ಚಂದೌಲಿ, ಉತ್ತರ ಪ್ರದೇಶ:ಅಲಹಾಬಾದ್ನಿಂದ ಮುಘಲ್ಸರಾಯ್ನ ದೀನ್ ದಯಾಳ್ ಉಪಾಧ್ಯಾಯ ರೈಲ್ವೆ ಜಂಕ್ಷನ್ಗೆ ತೆರಳುತ್ತಿದ್ದ ಸರಕು ಸಾಗಣೆ ರೈಲಿನ 8 ವ್ಯಾಗನ್ಗಳು ಹಳ್ಳಿ ತಪ್ಪಿರುವ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಳಿ ತಪ್ಪಿದ ರೈಲಿನ 8 ವ್ಯಾಗನ್: ರೈಲ್ವೆ ಸಂಚಾರ ಅಸ್ತವ್ಯಸ್ತ - ಉತ್ತರ ಪ್ರದೇಶ ಲೇಟೆಸ್ಟ್ ನ್ಯೂಸ್
ಉತ್ತರ ಪ್ರದೇಶದ ಚಂದೌಲಿ ರೈಲ್ವೆ ನಿಲ್ದಾಣದ ಬಳಿ ಸರಕು ಸಾಗಣೆ ರೈಲಿನ 8 ವ್ಯಾಗನ್ಗಳು ಹಳಿ ತಪ್ಪಿದ್ದು, ರೈಲು ಸಂಚಾರ ಅಸ್ತವಸ್ತವಾಗಿದೆ. ಇನ್ನೂ ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಹಳಿ ತಪ್ಪಿದ ರೈಲಿನ 8 ವ್ಯಾಗನ್ಗಳು: ರೈಲ್ವೆ ಸಂಚಾರ ಅಸ್ತವ್ಯಸ್ತ
ಪ್ರಾಥಮಿಕ ಮಾಹಿತಿ ಪ್ರಕಾರ 8 ವ್ಯಾಗನ್ಗಳು ಬೆಳ್ಳಂಬೆಳಗ್ಗೆ ಸುಮಾರು 6.40ಕ್ಕೆ ಹಳಿ ತಪ್ಪಿವೆ. ಕೆಲವು ವ್ಯಾಗನ್ಗಳು ಪಲ್ಟಿಯಾಗಿವೆ. ಈ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಓಡಾಡಬೇಕಾದ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಕೆಲವು ರೈಲುಗಳ ಸಮಯದಲ್ಲಿ ವ್ಯತ್ಯಯವುಂಟಾಗಿದೆ ಎಂದು ರೈಲ್ವೆ ಅಧಿಕಾರಿ ರಾಜೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ: ವಿಡಿಯೋ…