ಕರ್ನಾಟಕ

karnataka

ETV Bharat / bharat

ಮಧ್ಯಪ್ರದೇಶದ ವಿಧಾನಸಭೆ: 90 ಶಾಸಕರ ಮೇಲೆ ಕ್ರಿಮಿನಲ್ ಕೇಸ್, 205 ಶಾಸಕರು ಕುಬೇರರು​: ಎಡಿಆರ್ ವರದಿ

ಈ ಬಾರಿ ಮಧ್ಯಪ್ರದೇಶದ ವಿಧಾನಸಭೆಗೆ ಆಯ್ಕೆಯಾದ 90 ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣಗಳು ಇವೆ. ಅದರಲ್ಲಿ 34 ವಿಜೇತ ಅಭ್ಯರ್ಥಿಗಳ ಮೇಲೆ ಗಂಭೀರ ಅಪರಾಧ ಪ್ರಕರಣಗಳಿವೆ ಎಂದು ಎಡಿಆರ್ ವರದಿ ತಿಳಿಸಿದೆ.

Etv Bharat
Etv Bharat

By ETV Bharat Karnataka Team

Published : Dec 7, 2023, 10:54 AM IST

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶ ವಿಧಾನಸಭೆಗೆ ಹೊಸದಾಗಿ ಚುನಾಯಿತರಾದ 230 ಜನಪ್ರತಿನಿಧಿಗಳ ಪೈಕಿ 90 ಶಾಸಕರ ವಿರುದ್ಧ ಅಪರಾಧ ಪ್ರಕರಣಗಳಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಬಿಡುಗಡೆ ಆಗಿರುವ ವರದಿ ತಿಳಿಸಿದೆ.

ವರದಿಯ ಪ್ರಕಾರ, ರಾಜ್ಯದ 230 ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದ 90 ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ. 34 ವಿಜೇತ ಅಭ್ಯರ್ಥಿಗಳು, ಅಂದರೆ ಸುಮಾರು ಶೇಕಡಾ 15ರಷ್ಟು ಶಾಸಕರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿರುವ ಬಗ್ಗೆ ಘೋಷಿಸಿಕೊಂಡಿದ್ದಾರೆ. 51 ಬಿಜೆಪಿ ಶಾಸಕರು ಹಾಗೂ 38 ಕಾಂಗ್ರೆಸ್‌ ಶಾಸಕರ ಮೇಲೆ ಕ್ರಿಮಿನಲ್​ ಕೇಸ್​ಗಳಿವೆ. 2018ರ ವಿಧಾನಸಭಾ ಚುನಾವಣೆಯಲ್ಲಿ 94 ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದರು. ಅದರಲ್ಲಿ 47 ಜನಪ್ರತಿನಿಧಿಗಳು ವಿರುದ್ಧ ಗಂಭೀರ ಅಪರಾಧದ ಆರೋಪಗಳನ್ನು ಎದುರಿಸುತ್ತಿದ್ದರು ಎಂದು ವರದಿ ತಿಳಿಸಿದೆ.

27 ಮಹಿಳಾ ಅಭ್ಯರ್ಥಿಗಳು ಆಯ್ಕೆ:2023ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ಮಹಿಳಾ ಶಾಸಕರ ಸಂಖ್ಯೆ ಸ್ವಲ್ಪ ಹೆಚ್ಚಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 2023ರಲ್ಲಿ 27 ಮಹಿಳಾ ಅಭ್ಯರ್ಥಿಗಳು ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. 2018ರ ವಿಧಾನಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ, ಪ್ರಸ್ತುತ ಆರು ಮಹಿಳಾ ಶಾಸಕರ ಸಂಖ್ಯೆ ಹೆಚ್ಚಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ 230 ಕ್ಷೇತ್ರಗಳಲ್ಲಿ 21 ಮಹಿಳಾ ಶಾಸಕರಾಗಿ ಆಯ್ಕೆಯಾಗಿದ್ದರು, ಸುಮಾರು 9 ಪ್ರತಿಶತದಷ್ಟು ಮಹಿಳೆಯರು ಇದ್ದರು. 2013ರಲ್ಲಿ ಒಟ್ಟು 30 ಮಹಿಳಾ ಸದಸ್ಯರು ವಿಧಾನಸಭೆಗೆ ಆಯ್ಕೆಯಾಗಿದ್ದರು ಎಂದು ವರದಿ ಹೇಳಿದೆ.

ರಾಜ್ಯದಲ್ಲಿ ಮಹಿಳಾ ಶಾಸಕರ ಸಂಖ್ಯೆ ಕಳೆದ ಚುನಾವಣೆಗಿಂತ ಸ್ವಲ್ಪ ಹೆಚ್ಚಿದ್ದರೂ, ರಾಜ್ಯ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯವು ಶೇ.33 ಕ್ಕಿಂತ ಹಿಂದಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 27 ಮಹಿಳೆಯರಿಗೆ ಮತ್ತು ಕಾಂಗ್ರೆಸ್​ನ 30 ಮಹಿಳೆಯರಿಗೆ ಟಿಕೆಟ್ ನೀಡಿತ್ತು. 57 ಮಹಿಳಾ ಅಭ್ಯರ್ಥಿಗಳಿಗೆ (ಶೇ. 47) ಸ್ಪರ್ಧೆಗೆ ಅವಕಾಶ ನೀಡಲಾಗಿತ್ತು. ಅದರ 21 ಮಹಿಳಾ ಅಭ್ಯರ್ಥಿಗಳು ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಅದರಲ್ಲಿ 12 ಬಿಜೆಪಿಯಿಂದ ಹಾಗೂ ಕಾಂಗ್ರೆಸ್​ನಿಂದ ಆರು ಮಹಿಳಾ ಅಭ್ಯರ್ಥಿಗಳು ಈ ಬಾರಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತು.

2018ರಲ್ಲಿ 27 ಮಹಿಳಾ ಅಭ್ಯರ್ಥಿಗಳಲ್ಲಿ 14 ಮಹಿಳೆಯರು ಶಾಸಕರಾಗಿ ಗೆದ್ದಿದ್ದರು. 2018ಕ್ಕೆ ಹೋಲಿಸಿದರೆ, 2023ರಲ್ಲಿ ಮಹಿಳಾ ಮತದಾರರ ಸಂಖ್ಯೆ ಶೇಕಡಾ ಎರಡರಷ್ಟು ಹೆಚ್ಚಾಗಿದ್ದು, 74 ಪ್ರತಿಶತ ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.

205 ಶಾಸಕರು ಕುಬೇರರು: ರಾಜ್ಯದಲ್ಲಿ ಹೊಸದಾಗಿ ಚುನಾಯಿತರಾದ 205 ಶಾಸಕರು (ಶೇ. 89) ‘ಕೋಟ್ಯಧಿಪತಿ’ ಎಂದು ವರದಿ ಬಹಿರಂಗಪಡಿಸಿದೆ. ಈ ಕೋಟ್ಯಧಿಪತಿಗಳ ಪೈಕಿ 144 ಬಿಜೆಪಿ ಶಾಸಕರು ಹಾಗೂ 61 ಕಾಂಗ್ರೆಸ್‌ನ ಶಾಸಕರು ಇದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 187 ಶಾಸಕರು ಕೋಟ್ಯಧಿಪತಿಗಳಾಗಿದ್ದರು. ಈ ಬಾರಿ ಮಧ್ಯಪ್ರದೇಶ ರಾಜ್ಯದಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಾಗಿದೆ.

ರತ್ಲಾಮ್ ಜಿಲ್ಲೆಯ ರತ್ಲಂ ನಗರ ಕ್ಷೇತ್ರದ ಬಿಜೆಪಿಯ ಚೆತನ್ಯ ಕಶ್ಯಪ್ ರಾಜ್ಯದ ಶ್ರೀಮಂತ ಶಾಸಕರಾಗಿದ್ದು, ಅವರ ಒಟ್ಟು ಆಸ್ತಿ ರೂ. 296 ಕೋಟಿ ಇದೆ. ಕಟ್ನಿ ಜಿಲ್ಲೆಯ ವಿಜಯರಾಘವಗಢ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಸಂಜಯ್ ಸತ್ಯೇಂದ್ರ ಪಾಠಕ್ ಅವರು 242 ಕೋಟಿ ರೂ. ಗೂ ಅಧಿಕ ಆಸ್ತಿ ಹೊಂದಿರುವ ಎರಡನೇ ಶ್ರೀಮಂತ ಶಾಸಕರಾಗಿದ್ದಾರೆ. ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಶಾಸಕ ಕಮಲ್ ನಾಥ್ ಒಟ್ಟು ಆಸ್ತಿ ರೂ. 134 ಕೋಟಿ ಇದೆ ಎಂದು ವರದಿ ಹೇಳಿದೆ.

161 ವಿಜೇತ ಅಭ್ಯರ್ಥಿಗಳು ಪದವೀಧರರು:ಮಧ್ಯಪ್ರದೇಶದ ವಿಧಾನಸಭೆಗೆ ಆಯ್ಕೆಯಾದ 161 ಶಾಸಕರು ಪದವೀಧರರಾಗಿದ್ದಾರೆ. 64 ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆಯನ್ನು 5 ನೇ ತರಗತಿ ಮತ್ತು 12 ನೇ ತರಗತಿ ಎಂದು ಘೋಷಣೆ ಮಾಡಿದ್ದಾರೆ. ಮೂವರು ವಿಜೇತ ಅಭ್ಯರ್ಥಿಗಳು ಡಿಪ್ಲೊಮಾ ಪಾಸಾಗಿದ್ದಾರೆ. ಇಬ್ಬರು ಕೇವಲ ಸಾಕ್ಷ ಓದು ಮತ್ತು ಬರೆಯಲು ಬರುವಂತಹವರು ಇದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 2018ರಲ್ಲಿ ರಾಜ್ಯದಲ್ಲಿ ಪದವಿ ಪಡೆದಿರುವ ಶಾಸಕರ ಪ್ರಮಾಣ ಶೇಕಡಾ 44 ರಷ್ಟಿತ್ತು ಎಂದು ಎಡಿಆರ್ ವರದಿ ತಿಳಿಸಿದೆ. ಎಡಿಆರ್ ಒಂದು ಲಾಭ ರಹಿತ ಸಂಸ್ಥೆಯಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಅಪರಾಧ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನೆಲೆಯನ್ನು ಬಹಿರಂಗಪಡಿಸುತ್ತದೆ.

ಇದನ್ನೂ ಓದಿ:ತೆಲಂಗಾಣ: 6 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಅಂದಾಜು ವಾರ್ಷಿಕ 70 ಸಾವಿರ ಕೋಟಿ ರೂ.!

ABOUT THE AUTHOR

...view details