ಕರ್ನಾಟಕ

karnataka

ETV Bharat / bharat

ನಿಲ್ದಾಣದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು.. 9 ರೈಲುಗಳ ಸಂಚಾರ ರದ್ದು - ಚೆನ್ನೈ ಹೌರಾ ಮುಖ್ಯ ಮಾರ್ಗ

ರಾಜಮಹೇಂದ್ರವರಂ ರೈಲು ನಿಲ್ದಾಣದ ಬಳಿ ಬುಧವಾರ ಬೆಳಗಿನಜಾವ 3 ಗಂಟೆಗೆ ಗೂಡ್ಸ್ ರೈಲು ಹಳಿತಪ್ಪಿದೆ. ವಿಜಯವಾಡದಿಂದ ರೈಲ್ವೆ ಅಧಿಕಾರಿಗಳ ತಂಡ ಆಗಮಿಸಿದ್ದು, ರೈಲು ಮಾರ್ಗದಲ್ಲಿ ತೀವ್ರ ದುರಸ್ತಿ ಕಾರ್ಯ ಕೈಗೊಂಡಿದೆ.

Goods train derailed near Rajamahendravaram station
ರಾಜಮಹೇಂದ್ರವರಂ ನಿಲ್ದಾಣದ ಬಳಿ ಹಳಿತಪ್ಪಿದ ಗೂಡ್ಸ್ ರೈಲು

By

Published : Nov 9, 2022, 2:07 PM IST

Updated : Nov 9, 2022, 3:14 PM IST

ಅಮರಾವತಿ (ಆಂಧ್ರಪ್ರದೇಶದ) : ರಾಜಮಹೇಂದ್ರವರಂ ರೈಲು ನಿಲ್ದಾಣದ ಬಳಿಯ ಮುಖ್ಯಮಾರ್ಗದಲ್ಲಿ ಬುಧವಾರ ಬೆಳಗ್ಗೆ 3 ಗಂಟೆಗೆ ಗೂಡ್ಸ್ ರೈಲು ಹಳಿತಪ್ಪಿದೆ. ಹಳಿತಪ್ಪಿದ ಗೂಡ್ಸ್ ರೈಲಿನಿಂದಾಗಿ ಚೆನ್ನೈ ಹೌರಾ ಮುಖ್ಯ ಮಾರ್ಗದಲ್ಲಿ ಹೊರಡುವ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

ದುರಸ್ತಿ ಕಾರ್ಯ ತೀವ್ರ:ನೂರಾರು ರೈಲುಗಳು ಸಂಚರಿಸಬೇಕಿದ್ದ ಚೆನ್ನೈ-ಹೌರಾ ಮಾರ್ಗದಲ್ಲಿ ಕೇವಲ ಒಂದು ಮಾರ್ಗವನ್ನು ಮಾತ್ರ ತೆರೆಯಲಾಗಿದೆ. ಅಪಘಾತ ಯಾವ ಕಾರಣಕ್ಕೆ ಸಂಭವಿಸಿದೆ ಎಂಬುದು ಗೊತ್ತಾಗಿಲ್ಲ. ವಿಜಯವಾಡದಿಂದ ರೈಲ್ವೆ ಅಧಿಕಾರಿಗಳ ತಂಡ ಆಗಮಿಸಿದ್ದು, ರೈಲು ಅಪಘಾತದ ಮಾರ್ಗದಲ್ಲಿ ದುರಸ್ತಿ ಕಾರ್ಯ ಚುರುಕಿನಿಂದ ನಡೆದಿದೆ.

ಇದರಿಂದ ದಕ್ಷಿಣ ಮಧ್ಯೆ ರೈಲ್ವೆಯು ವಿಜಯವಾಡ-ವಿಶಾಖಪಟ್ಟಣಂ ವಿಭಾಗದಲ್ಲಿ ಒಂಭತ್ತು ಪ್ರಮುಖ ರೈಲುಗಳನ್ನು ಇಂದು ರದ್ದುಗೊಳಿಸಿದೆ. ಇನ್ನೂ 3 ರೈಲುಗಳನ್ನು ವಿವಿಧ ನಿಲ್ದಾಣಗಳ ನಡುವೆ ರದ್ದುಗೊಳಿಸಿದರೆ, ಇನ್ನೊಂದನ್ನು ಎರಡು ಗಂಟೆಗಳ ಕಾಲ ಮರುಹೊಂದಾಣಿಕೆ ಮಾಡಲಾಗಿದೆ ಎಂದು ಎಸ್‌ಸಿಆರ್ ವಿಜಯವಾಡ ವಿಭಾಗದ ಪಿಆರ್ ಒ ನುಸ್ರತ್ ಎಂ ಮಂಡ್ರುಪ್ಕರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಹಳಿ ತಪ್ಪಿದ ಗೂಡ್ಸ್ ರೈಲು

ಗೂಡ್ಸ್ ರೈಲು ಹಳಿ ತಪ್ಪಿದ್ದಕ್ಕೆ ಪ್ಯಾಸೆಂಜರ್​ ರೈಲು ಸಂಚಾರ ರದ್ದು.. 9 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದ್ದು, 2 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ವಿಜಯವಾಡ-ಲಿಂಗಂಪಲ್ಲಿ ರೈಲು ಎರಡು ಗಂಟೆ ತಡವಾಗಿ ಸಂಚರಿಸುತ್ತಿದೆ. ವಿಜಯವಾಡ-ವಿಶಾಖ ಮತ್ತು ವಿಶಾಖ-ವಿಜಯವಾಡ ನಡುವಿನ ರೈಲುಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೆ, ಗುಂಟೂರು-ವಿಶಾಖ, ವಿಶಾಖ-ಗುಂಟೂರು ಮತ್ತು ವಿಜಯವಾಡ-ಗುಂಟೂರು ರೈಲುಗಳನ್ನು ರದ್ದುಗೊಳಿಸಲಾಗಿದೆ.

ಕಾಕಿನಾಡ ಬಂದರು-ವಿಜಯವಾಡ ರೈಲುಗಳನ್ನು ರದ್ದುಗೊಳಿಸಲಾಗಿದೆ. ವಿಜಯವಾಡ-ರಾಜಮಹೇಂದ್ರವರಂ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಹಳಿತಪ್ಪಿದ ಬೋಗಿಯನ್ನು ತೆರವುಗೊಳಿಸಿದ ನಂತರ ಮಧ್ಯಾಹ್ನದ ವೇಳೆಗೆ ಮಾರ್ಗದಲ್ಲಿ ರೈಲುಗಳ ಸಂಚಾರ ಪುನಾರಂಭವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ:ನಿಂತಿದ್ದ ಲಾರಿಗೆ ಬೈಕ್​​ ಡಿಕ್ಕಿ: ದೇವರ ಹರಕೆ ತೀರಿಸಲು ಹೋಗಿದ್ದ ಮೂವರ ದುರ್ಮರಣ

Last Updated : Nov 9, 2022, 3:14 PM IST

ABOUT THE AUTHOR

...view details