ನವದೆಹಲಿ: ಜ.26 ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರ ನಡೆದ ಸಂದರ್ಭದಲ್ಲಿ ಪಂಜಾಬ್ನ ಕೆಲ ರೈತರನ್ನು ಪೊಲೀಸರು ಬಂಧಿಸಿದ್ದರು. ಅದರಲ್ಲಿ ನಿನ್ನೆ 9 ಜನ ತಿಹಾರ್ ಜೈಲಿನಿಂದ ಜಾಮೀನು ಪಡೆದು ಹೊರ ಬಂದಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಜನವರಿ 26 ರಂದು ದೆಹಲಿ ಕೆಂಪುಕೋಟೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ಕೆಲ ರೈತರು ಹಿಂಸಾಚಾರ ನಡೆಸಿದ್ದರು. ಈ ಸಂಬಂಧ ಪೊಲೀಸರು ಅನೇಕ ರೈತರನ್ನು ಬಂಧಿಸಿದ್ದರು. ಅದರಲ್ಲಿ ಪಂಜಾಬಿನ ಕೆಲ ರೈತರು ಸೇರಿದ್ದರು. ಇದುವರೆಗೆ ಸುಮಾರು 45 ರೈತರು ಹೊರ ಬಂದಿದ್ದು, ನಿನ್ನೆ 9 ಜನ ತಿಹಾರ್ ಜೈಲಿನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.
ಯುನೈಟೆಡ್ ಕಿಸಾನ್ ಮೋರ್ಚಾ ಮತ್ತು ದೆಹಲಿ ಸಿಖ್ ಗುರುದ್ವಾರ ಪ್ರಬಂಧಕ್ ಸಮಿತಿ ಈ ರೈತರಿಗೆ ಜಾಮೀನು ಕೊಡಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದವು. ಇವರ ಪ್ರಯತ್ನನಿಂದ ರೈತರಿಗೆ ಜಮೀನು ಸಿಕ್ಕಿದೆ ಎನ್ನಲಾಗುತ್ತಿದೆ.