲ್ಲಿ ಕಳೆದ ಅಕ್ಟೋಬರ್ 6 ಮತ್ತು 9ರಂದು ನಡೆದಿದ್ದ ಮತದಾನದ ಮತ ಎಣಿಕೆ ನಿನ್ನೆ ನಡೆಯಿತು. ಈ ವೇಳೆ ಕೆಲ ಅಪರೂಪದ ರಿಸಲ್ಟ್ ಹೊರಬಿದ್ದಿವೆ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೆರಿಯನೈಕೆನ್ಪಾಳಂ (Periyanaickenpalayam) ವಾರ್ಡ್ನಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಡಿ. ಕಾರ್ತಿಕ್ ಕೇವಲ ಒಂದು ಮತ ಪಡೆದುಕೊಂಡಿದ್ದರೆ, ತಿರುನೆಲ್ವೇಲಿಯಲ್ಲಿ 90ರ ವೃದ್ಧೆ ಭರ್ಜರಿ ಗೆಲುವು ದಾಖಲು ಮಾಡಿದ್ದಾರೆ.
ತಿರುನೆಲ್ವೇಲಿ ಜಿಲ್ಲೆಯ ಪಾಳೆಯಂಕೋಟೈ ವ್ಯಾಪ್ತಿಯ ಶಿವಂತಿಪಟ್ಟಿ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ 90 ವರ್ಷದ ವೃದ್ಧೆ ಸ್ಪರ್ಧೆ ಮಾಡಿದ್ದರು. ಈ ಚುನಾವಣೆಯಲ್ಲಿ ಭರ್ಜರಿ ಮತ ಪಡೆದುಕೊಂಡು ಗೆಲುವು ಸಾಧಿಸಿದರೆ, ಇವರ ಎದುರಾಳಿಗಳಾಗಿ ಸ್ಪರ್ಧೆ ಮಾಡಿದ್ದ ಮತ್ತಿಬ್ಬರು ಠೇವಣಿ ಕಳೆದುಕೊಂಡಿದ್ದಾರೆ.