ಮುಜಾಫರ್‌ನಗರ (ಉತ್ತರಪ್ರದೇಶ): ಮುಜಾಫರ್‌ನಗರ ಜಿಲ್ಲೆಯಲ್ಲಿ ಸುಮಾರು 80 ಮಂದಿ ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮರಳಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಮತಾಂತರವಾದ ಎಲ್ಲಾ ಜನರು ಧೋಬಿ ಸಮುದಾಯದವರಾಗಿದ್ದು ರಾಂಪುರ ಜಿಲ್ಲೆಗೆ ಸೇರಿದವರು ಎಂದು ತಿಳಿದು ಬಂದಿದೆ.
ಮೂಲತಃ ಹಿಂದೂಗಳಾಗಿದ್ದ ಇವರೆಲ್ಲರು ಕೆಲ ವರ್ಷಗಳ ಹಿಂದೆ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಕಿರುಕುಳದಿಂದ ನಾವು ಬೇಸತ್ತಿದ್ದೇವೆ ಎಂದು ಆರೋಪಿಸಿದ್ದಾರೆ. ಇದರಿಂದ ಬೇಸತ್ತ ರಾಂಪುರದ ವಿವಿಧ ಕುಟುಂಬಗಳ 80 ಜನರು ಭಾನುವಾರ ಹಿಂದೂ ಧರ್ಮವನ್ನು ಅಳವಡಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಹಾಗಾಗಿ ಬಾಘ್ರಾ ಬ್ಲಾಕ್‌ನಲ್ಲಿರುವ ಯೋಗ ಸಾಧನಾ ಆಶ್ರಮದ ಮಹಾರಾಜ್ ಯಶ್ವೀರ್ ಅವರು ಗಂಗಾಜಲವನ್ನು ಶುದ್ಧೀಕರಿಸಿ ಆ 80 ಜನರ ಎಲ್ಲರ ಕೊರಳಿಗೆ ಪವಿತ್ರ ದಾರವನ್ನು ಧರಿಸಿ ಗಾಯತ್ರಿ ಮಂತ್ರ ಪಠಿಸುವುದರೊಂದಿಗೆ ಯಾಗವನ್ನು ಮಾಡಿ ,ಅವರನ್ನು ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಿಸಿದರು.