ಕಣ್ಣೂರು (ಕೇರಳ):ಕರುಣೆಯಿಲ್ಲದ ತಾಯಿಯೊಬ್ಬಳು ಹೆತ್ತ ಮಗಳನ್ನೇ ಕತ್ತು ಹಿಸುಕಿ ಕೊಲೆಗೈದಿರುವ ಅಮಾನವೀಯ ಘಟನೆ ಕಣ್ಣೂರಿನಲ್ಲಿ ನಡೆದಿದೆ. ಇಲ್ಲಿನ ಚಲತ್ ಕೂಜ್ಹಿಕುಣ್ಣು ನಿವಾಸಿ ವಾಹಿದಾ ಎಂಬಾಕೆ ತನ್ನ 9 ವರ್ಷದ ಆವಂತಿಕಾ ಎಂಬ ಮಗಳನ್ನು ಕೊಲೆಗೈದ ಕಟುಕಿ.
9 ವರ್ಷದ ಮಗಳ ಕತ್ತು ಹಿಸುಕಿ ಕೊಲೆಗೈದ ಹೃದಯಹೀನ ತಾಯಿ
ಹೆಣ್ಣು ಮಗಳಿಗೆ ನೆರಳಾಗಿ ನಿಲ್ಲಬೇಕಿದ್ದ ತಾಯಿಯೇ ಮಗುವಿನ ಕತ್ತುಹಿಸುಕಿ ಕೊಲೆ ಮಾಡಿದ್ದಾಳೆ. 9 ವರ್ಷದ ಮಗಳನ್ನು ಬೆಳಗ್ಗಿನ ಜಾವ ಕೊಲೆ ಮಾಡಿದ್ದು, ಆರೋಪಿ ತಾಯಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
9 ವರ್ಷದ ಮಗಳ ಕತ್ತುಹಿಸುಕಿ ಕೊಲೆಗೈದ ಹೃದಯಹೀನ ತಾಯಿ
ಬೆಳಗ್ಗಿನ ಜಾವ ಘಟನೆ ನಡೆದಿದ್ದು, ತಂದೆ ಮಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಅಷ್ಟು ಹೊತ್ತಿಗೆ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಮಗಳ ತಂದೆ ರಾಜೇಶ್ ಕಣ್ಣೂರು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನನ್ವಯ ಪೊಲೀಸರು ತಾಯಿ ವಾಹಿದಾಳನ್ನು ವಶಕ್ಕೆ ಪಡೆದಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಇದನ್ನೂ ಓದಿ:ಮದುವೆಯಾಗಿ ಬೇರೆಯಾಗಲು ಇಷ್ಟವಿಲ್ಲ.. ಮಂಡ್ಯದಲ್ಲಿ ಆತ್ಮಹತ್ಯೆಗೆ ಶರಣಾದ ಅವಳಿ ಸಹೋದರಿಯರು!