ನಮ್ಖಾನಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ 9 ಮೀನುಗಾರರ ಶವಗಳು ಗುರುವಾರ ಬೆಳಗ್ಗೆ ಬಂಗಾಳಕೊಲ್ಲಿಯಲ್ಲಿ ಅಪಘಾತಕ್ಕೀಡಾದ ಟ್ರಾಲರ್(ಸಣ್ಣ ಮಟ್ಟದ ಹಡಗು) ಒಳಗೆ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಬ್ಬ ವ್ಯಕ್ತಿ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಬುಧವಾರ ಮುಂಜಾನೆ ಬಖಾಲಿ ಕರಾವಳಿಯ ರಕ್ತೇಶ್ವರಿ ದ್ವೀಪದ ಬಳಿ ಇದ್ದಕ್ಕಿದ್ದಂತೆ ಅಲೆಗಳು ಅಪ್ಪಳಿಸಿದ್ದು ಪರಿಣಾಮ 'ಹೈಮಾಬತಿ' ಎಂಬ ಟ್ರಾಲರ್ ಪಲ್ಟಿಯಾಗಿದೆ. ಮೀನುಗಾರರಾದ ಶಂಕರ್ ಸಶ್ಮಲ್ ಮತ್ತು ಸೈಕತ್ ದಾಸ್ ಅವರು ಟ್ರಾಲರ್ ಅನ್ನು ಮುನ್ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.