ನವದೆಹಲಿ:ಪಶ್ಚಿಮ ದೆಹಲಿಯ ತಿಲಕ್ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 87 ವರ್ಷದ ಅಜ್ಜಿಯ ಮೇಲೆ ದುರುಳರು ಅತ್ಯಾಚಾರವೆಸಗಿದ್ದಾರೆ.
ಅಜ್ಜಿ ತನ್ನ 65 ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದರು. ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಮಗಳು ಹೊರಗಡೆ ಹೋಗಿದ್ದಾಗ ಅಪರಿಚಿತನೊಬ್ಬ ಮನೆಗೆ ನುಗ್ಗಿ ಅಮಾನವೀಯ ಕೃತ್ಯ ಎಸಗಿದ್ದಾನೆ. ಬಳಿಕ ಆತ ಮಧ್ಯಾಹ್ನ 1.30ರೊಳಗೆ ಅಲ್ಲಿಂದ ತೆರಳಿರಬಹುದು ಎಂದು ಕುಟುಂಬಸ್ಥರು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದುಷ್ಕೃತ್ಯಕ್ಕೂ ಮೊದಲು ಫೋನ್ ಕಳ್ಳತನ:ಅತ್ಯಾಚಾರಕ್ಕೂ ಒಂದು ದಿನ ಮೊದಲು ಅಂದ್ರೆ 13ರಂದು ಸಂತ್ರಸ್ತೆಯ ಮಗಳ ಮೊಬೈಲ್ ಫೋನ್ ಮನೆಯಿಂದಲೇ ಕಳ್ಳತನವಾಗಿತ್ತು. ಈ ಬಗ್ಗೆ ಪೊಲೀಸರಿಗೆ ಲಿಖಿತ ದೂರು ನೀಡಲಾಗಿತ್ತು.
ಇದನ್ನೂ ಓದಿ:ಬಿಎಸ್ವೈ ಭೇಟಿಯಾದ ಕೇಂದ್ರ ಸಚಿವ ಜೋಶಿ; ಕುತೂಹಲ ಕೆರಳಿಸಿದ ಉಭಯ ನಾಯಕರ ಭೇಟಿ!
ನಿನ್ನೆ(ಸೋಮವಾರ) ತನ್ನ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಗಳು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಗೆ ಅಗತ್ಯವಿರುವ ಎಲ್ಲಾ ಕಾನೂನು ನೆರವು ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.