ಕರ್ನಾಟಕ

karnataka

ETV Bharat / bharat

500 ಅಡಿ ಆಳದ ಕಂದಕಕ್ಕೆ ಉರುಳಿದ ಪಿಕಪ್​ ವಾಹನ: 8 ಜನರ ದಾರುಣ ಸಾವು - ಈಟಿವಿ ಭಾರತ ಕನ್ನಡ

ಉತ್ತರಾಖಂಡದಲ್ಲಿ ಪಿಕಪ್​ ವಾಹನವೊಂದು ಆಳದ ಕಂದಕಕ್ಕೆ ಉರಳಿ ಬಿದ್ದಿರುವ ಘಟನೆ ನಡೆದಿದೆ.

500 ಅಡಿ ಆಳದ ಕಂದಕಕ್ಕೆ ಉರುಳಿದ ಪಿಕಪ್​ ವಾಹನ
500 ಅಡಿ ಆಳದ ಕಂದಕಕ್ಕೆ ಉರುಳಿದ ಪಿಕಪ್​ ವಾಹನ

By ETV Bharat Karnataka Team

Published : Nov 17, 2023, 4:31 PM IST

Updated : Nov 17, 2023, 4:45 PM IST

ನೈನಿತಾಲ್:ಉತ್ತರಾಖಂಡದ ನೈನಿತಾಲ್​ ಜಿಲ್ಲೆಯಲ್ಲಿ ಜನರನ್ನು ಹೊತ್ತು ಸಾಗುತ್ತಿದ್ದ ಪಿಕಪ್​ ವಾಹನ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 8 ಜನರು ಸಾವನ್ನಪ್ಪಿದ್ದಾರೆ. ಇಲ್ಲಿಯ ಚೀರಖಾನ್ - ರೀತಾಸಾಹಿಬ್ ಮೋಟಾರು ರಸ್ತೆಯಲ್ಲಿ ತೆರಳುವಾಗ ವಿರುದ್ಧವಾಗಿ ಬಂದ ದ್ವಿಚಕ್ರವಾಹನಕ್ಕೆ ಡಿಕ್ಕಿ ತಪ್ಪಿಸಲು ಹೋಗಿ ಸುಮಾರು 500 ಅಡಿ ಆಳದ ಕಂದಕ್ಕೆ ವಾಹನ ಉರಳಿ ಬಿದಿದೆ. ಘಟನೆಯಲ್ಲಿ 6 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಇನ್ನೂ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಪ್ರತಿಕ್ರಿಯೆ: ಘಟನೆ ಬಗ್ಗೆ ನೈನಿತಾಲ್​ ಪೊಲೀಸ್​ ವರಿಷ್ಠಾಧಿಕಾರಿ ಪ್ರಹ್ಲಾದ್​ ನಾರಾಯಣ ಮೀನಾ ಮಾಹಿತಿ ನೀಡಿದ್ದು, ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಪಿಕಪ್​ ವಾಹನ ಜನರನ್ನು ಹೊತ್ತು ಚೀರಾಖಾನ್ - ರೀತಾಸಾಹಿಬ್ ರಸ್ತೆ ಮಾರ್ಗವಾಗಿ ಹಲ್ದ್ವಾನಿ ಕಡೆ ಹೋಗುತ್ತಿತ್ತು. ಈ ವೇಳೆ ಎದುರಿಗೆ ಬಂದ ವಾಹನಕ್ಕೆ ಡಿಕ್ಕಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ಪಿಕಪ್​ ವಾಹನ ಕಂದಕಕ್ಕೆ ಉರುಳಿ ಬಿದ್ದಿದೆ. ಈ ವರೆಗೂ ಇದರಲ್ಲಿ 8 ಜನ ಸಾವನ್ನಪ್ಪಿದ್ದಾರೆ. ಒಟ್ಟು 10 ಜನ ಇದರಲ್ಲಿ ಪ್ರಯಾಣಿಸುತ್ತಿದ್ದರು. ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಮಾಹಿತಿ ಬಂದ ತಕ್ಷಣ, ಪರಿಹಾರ ಮತ್ತು ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು. ರಕ್ಷಣೆಗಾಗಿ ಎಸ್‌ಡಿಆರ್‌ಎಫ್ ತಂಡ ಪೊಲೀಸರೊಂದಿಗೆ ತೆರಳಿತ್ತು ಎಂದು ಹೇಳಿದ್ದಾರೆ.

ಸ್ಥಳೀಯರು ಹೇಳುವುದಿಷ್ಟು: ಘಟನೆ ಸಂಭವಿಸಿದ ಬಳಿಕ ಗಾಯಾಳುಗಳ ಕಿರುಚಾಟದ ಶಬ್ದ ಕೇಳಿ ಬಂದಿದೆ. ಈ ವೇಳೆ, ಅಲ್ಲಿ ತೆರಳಿ ಗನಮಿಸಿದಾಗ ಪಿಕಪ್​ ವಾಹನ ಕಂದಕಕ್ಕೆ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ, ಗಾಯಾಳುಗಳ ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಹೇಳಿದ್ದಾರೆ.

ಸಿಎಂ ಸಂತಾಪ:ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ "ನೈನಿತಾಲ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ 8 ಜನರು ಮೃತರಾಗಿರುವುದು ದುಃಖಕರ ಸುದ್ದಿ. ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ, ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದಿದ್ದಾರೆ.

ಇದನ್ನೂ ಓದಿ:ಬಿಹಾರ, ಉತ್ತರ ಪ್ರದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು; ಇಬ್ಬರ ಬಂಧನ

Last Updated : Nov 17, 2023, 4:45 PM IST

ABOUT THE AUTHOR

...view details