ಮೀರತ್:ವೃದ್ಧೆಯೊಬ್ಬರು ರನ್ನಿಂಗ್ ಟ್ರ್ಯಾಕ್ನಲ್ಲಿ ಓಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ 80 ವರ್ಷದ ವೃದ್ಧೆ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಕ್ರೀಡಾ ಸ್ಫೂರ್ತಿ ಮೆರೆದಿರುವುದನ್ನು ಕಾಣಬಹುದು. ಅಷ್ಟೇ ಏಕೆ? ಇವರು 49 ಸೆಕೆಂಡುಗಳಲ್ಲಿ 100 ಮೀಟರ್ ದೂರ ಕ್ರಮಿಸಿ ಸ್ಪರ್ಧೆಯಲ್ಲಿ ವಿಜೇತರೂ ಆಗಿದ್ದಾರೆ. ಅಜ್ಜಿ ಓಟವನ್ನು ಪೂರ್ಣಗೊಳಿಸಿದ ತಕ್ಷಣ ಜನರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
100 ಮೀಟರ್ ಓಟದ ಸ್ಪರ್ಧೆ ಗೆದ್ದ 80ರ ಅಜ್ಜಿ! - older woman had participated in the 100 meter race
ಉತ್ತರ ಪ್ರದೇಶದ ಮೀರತ್ನಲ್ಲಿ 80 ವರ್ಷದ ವೃದ್ಧೆಯೊಬ್ಬರು 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತರಾಗಿದ್ದಾರೆ. ಅಜ್ಜಿ ಟ್ರ್ಯಾಕ್ನಲ್ಲಿ ಓಡುವ ದೃಶ್ಯ ಸದ್ಯ ವೈರಲ್ ಆಗಿದೆ.
80ರ ಅಜ್ಜಿಗೆ ಜಯ