ನೈನಿತಾಲ್(ಉತ್ತರಾಖಂಡ) :ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಉತ್ತರಾಖಂಡದ 9 ವರ್ಷದ ಬಾಲಕಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಯೋಗ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಉತ್ತರಾಖಂಡದ ನೈನಿತಾಲ್‌ನ ದೀಪಾ(9) ರಾಷ್ಟ್ರೀಯ ಯೋಗ ಒಲಿಂಪಿಯಾಡ್‌ಗೆ ಆಯ್ಕೆಯಾಗಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದಂದು ದೆಹಲಿಯಲ್ಲಿ ಈ ಒಲಿಂಪಿಯಾಡ್ ನಡೆಯಲಿದೆ. ಇದರಲ್ಲಿ ಪ್ರಧಾನಿ ಮೋದಿ ಕೂಡ ಭಾಗವಹಿಸಲಿದ್ದಾರೆ. ಈ ವೇಳೆ ಮೋದಿ ಅವರ ಜೊತೆ ಪ್ರಧಾನ ವೇದಿಕೆಯಲ್ಲಿ ದೀಪಾ ಕೂಡ ಯೋಗ ಪ್ರದರ್ಶನ ನೀಡಲಿದ್ದಾಳೆ.
ರಾಷ್ಟ್ರೀಯ ಯೋಗ ಒಲಿಂಪಿಯಾಡ್‌ಗೆ ದೀಪಾ ಆಯ್ಕೆಯಾಗಿದ್ದಕ್ಕೆ ಕುಟುಂಬ ಮತ್ತು ಆಕೆಯ ಊರಲ್ಲಿ ಸಂತಸದ ಅಲೆ ಎದ್ದಿದೆ. ಯೋಗ ದಿನದಂದು ದೀಪಾ ಅವರು ತಮ್ಮ ತರಬೇತುದಾರ ಕಾಂಚನ್ ರಾವತ್ ಮತ್ತು ಕುಟುಂಬ ಸದಸ್ಯರೊಂದಿಗೆ ದೆಹಲಿಗೆ ತೆರಳಲಿದ್ದಾರೆ.
ನೈನಿತಾಲ್‌ನ ಕೃಷ್ಣಾಪುರ ಪ್ರದೇಶದ ನಿವಾಸಿಯಾಗಿರುವ ದೀಪಾ ಅವರು ಅಟಲ್ ಉತ್ಕೃಷ್ಟ್ ಸರ್ಕಾರಿ ಬಾಲಕಿಯರ ಇಂಟರ್ ಕಾಲೇಜಿನಲ್ಲಿ 6ನೇ ತರಗತಿ ಓದುತ್ತಿದ್ದಾರೆ. ಎನ್‌ಸಿಇಆರ್‌ಟಿ ಆಯೋಜಿಸಿದ್ದ ರಾಜ್ಯಮಟ್ಟದ ಯೋಗ ಒಲಿಂಪಿಯಾಡ್‌ನಲ್ಲಿ ದೀಪಾ ಭಾಗವಹಿಸಿದ್ದರು. ಇದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರಿಂದ ದೀಪಾ ರಾಷ್ಟ್ರೀಯ ಯೋಗ ಒಲಿಂಪಿಯಾಡ್‌ನಲ್ಲಿ ಸ್ಥಾನ ಪಡೆದರು.
ಓದಿ:ಮಮತಾಗೆ ಮತ್ತೆ ಹಿನ್ನಡೆ.. ಶರದ್ ಪವಾರ್ ಬಳಿಕ ರಾಷ್ಟ್ರಪತಿ ಕಣದಿಂದ ಹಿಂದೆ ಸರಿದ ಫಾರೂಖ್ ಅಬ್ದುಲ್ಲಾ