ಕರ್ನಾಟಕ

karnataka

ETV Bharat / bharat

ವೆಂಟಿಲೇಟರ್​ ಸಿಗದೆ ಕೊರೊನಾಗೆ 8 ತಿಂಗಳ ಗರ್ಭಿಣಿ ನರ್ಸ್​ ಬಲಿ - ವೆಂಟಿಲೇಟರ್​ ಸಿಗದೇ ಗರ್ಭಿಣಿ ನರ್ಸ್​ ಸಾವು ಸುದ್ದಿ

ಸೋಂಕಿಗೆ ತುತ್ತಾದ ಬಳಿಕ ಇವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆರೋಗ್ಯ ಕ್ಷೀಣಿಸಿದ ಕಾರಣ 2 ದಿನದ ಬಳಿಕ ಏಮ್ಸ್​ಗೆ ಕರೆದೊಯ್ಯಲು ಸೂಚಿಸಿದ್ದರು. ಆದರೆ ಅಲ್ಲಿ ವೆಂಟಿಲೇಟರ್​ ಸಿಗದೆ 8 ತಿಂಗಳ ಗರ್ಭಿಣಿ ನರ್ಸ್​ ಸಾವನ್ನಪ್ಪಿದ್ದಾರೆ.

8 month pregnant nurse died due to corona in bemetara
ಕೊರೊನಾಗೆ 8 ತಿಂಗಳ ಗರ್ಭಿಣಿ ನರ್ಸ್​ ಬಲಿ

By

Published : Apr 30, 2021, 10:55 AM IST

Updated : Apr 30, 2021, 11:59 AM IST

ಬೆಮೆತರಾ (ಛತ್ತೀಸ್​ಗಢ) :ಸಾಜಾ ಬ್ಲಾಕ್‌ನ ಪರಪೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೆಂಟಿಲೇಟರ್​ ಬೆಡ್​ ಸಿಗದೆ 8 ತಿಂಗಳ ಗರ್ಭಿಣಿಯಾಗಿದ್ದ ನರ್ಸ್ ಮೃತಪಟ್ಟಿದ್ದಾರೆ.

ಛತ್ತೀಸ್​ಗಢದ ಬೆಮೆತರಾಜಿಲ್ಲೆಯ ಪರ್ಪೋಡಿ ಸರ್ಕಾರಿ ಆಸ್ಪತ್ರೆಯಲ್ಲಿ ನೇಮಕಗೊಂಡ ಆರೋಗ್ಯ ಕಾರ್ಯಕರ್ತೆ ದುಲಾರಿ ಧೀಮರ್​​ ಎಂಬುವರಿಗೆ 29 ವರ್ಷ ವಯಸ್ಸು. ಇವರು ಕೊರೊನಾ ಸೋಂಕಿಗೆ ಒಳಗಾದ ನಂತರ ಏಪ್ರಿಲ್ 26ರಂದು ಏಮ್ಸ್​​​ಗೆ ದಾಖಲಿಸಲಾಯಿತು. 2 ವರ್ಷಗಳಿಂದ ಸಾಜಾ ಬ್ಲಾಕ್‌ನ ಪರ್ಪೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ 3 ವರ್ಷದ ಮಗಳು ಸಹ ಇದ್ದಾಳೆ. 8 ತಿಂಗಳ ಗರ್ಭಿಣಿಯಾದ ನಂತರ ಆಕೆಗೆ ರಜೆ ನೀಡಲಿಲ್ಲ. ದುರದೃಷ್ಟ ಎಂಬಂತೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ.

ಸೋಂಕಿಗೆ ತುತ್ತಾದ ಬಳಿಕ ಇವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಯಿತು. ಈ ವೇಳೆ ಬೆಮೆತರಾ ಮತ್ತು ದುರ್ಗ್‌ನ ಯಾವುದೇ ವೈದ್ಯಕೀಯ ಮಳಿಗೆಗಳಲ್ಲಿ ರೆಮ್​ಡಿಸಿವಿರ್​ ಚುಚ್ಚುಮದ್ದು ಸಿಗಲಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. 4 ಸಾವಿರ ರೂಪಾಯಿಗಳ ಎರಡು ಚುಚ್ಚುಮದ್ದಿಗೆ 15 ಸಾವಿರ ರೂ. ನೀಡಬೇಕಾಗಿತ್ತು. ಚುಚ್ಚುಮದ್ದಿನ ನಂತರ 2 ದಿನಗಳ ಕಾಲ ದುಲಾರಿ ಚೆನ್ನಾಗಿಯೇ ಇದ್ದರು. ಆದರೆ ಇದ್ದಕ್ಕಿದ್ದಂತೆ ಅವರ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿತು. ನಂತರ ರಾಯ್‌ಪುರ ಏಮ್ಸ್​​ಗೆ ರೆಫರ್​ ಮಾಡಲಾಗಿತ್ತು. ಅಲ್ಲಿ ವೆಂಟಿಲೇಟರ್ ಇರಲಿಲ್ಲ. 2 ದಿನಗಳ ಕಾಲ ಕಾದ ನಂತರ ಹಾಸಿಗೆ ಸಿಕ್ಕಿತು. ಆದರೆ ವೆಂಟಿಲೇಟರ್ ಸಿಗಲಿಲ್ಲ. ಇದರಿಂದಾಗಿ ದುಲಾರಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಕೊರೊನಾಗೆ 28 ದಿನಗಳಲ್ಲಿ ಬೆಮೆತರಾದಲ್ಲಿ 128 ಜನ ಬಲಿಯಾಗಿದ್ದಾರೆ.

Last Updated : Apr 30, 2021, 11:59 AM IST

ABOUT THE AUTHOR

...view details