ಜಲ್ಪೈಗುರಿ(ಪಶ್ಚಿಮ ಬಂಗಾಳ):ದೈತ್ಯ ಗಾತ್ರದ ಕ್ಯಾಟ್ ಫಿಶ್ ತೀಸ್ತಾ ನದಿಯಲ್ಲಿ ಮೀನುಗಾರರ ಬಲೆಗೆ ಬಿದ್ದಿದೆ. ಇದನ್ನು ಮೇನಗುರಿಯ ದೋಮಹನಿ ಎಂಬಲ್ಲಿ ಮೀನುಗಾರರೊಬ್ಬರು ಹಿಡಿದಿದ್ದಾರೆ. ಈ ಮೀನು ಬರೋಬ್ಬರಿ 36,000 ಬೆಲೆಗೆ ಮಾರಾಟವಾಗಿದೆ.
ಅಬ್ಬಬ್ಬಾ ಬಲೆಗೆ ಬಿತ್ತು 80 ಕೆಜಿ ತೂಕದ ಮೀನು.. 36 ಸಾವಿರಕ್ಕೆ ಮಾರಾಟವಾಯ್ತು ಈ ಫಿಶ್! - 80kg big fish sold for 36 thousand in West Bengal
80 ಕೆಜಿ ತೂಕದ ಬೃಹತ್ ಗಾತ್ರದ ಕ್ಯಾಟ್ ಫಿಶ್ಅನ್ನು ಪಶ್ಚಿಮ ಬಂಗಾಳದ ಮೀನುಗಾರರು ಹಿಡಿದಿದ್ದಾರೆ. ಈ ಮೀನು 36,000ಕ್ಕೆ ಮಾರಾಟವಾಗಿದೆ.
36 ಸಾವಿರಕ್ಕೆ ಮಾರಾಟವಾದ ಬೃಹತ್ ಗಾತ್ರದ ಮೀನು
ಈ ಮೀನು 80 ಕೆಜಿ ತೂಕ ಇದ್ದು ಇದೇ ಮೊದಲ ಬಾರಿಗೆ ತೀಸ್ತಾ ನದಿಯಲ್ಲಿ ಇಷ್ಟು ದೊಡ್ಡಗಾತ್ರದ ಮೀನು ಮೀನುಗಾರರಿಗೆ ದೊರೆತಿದೆ ಎನ್ನಲಾಗ್ತಿದೆ. ಈ ಬೃಹತ್ ಮೀನು ಬಸು ದಾಸ್ ಎಂಬ ಸ್ಥಳೀಯ ಮೀನುಗಾರನ ಬಲೆಗೆ ಸಿಕ್ಕಿಬಿದ್ದಿದೆ. ಈ ಬೃಹತ್ ಗಾತ್ರದ ಮೀನನ್ನು ನೋಡಲು ಜನರು ತೀಸ್ತಾ ನದಿಯ ತಟದಲ್ಲಿ ಸೇರಿದ್ದರು.
ಇದನ್ನೂ ಓದಿ:ಗುಜರಾತ್ನಲ್ಲಿ ಸೆಲ್ಫ್ ಮ್ಯಾರೇಜ್ನದ್ದೇ ಸದ್ದು.. ಯುವತಿ ಆಧಾರ್ ಕಾರ್ಡ್ನಲ್ಲಿರುವ ಹೆಸರು ಮುನ್ನಲೆಗೆ!