ಕರ್ನಾಟಕ

karnataka

ETV Bharat / bharat

ಜೂ.30ಕ್ಕೆ ಬೋನಾಲು ಹಬ್ಬ: ಭದ್ರತೆಗೆ 800 ಪೊಲೀಸರ ನಿಯೋಜನೆ - ತೆಲಂಗಾಣ

ತೆಲಂಗಾಣದಲ್ಲಿ ವಿಶಿಷ್ಟವಾದ ಬೋನಾಲು ಮತ್ತು ಬತುಕಮ್ಮ ಹಬ್ಬಗಳು ಕೆ.ಚಂದ್ರಶೇಖರ ರಾವ್ ಮುಖ್ಯಮಂತ್ರಿಯಾದ ನಂತರ ಜಾಗತಿಕವಾಗಿ ಪ್ರಸಿದ್ಧವಾಗಿವೆ ಎಂದು ಸಚಿವ ಟಿ. ಶ್ರೀನಿವಾಸ್ ಯಾದವ್ ತಿಳಿಸಿದರು.

Bonalu festival
ತೆಲಂಗಾಣದಲ್ಲಿ ಬೋನಾಲು ಹಬ್ಬ

By

Published : Jun 22, 2022, 9:55 AM IST

ಹೈದರಾಬಾದ್(ತೆಲಂಗಾಣ): ಜೂನ್ 30 ರಂದು ಇಲ್ಲಿನ ಗೋಲ್ಕೊಂಡದಲ್ಲಿ ನಡೆಯಲಿರುವ ಬೋನಾಲು ಹಬ್ಬದ ಭದ್ರತಾ ವ್ಯವಸ್ಥೆಯನ್ನು 800 ಮಂದಿ ಪೊಲೀಸರು ನೋಡಿಕೊಳ್ಳಲಿದ್ದಾರೆ ಎಂದು ತೆಲಂಗಾಣ ಪಶುಸಂಗೋಪನಾ ಸಚಿವ ಟಿ. ಶ್ರೀನಿವಾಸ್ ಯಾದವ್ ತಿಳಿಸಿದರು. ಈ ಬಗ್ಗೆ ಯಾದವ್​​, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಉತ್ಸವದ ಕುರಿತು ಪರಿಶೀಲನಾ ಸಭೆ ನಡೆಸಿದರು.

ಬೋನಾಲು ಮಹಾಂಕಾಳಿ ದೇವಿಯನ್ನು ಪೂಜಿಸುವ ಹಿಂದೂ ಹಬ್ಬವಾಗಿದೆ. ತೆಲಂಗಾಣದಲ್ಲಿ ವಿಶಿಷ್ಟವಾದ ಬೋನಾಲು ಮತ್ತು ಬತುಕಮ್ಮ ಹಬ್ಬಗಳು ಕೆ.ಚಂದ್ರಶೇಖರ ರಾವ್ ಮುಖ್ಯಮಂತ್ರಿಯಾದ ನಂತರ ಜಾಗತಿಕವಾಗಿ ಪ್ರಸಿದ್ಧವಾಗಿವೆ ಎಂದು ಅವರು ಹೇಳಿದರು.

ಬೋನಾಲು ಹಬ್ಬವನ್ನು ಗೋಲ್ಕೊಂಡ, ಸಿಕಂದರಾಬಾದ್ ಮತ್ತು ಹೈದರಾಬಾದ್​​ನಲ್ಲಿ ಆಚರಿಸಲಾಗುವುದು ಎಂದು ಸಚಿವರು ಹೇಳಿದರು. ಗೋಲ್ಕೊಂಡದಲ್ಲಿ ಭಕ್ತರಿಗಾಗಿ ಸುಮಾರು 8.75 ಲಕ್ಷ ನೀರಿನ ಪ್ಯಾಕೆಟ್‌ಗಳು ಮತ್ತು 55,000 ನೀರಿನ ಬಾಟಲ್​​ಗಳನ್ನು ಇಡಲಾಗುತ್ತದೆ. ಅಂತೆಯೇ, ಅಗತ್ಯವಿದ್ದಲ್ಲಿ ನಾಲ್ಕು ಆ್ಯಂಬುಲೆನ್ಸ್‌ಗಳು ಮತ್ತು ಐದು ವೈದ್ಯಕೀಯ ಶಿಬಿರಗಳನ್ನು ಇರಿಸಲಾಗುವುದು ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಇಂದಿನಿಂದ ಅಂಬುಬಾಚಿ ಉತ್ಸವ ಆರಂಭ.. ದೇಶ - ವಿದೇಶಗಳಿಂದ ಭಕ್ತರ ಆಗಮನ!

ABOUT THE AUTHOR

...view details