ನಾಹನ್ (ಹಿಮಾಚಲ ಪ್ರದೇಶ):ಸಾಧಿಸಬೇಕೆಂಬ ಛಲ, ಹಂಬಲವಿದ್ದರೆ ವಯಸ್ಸು ಯಾವುದೇ ಕಾರಣಕ್ಕೂ ಅಡ್ಡಿಯಾಗದು ಎಂಬುದು ಅನೇಕ ಘಟನೆಗಳಲ್ಲಿ ಸಾಬೀತಾದ ಸತ್ಯ. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ.
ಹಿಮಾಚಲ ಪ್ರದೇಶದ 85 ವಯಸ್ಸಿನ ನಿವಾಸಿಯೊಬ್ಬರು ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಮೂರು ಬಂಗಾರದ ಪದಕ ಗೆದ್ದು, ಯುವಕರೇ ನಾಚುವಂತಹ ಸಾಧನೆ ಮಾಡಿದ್ದಾರೆ. ಇವರ ಹೆಸರು ಎಸ್.ಎಸ್.ಶರ್ಮಾ.
ಹಿಮಾಚಲ ಪ್ರದೇಶ ಮಾಸ್ಟರ್ಸ್ ಗೇಮ್ಸ್ 2021 ನವೆಂಬರ್ 20 ಮತ್ತು 21ರಂದು ನಾಹನ್ ಎಂಬಲ್ಲಿ ಆಯೋಜನೆಗೊಂಡಿತ್ತು. ಇದರಲ್ಲಿ ಭಾಗಿಯಾಗಿದ್ದ ಶರ್ಮಾ ಜಾವೆಲಿನ್, ಶಾಟ್ಪುಟ್ ಮತ್ತು ಡಿಸ್ಕಸ್ ಥ್ರೋ ಸ್ಪರ್ಧೆಗಳಲ್ಲಿ ಭಾಗಿಯಾಗಿ ಚಿನ್ನದ ಪದಕ ಗೆದ್ದರು. ಈ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ವೇಳೆ ಅವರು, 'ಫಿಟ್ ಹೈ ತೋ ಹಿಟ್ ಹೈ' ಎಂಬ ಸಂದೇಶ ರವಾನಿಸಿದರು.
ಇದನ್ನೂ ಓದಿ:ಭಾರತೀಯ ಸಂಸ್ಕೃತಿಗೆ ಮರುಳಾಗಿ ಹಿಂದೂ ಯುವಕನ ಪ್ರೀತಿಸಿ ವರಿಸಿದ ಫ್ರಾನ್ಸ್ ಯುವತಿ
ಮಹಾಮಾರಿ ಕೊರೊನಾದಿಂದಾಗಿ ಎರಡು ವರ್ಷಗಳ ನಂತರ ಈ ಸ್ಪರ್ಧೆ ಆಯೋಜಿಸಲಾಗಿತ್ತು. 2018-19ರಲ್ಲಿ ನಡೆದಿದ್ದ ಸ್ಪರ್ಧೆಯಲ್ಲೂ ಭಾಗಿಯಾಗಿದ್ದ ಶರ್ಮಾ, ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ರಾಷ್ಟ್ರ ಮಟ್ಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ರಾಜ್ಯದಿಂದ ಯಾವುದೇ ಹಿರಿಯ ನಾಗರಿಕರು 58ರ ವಯೋಮಿತಿಯಲ್ಲಿ ಭಾಗವಹಿಸದ ಕಾರಣ ಈ ಬಾರಿಯೂ 3 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ತಮ್ಮ ಫಿಟ್ನೆಸ್ ಮಂತ್ರದ ಬಗ್ಗೆ ತಿಳಿಸಿರುವ ಶರ್ಮಾ, ಪ್ರತಿದಿನ ಯೋಗ, ಊಟ, ಪಾನೀಯ ಬಗ್ಗೆ ವಿಶೇಷ ಕಾಳಜಿ ವಹಿಸಿರುವುದಾಗಿ ತಿಳಿಸಿದ್ದಾರೆ.