ನವದೆಹಲಿ: ಭಾರೀ ಭೂ ಕಂಪನಕ್ಕೆ ತುತ್ತಾಗಿರುವ ಸಿರಿಯಾ ಮತ್ತು ಟರ್ಕಿಗೆ ಇದೀಗ ನೆರವಿನ ಹಸ್ತ ಬೇಕಾಗಿದೆ. ಇದೇ ಕಾರಣದಿಂದ ಅಲ್ಲಿನ ಸಂತ್ರಸ್ತರ ರಕ್ಷಣೆಗಾಗಿ ಅನೇಕ ದೇಶಗಳು ಮತ್ತು ಸಂಘಟನೆಗಳು ಮುಂದಾಗಿದೆ. ಅಲ್ಲಿನ ಪರಿಸ್ಥಿತಿಯನ್ನು ಒಮ್ಮೆ ಗಮನಸಿದರೆ ಸಾಕು ಎಂತಹವರ ಹೃದಯವಾದರೂ ಕರಗದೇ ಇರಲಾರದು. ಅವಶೇಷಗಳ ಅಡಿ ಸಿಲುಕಿರುವ, ಭೂ ಕಂಪನದಿಂದ ಪರಾದವರಿಗೆ ವೈದ್ಯಕೀಯ, ರಕ್ಷಣೆ, ಆಹಾರ ಸೇರಿದಂತೆ ಇನ್ನಿತರ ಸಹಾಯ ಹಸ್ತ ಚಾಚಲು ವೈಯಕ್ತಿಕವಾಗಿ ಕೂಡ ಜನರು ಮುಂದೆ ಬರುತ್ತಿದ್ದಾರೆ. ಟರ್ಕಿ ಮತ್ತು ಸಿರಿಯಾದ ಈಗಿನ ಪರಿಸ್ಥಿತಿಯನ್ನು ಟಿವಿಯಲ್ಲಿ ಕಂಡ 8 ವರ್ಷದ ಬಾಲಕನ ಮನ ಕೂಡ ಕರಗಿದ್ದು, ಆತ ತಮ್ಮ ಪಾಕೆಟ್ ಮನಿಯನ್ನು ಇದೀಗ ಅವರಿಗೆ ನೀಡಲು ಮುಂದಾಗಿದ್ದಾರೆ.
ನವದೆಹಲಿಯ ಜೈದನ್ ಖುರೇಷಿ ಎಂಬ ಬಾಲಕ ಟರ್ಕಿ, ಸಿರಿಯಾ ಮಕ್ಕಳ ಕಣ್ಣೀರಿಗೆ ಕರಗಿದ್ದಾನೆ. ದೆಹಲಿಯ ಟರ್ಕಿ ರಾಯಭಾರಿ ಕಚೇರಿಗೆ ಭೇಟಿ ನೀಡಿದ ಈತ ತನ್ನ ಪಾಕೆಟ್ ಮನಿಯಿಂದ ಜಾಕೆಟ್ ಅನ್ನು ಖರೀದಿಸಿದ್ದು, ಅದನ್ನು ಸಂತ್ರಸ್ತರಿಗೆ ನೀಡಿ ನೆರವಾಗುವಂತೆ ಮನವಿ ಮಾಡಿದ್ದಾನೆ. ಇದೇ ವೇಳೆ, ಈ ಕುರಿತು ಮಾತನಾಡಿದ ಬಾಲಕ ಕಳೆದ ಕೆಲವು ದಿನದ ಹಿಂದೆ ಟರ್ಕಿಯಲ್ಲಿ ಸಂಭವಿಸಿದ ಭೂಕಂಪನದ ದೃಶ್ಯ ನೋಡಿದೆ. ಆಗ ನನ್ನಿಂದ ಆಗುವ ಸಣ್ಣ ಸಹಾಯವನ್ನು ಅಲ್ಲಿ ಜನರಿಗೆ ಮಾಡಬೇಕು ಎನಿಸಿತು. ಇದನ್ನು ನನ್ನ ತಂದೆ ಬಳಿ ಹೇಳಿದೆ. ತಕ್ಷಣಕ್ಕೆ ತಂದೆ ಮಗನನ್ನು ಕರೆದುಕೊಂಡು ಟರ್ಕಿ ರಾಯಭಾರಿ ಕಚೇರಿಗೆ ಕೆಲವು ಅಗತ್ಯ ಸಾಮಾಗ್ರಿ ಜೊತೆ ಕರೆತಂದರು ಎಂದಿದ್ದಾರೆ.
ಪ್ರತಿ ನಿತ್ಯ ತಂದೆ ನನಗೆ 100 ರೂಪಾಯಿ ಪಾಕೆಟ್ ಮನಿಯನ್ನು ನೀಡುತ್ತಾರೆ. ಅವುಗಳನ್ನು ನಾನು ಒಂದು ಕಡೆ ಸಂಗ್ರಹಿಸುತ್ತೇನೆ. ಆ ಸಂಗ್ರಹಿಸಿದ ಹಣದಲ್ಲಿ ಟರ್ಕಿಶ್ ಸಹಾಯಕ್ಕೆ ಮುಂದಾಗೋಣ ಎಂದು ತಂದೆಗೆ ಹೇಳಿದೆ. ತಂದೆ ಇದಕ್ಕೆ ಅವರ ಹಣವನ್ನು ಸೇರಿಸಿ 112 ಜಾಕೆಟ್ ಅನ್ನು ಖರೀದಿಸಿದ್ದಾರೆ. ಅದನ್ನು ನಾವು ಟರ್ಕಿ ರಾಯಭಾರಿ ಕಚೇರಿಗೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ ಜೈದನ್.