ಜಮ್ಮು- ಕಾಶ್ಮೀರ:ರಾಂಬಾನ್ ಜಿಲ್ಲೆಯ ಖೂನಿ ನಾಲಾದಲ್ಲಿ ನಿರ್ಮಾಣ ಹಂತದ ಸುರಂಗದ ಒಂದು ಭಾಗ ಕುಸಿದು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಎಲ್ಲ 10 ಕಾರ್ಮಿಕರ ಮೃತದೇಹಗಳನ್ನು 2 ದಿನಗಳ ಕಾರ್ಯಾಚರಣೆಯ ಬಳಿಕ ಹೊರತೆಗೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
4 ಪಥಗಳ ಯೋಜನೆ ಇದಾಗಿದ್ದು, ಶುಕ್ರವಾರ ರಾತ್ರಿ ಸುರಂಗದ ಟಿ-3 ಭಾಗ ಕುಸಿದಿತ್ತು. ಈ ವೇಳೆ ಅಲ್ಲಿ 10 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಎಲ್ಲ ಕಾರ್ಮಿಕರೂ ಅವಶೇಷಗಳಡಿ ಸಿಲುಕಿದ್ದರು. ತಕ್ಷಣವೇ ರಕ್ಷಣಾ ಕಾರ್ಯಾಚರಣೆಗಿಳಿದರೂ ಒಳ ಸಿಲುಕಿದ್ದ ಕಾರ್ಮಿಕರು ಪತ್ತೆಯಾಗಿರಲಿಲ್ಲ.
ಇಂದಿನ ಎರಡನೇ ದಿನದ ಕಾರ್ಯಾಚರಣೆಯಲ್ಲಿ ಸಂಜೆಯ ವೇಳೆಗೆ 9 ಕಾರ್ಮಿಕರ ಶವಗಳನ್ನು ಪತ್ತೆ ಮಾಡಲಾಗಿತ್ತು. ಇನ್ನೊಂದು ಶವಕ್ಕಾಗಿ ಪತ್ತೆ ಕಾರ್ಯ ಮುಂದುವರಿದಿತ್ತು. ರಾತ್ರಿ 8 ಗಂಟೆ ಸುಮಾರಿನಲ್ಲಿ ಕೊನೆಯ ಕಾರ್ಮಿಕನೂ ಬಳಿಕ ಎಲ್ಲ ಶವಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಪರೀಕ್ಷೆ ನಡೆಸಲಾಗಿದೆ.