ಸೂರತ್(ಗುಜರಾತ್) :8 ತಿಂಗಳ ಮಗುವಿನ ಮೇಲೆ ದಾದಿ ಅಮಾನವೀಯ ರೀತಿ ಹಲ್ಲೆ ನಡೆಸಿರುವ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ. ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿರುವ ಮಗುವನ್ನ ಇದೀಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಸುಳೆ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಿದುಳಿನಲ್ಲಿ ರಕ್ತಸ್ರಾವವಾಗಿರುವ ಕಾರಣ ಸೂರತ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸೂರತ್ನ ರಾಂದರ್ಪಾಲನ್ಪುರ್ದಲ್ಲಿ ವಾಸವಾಗಿರುವ ಮಗುವಿನ ಪೋಷಕರಿಬ್ಬರು ಉದ್ಯೋಗಿಗಳಾಗಿದ್ದು, ಅದೇ ಕಾರಣಕ್ಕಾಗಿ 8 ತಿಂಗಳ ಶಿಶು ನೋಡಿಕೊಳ್ಳಲು ದಾದಿ ನೇಮಕ ಮಾಡಿದ್ದಾರೆ. ನೆರೆಹೊರೆಯವರು ಕೂಡ ದಾದಿ ಜೊತೆ ಇರುವಾಗ ಮಗು ತುಂಬಾ ಅಳುತ್ತದೆ ಎಂದು ಮಾಹಿತಿ ನೀಡಿದ್ದರು. ಹೀಗಾಗಿ, ಆಕೆಯ ಮೇಲೆ ನಿಗಾವಹಿಸುವ ಉದ್ದೇಶದಿಂದ ಮನೆಯಲ್ಲಿ ಸಿಸಿ ಟಿವಿ ಅಳವಡಿಕೆ ಮಾಡಿದ್ದರು.