ತೆಹ್ರಿ:ದೇವಪ್ರಯಾಗ್ ಮತ್ತು ರಿಷಿಕೇಶ ನಡುವಿನ ಬಯಾಸಿಯ ತಾಜ್ ಹೋಟೆಲ್‌ನಲ್ಲಿ ಈವರೆಗೂ 82 ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದೆ. ಪರಿಣಾಮ, ಎರಡು ದಿನಗಳ ತನಕ ಹೋಟೆಲ್ ಮುಚ್ಚಲಾಗಿದೆ.
ಹೋಟೆಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಕಾರ್ಮಿಕರಿಗೆ ಸೋಂಕು ತಗುಲಿರುವುದು ಕೋವಿಡ್ 19 ಪರೀಕ್ಷೆಯಿಂದ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ ಉತ್ತರಾಖಂಡ್‌ದಲ್ಲಿ 366ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿದೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಮತ್ತೆ ಹಕ್ಕಿ ಜ್ವರ ಭೀತಿ.. ಎಲ್ಲೆಂದರಲ್ಲಿ ಸತ್ತು ಬಿದ್ದ 300ಕ್ಕೂ ಹೆಚ್ಚು ಪಾರಿವಾಳಗಳು!
ಕೆಲವು ದಿನಗಳ ಹಿಂದೆ ಋಷಿಕೇಶ-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ತಾಜ್ ಹೋಟೆಲ್‌ನಲ್ಲಿ ಕೆಲವು ಜನರ ಮಾದರಿಗಳನ್ನು ತೆಗೆದುಕೊಳ್ಳಲಾಗಿತ್ತು. ಇದರಲ್ಲಿ 25 ಜನರಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿತ್ತು. ಆ ನಂತರ, ಆರೋಗ್ಯ ಇಲಾಖೆ ತಂಡವು ಇತರ ಸಿಬ್ಬಂದಿ ಮಾದರಿ ಸಹ ತೆಗೆದುಕೊಂಡಿತು. ಎರಡನೇ ಬಾರಿಗೆ 27 ಜನರಿಗೆ ಪಾಸಿಟಿವ್ ಇರುವುದು ತಿಳಿದುಬಂತು. ಸೋಮವಾರ ಮತ್ತೆ 32 ಜನರಲ್ಲಿ ಕೊರೊನಾ ಇರುವಿಕೆ ಕಂಡುಬಂದಿದೆ.
ತಾಜ್ ಹೋಟೆಲ್‌ನಲ್ಲಿ ಈವರೆಗೆ ಒಟ್ಟು 82 ಸಿಬ್ಬಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಋಷಿಕೇಶದಲ್ಲಿ ಎಲ್ಲರನ್ನೂ ಪ್ರತ್ಯೇಕಿಸಲಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡ ಸ್ಥಳೀಯಾಡಳಿತ, ತಾಜ್ ಹೋಟೆಲ್ ಅನ್ನು ಎರಡು ದಿನಗಳ ಕಾಲ ಮುಚ್ಚಿದೆ. ಹೋಟೆಲ್ ರೂಮ್ ಕಾಯ್ದಿರಿಸುವುದಕ್ಕೂ ನಿರ್ಬಂಧ ಹೇರಲಾಗಿದೆ ಎಂದು ಉಪ ಜಿಲ್ಲಾಧಿಕಾರಿ ಮಿಶ್ರಾ ಹೇಳಿದ್ದಾರೆ.