ಸಮಯ ತೀರಾ ಹದೆಗಟ್ಟಿದೆ. ದಿನದ 24 ಗಂಟೆಯೂ ಮನೆಯಲ್ಲಿ ಕುಳಿತುಕೊಳ್ಳುವುದರಿಂದ ಅಸಹಾಯಕರಾಗಬಹುದು, ವಿಶೇಷವಾಗಿ ನಿಮ್ಮ ಪ್ರೀತಿಪಾತ್ರರು ಬಳಲುತ್ತಿರುವುದನ್ನು ನೋಡಿದಾಗ. ನಿಮ್ಮ ಸ್ನೇಹಿತರು, ಸಂಬಂಧಿಕರು ಅಥವಾ ನೆರೆಹೊರೆಯವರು ಸೋಂಕಿಗೆ ಒಳಗಾಗಿದ್ದರೆ, ನೀವು ಅವರನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಆದರೆ, ನೀವು ಅವರನ್ನು ಕಾಳಜಿ ವಹಿಸುವ ಹಲವು ಮಾರ್ಗಗಳಿವೆ. ನೀವು ಇತರರಿಗೆ ಸಹಾಯ ಮಾಡುವ ಕೆಲವು ವಿಧಾನಗಳು ಇಲ್ಲಿವೆ.
1.ಅವರಿಗೆ ಮೇಲೇಳುವ ಭರವಸೆ ನೀಡಿ
ನಿಮ್ಮ ಸುತ್ತಲಿನ ಜನರು ಕೋವಿಡ್ನಿಂದ ಬಳಲುತ್ತಿದ್ದಾರೆ ಎಂದು ನಿಮಗೆ ತಿಳಿದಿದ್ದರೆ, ಅವರಿಗೆ ಕರೆ ಮಾಡಿ ಅಥವಾ ಅವರಿಗೆ ಮೆಸೇಜ್ ಮಾಡಿ. ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಅವರೂ ಬಯಸುತ್ತಾರೆ. ಸೋಂಕಿತ ವ್ಯಕ್ತಿಯು ಸುತ್ತಲಿನ ಕೆಟ್ಟ ಪರಿಸ್ಥಿತಿ ನೋಡಿ ಭಯಭೀತರಾಗಬಹುದು ಅಥವಾ ಉದ್ವಿಗ್ನರಾಗಬಹುದು. ಇಂಥ ವೇಳೆ ನೀವು ಚೆನ್ನಾಗಿರುತ್ತೀರಾ ಎಂದು ಅವರಿಗೆ ಭರವಸೆ ನೀಡಬಹುದು ಮತ್ತು ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಎಂದು ಧೈರ್ಯ ತುಂಬ ಬಹುದು.
2. ಸಕಾರಾತ್ಮಕತೆ ಪಸರಿಸಿ:
ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯು ನಕಾರಾತ್ಮಕ ಆಲೋಚನೆಗಳನ್ನು ಮಾಡುವ ಸಾಧ್ಯತೆಯಿದೆ. ಹೀಗಾಗಿ ಕೆಲವು ಸಕಾರಾತ್ಮಕ ಚಿಂತನೆ ಬೆಳೆಸುವ ವೈಬ್‌ಗಳನ್ನು ನೀವು ಅವರಿಗೆ ಸೂಚಿಸುವ ಮೂಲಕ ಅವರಿಗೆ ಸಹಾಯ ಮಾಡಲು ಉತ್ತಮ ಮಾರ್ಗವಾಗಿದೆ. ಅವರಲ್ಲಿ ಭಯ ಉಂಟುಮಾಡುವ ಘಟನೆಗಳನ್ನು ಅವರೊಂದಿಗೆ ಚರ್ಚಿಸಬೇಡಿ. ನೀವು ಅವರಿಗೆ ಚಲನಚಿತ್ರ, ಅಥವಾ ಒಳ್ಳೆಯ ಹಾಡುಗಳನ್ನ ಕೇಳಲು ಸಲಹೆ ನೀಡಿ. ನಿಮ್ಮ ನೆನಪುಗಳನ್ನು ಅವರೊಂದಿಗೆ ಹಂಚಿಕೊಂಡು, ಅವರನ್ನು ನಗಿಸಬಹುದು ಅಥವಾ ನೀವು ಅವರೊಂದಿಗೆ ಕಳೆದ ಮರೆಯಲಾಗದ ನೆನಪುಗಳ ಬಗ್ಗೆ ಮಾತನಾಡಬಹುದು.
3. ಅಗತ್ಯತೆ ಪರಿಶೀಲಿಸಿ ಸಹಾಯ ಮಾಡಿ:
ಆಸ್ಪತ್ರೆಯ ಹಾಸಿಗೆಗಳು, ಆಮ್ಲಜನಕ ಸಿಲಿಂಡರ್, ಚುಚ್ಚುಮದ್ದು ಅಥವಾ ಔಷಧಗಳನ್ನು ಹುಡುಕುವ ವ್ಯಕ್ತಿಯೊಂದಿಗೆ ನೀವು ಸಂಪರ್ಕಕ್ಕೆ ಬಂದರೆ, ಅವುಗಳನ್ನು ಪರಿಶೀಲಿಸಿದ ಲೀಡ್‌ಗಳನ್ನು ಕಳುಹಿಸಿ. ಅವು ಲಭ್ಯವಿರುವ ಅಡ್ರೆಸ್ ಅಥವಾ ದೂರವಾಣಿ ಸಂಖ್ಯೆಯನ್ನು ಮೊದಲು ನೀವೇ ಪರಿಶೀಲಿಸಬಹುದು ಮತ್ತು ನಂತರ ಅದನ್ನು ಫಾರ್ವರ್ಡ್ ಮಾಡಬಹುದು, ಆದ್ದರಿಂದ ಅವರು ಪ್ರತಿಯೊಂದು ಸಂಖ್ಯೆಗೆ ಕರೆ ಮಾಡಬೇಕಾಗಿಲ್ಲ. ಈ ರೀತಿಯಾಗಿ ನೀವು ಸ್ವಲ್ಪ ಸಮಯವನ್ನು ಉಳಿಸಲು ಮತ್ತು ತ್ವರಿತವಾಗಿ ಸಹಾಯ ಪಡೆಯಲು ಅವರಿಗೆ ನೆರವಾಗಬಹುದು.
4. ಮಾಹಿತಿ ಹೆಚ್ಚಿಸಿ:
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮವು ದೊಡ್ಡ ಸಹಾಯ ಮಾಡುತ್ತಿದೆ. ಟ್ವಿಟರ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಇತ್ಯಾದಿಗಳು ವೈದ್ಯಕೀಯ ನೆರವು ಹುಡುಕುವ ಜನರನ್ನು ಇತರ ಜನರೊಂದಿಗೆ ಸಂಪರ್ಕಿಸಲು ಸಹಾಯ ಮಾಡಿವೆ. ನೀವು ಉಪಯುಕ್ತವಾದ ಪೋಸ್ಟ್‌ಗಳನ್ನು,ಮಾಹಿತಿಗಳನ್ನು ಹೆಚ್ಚು ಹಂಚಿಕೊಳ್ಳಿ.
5. ಹೋಮ್ ಐಸೋಲೇಷನ್ನಲ್ಲಿರುವವರಿಗೆ ಆಹಾರ ತಯಾರಿಸಿ: