ಕರ್ನಾಟಕ

karnataka

ETV Bharat / bharat

ವಿಡಿಯೋ: ಮಣ್ಣಿನ ಕುಂಡದಲ್ಲಿ ನೂರಾರು ಹಾವುಗಳು ಪತ್ತೆ!

ಮನೆಯಲ್ಲಿದ್ದ ಮಣ್ಣಿನ ಕುಂಡದಲ್ಲಿ ಸುಮಾರು ನೂರಕ್ಕೂ ಹೆಚ್ಚು ನಾಗರ ಹಾವಿನ ಮರಿಗಳು ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

cobra snakes found in house of Ambedkar Nagar district, cobra snake found in Uttar Pradesh, Uttar Pradesh cobra news, ಅಂಬೇಡ್ಕರ್ ನಗರ ಜಿಲ್ಲೆಯ ಮನೆಯಲ್ಲಿ ನಾಗರ ಹಾವು ಪತ್ತೆ, ಉತ್ತರ ಪ್ರದೇಶದಲ್ಲಿ ನಾಗರ ಹಾವು ಮರಿಗಳು ಪತ್ತೆ, ಉತ್ತರ ಪ್ರದೇಶ ನಾಗರಹಾವು ಸುದ್ದಿ,
ಮಣ್ಣಿನ ಕುಂಡದಲ್ಲಿ ಪತ್ತೆಯಾದ ನೂರಾರು ನಾಗರ ಹಾವಿನ ಮರಿಗಳು

By

Published : May 12, 2022, 11:35 AM IST

ಅಂಬೇಡ್ಕರ್ ನಗರ(ಯುಪಿ):ಇಲ್ಲಿನಮನೆಯೊಂದರ ಮಣ್ಣಿನ ಮಡಕೆಯಲ್ಲಿ ನೂರಕ್ಕೂ ಹೆಚ್ಚು ಹಾವುಗಳು ಕಂಡುಬಂದಿವೆ. ಇವು ನಾಗರಹಾವಿನ ಜಾತಿಗೆ ಸೇರಿದವು ಎಂದು ಹೇಳಲಾಗುತ್ತಿದೆ.


ಜಿಲ್ಲೆಯ ಆಲಾಪುರ್ ತಾಲೂಕಿನ ಮದುವಾನ ಗ್ರಾಮದ ಮನೆಯಲ್ಲಿ ಹಳೆಯ ಮಣ್ಣಿನ ಕುಂಡವೊಂದರಲ್ಲಿ ವಿಷಕಾರಿ ಹಾವಿನ ಮರಿಗಳ ಹಿಂಡೇ ಕಾಣಿಸಿಕೊಂಡಿವೆ. ಈ ಹಾವಿನ ಮರಿಗಳನ್ನು ವೀಕ್ಷಿಸಲು ಗ್ರಾಮದ ಜನರು ಅಪಾರ ಸಂಖ್ಯೆಯಲ್ಲಿ ಬೀಡುಬಿಟ್ಟಿದ್ದರು.

ಇದನ್ನೂ ಓದಿ:ನೋಡಿ: ಕೋಳಿ ಸಮೇತ 8 ಮೊಟ್ಟೆ ನುಂಗಿ, ಹೊರಹಾಕಿದ ನಾಗರಹಾವು!

ಕೆಲವರು ಇದನ್ನು ಪ್ರಕೃತಿಯ ವಿಕೋಪ ಎಂದು ಕರೆದರೆ, ಇನ್ನೂ ಕೆಲವರು ಸರ್ಪದೋಷ ಎನ್ನುತ್ತಿದ್ದಾರೆ. ಗ್ರಾಮದ ನಿವಾಸಿ ಅನಿಲ್‌ಕುಮಾರ್‌ ಮಾತನಾಡಿ, 'ಹಾವಿನ ಹಾವಳಿಯಿಂದ ಇಡೀ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ' ಎಂದರು.

ABOUT THE AUTHOR

...view details