ತೆಲಂಗಾಣ: ರಾಜ್ಯದಲ್ಲಿ ಕೊರೊನಾ ಪ್ರಕರಣಗಳುದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಪುಟ್ಟ ಮಕ್ಕಳನ್ನೂ ಬಿಡದೆ ಮಹಾಮಾರಿ ಕಾಡುತ್ತಿದೆ. ಇದೀಗ ಮತ್ತೆ ಆದಿಲಾಬಾದ್ ಜಿಲ್ಲೆಯ ತನ್ಸಿ ಗ್ರಾಮದ ನಿವಾಸಿಗಳಾದ ಸಂತೋಷ್-ಪೂರ್ಣಮಿ ದಂಪತಿಯ 9 ತಿಂಗಳ ಗಂಡು ಮಗುವಿಗೂ ಕೊರೊನಾ ತಗುಲಿದ್ದು, ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೊನಾ ತಗುಲಿ 9 ತಿಂಗಳ ಮಗುವಿನ ಸ್ಥಿತಿ ಗಂಭೀರ... ಸಹಾಯಕ್ಕಾಗಿ ದಂಪತಿ ಮನವಿ
ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ತನ್ಸಿ ಗ್ರಾಮದ ನಿವಾಸಿಗಳಾದ ಸಂತೋಷ್-ಪೂರ್ಣಮಿ ದಂಪತಿಯ 9 ತಿಂಗಳ ಗಂಡು ಮಗು ಶ್ರಿಯಾನ್ಗೆ ಕೊರೊನಾ ದೃಢಪಟ್ಟಿದೆ. ಮಗುವಿನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲು ದಾನಿಗಳು ಸಹಕರಿಸುವಂತೆ ದಂಪತಿ ಮನವಿ ಮಾಡಿದ್ದಾರೆ.
9 ತಿಂಗಳ ಮಗುವನ್ನೂ ಬಿಡದ ಮಹಾಮಾರಿ
ಭೀಮ್‌ಪುರ ಎಂಪಿಡಿಒ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಸಂತೋಷ್ಗೆ ಇತ್ತೀಚೆಗೆ ಕೊರೊನಾ ದೃಢಪಟ್ಟಿತ್ತು. ಬಳಿಕ ಅವರ ಪತ್ನಿಗೂ ಕೊರೊನಾ ತಗುಲಿತ್ತು. ಇನ್ನು ಈ ಇಬ್ಬರು ಚೇತರಿಸಿಕೊಳ್ಳುತ್ತಿದ್ದಂತೆ 9 ತಿಂಗಳ ಮಗು ಶ್ರಿಯಾನ್ಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಈ ವೇಳೆ ವೈರಸ್ ಇರುವುದು ದೃಢಪಟ್ಟಿದೆ.
ಇನ್ನು ಮಗುವಿನ ಸ್ಥಿತಿ ಗಂಭೀರವಾಗಿದ್ದು, ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಆಸ್ಪತ್ರೆಯಲ್ಲಿ ದಿನಕ್ಕೆ 70 ಸಾವಿರದಿಂದ 1 ಲಕ್ಷದವರೆಗೆ ಬಿಲ್ ಮಾಡಲಾಗುತ್ತಿದ್ದು, ಸಹಾಯ ಮಾಡುವಂತೆ ದಂಪತಿ ಮನವಿ ಮಾಡಿದ್ದಾರೆ.