ಹೈದರಾಬಾದ್ (ತೆಲಂಗಾಣ):ತೆಲುಗು ರಾಜ್ಯದ ರಸ್ತೆಗಳು ಹದಗೆಡುತ್ತಿವೆ. ವಾಹನ ಸವಾರರು ರಸ್ತೆಗೆ ಬರಲು ಹೆದರುತ್ತಿದ್ದಾರೆ. ಸಾವು ಯಾವ ದಾರಿ, ಸ್ವರೂಪದಲ್ಲಿ ಬರುವುದೋ ಎಂದು ಚಿಂತಿಸುತ್ತಿದ್ದಾರೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಸಂಭವಿಸಿದ ಪ್ರತ್ಯೇಕ ಮೂರು ಅಪಘಾತಗಳಲ್ಲಿ ಒಟ್ಟು ಎಂಟು ಜನರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.
ಖಮ್ಮಂನಲ್ಲಿ 2 ಅಪಘಾತ, ಐವರು ಸಾವು:ತೆಲಂಗಾಣದ ಖಮ್ಮಂ ಜಿಲ್ಲೆಯ ಕೋಣಿಜಾರ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೊಣಿಜರ್ಲ ಕಡೆಯಿಂದ ವೈರಾ ಕಡೆಗೆ ಹೋಗುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಚಿಂತಕಣಿ ತಾಲೂಕಿನ ಪ್ರದ್ದೂರಿನಿಂದ ವೈರಾ ಕಡೆಗೆ ಹೋಗುತ್ತಿದ್ದ ಲಾರಿ ಏಕಾಏಕಿ ಬ್ರೇಕ್ ಹಾಕಿದೆ. ಇದನ್ನು ಗಮನಿಸಿ ಹಿಂಬದಿಯಲ್ಲಿದ್ದ ಕಾರು ತಕ್ಷಣವೇ ವಾಹನದ ಬ್ರೇಕ್ ಹಾಕಿದ್ದಾರೆ. ಆದರೆ ಕಾರಿನ ಹಿಂದೆಯೇ ಬಂದ ಇನ್ನೊಂದು ಲಾರಿ ಚಾಲಕ ಇದನ್ನು ಗಮನಿಸಲಿಲ್ಲ. ಲಾರಿಯನ್ನು ಅತಿವೇಗದಲ್ಲಿ ಚಲಾಯಿಸಿಕೊಂಡು ಹೋಗಿ ಮುಂದೆ ನಿಂತಿದ್ದ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದ್ದಾನೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿ-ಲಾರಿ ಮುಖಾಮುಖಿ ಡಿಕ್ಕಿ: ಖಮ್ಮಂ ಜಿಲ್ಲೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ಪೆನುಬಳ್ಳಿ ತಾಲೂಕಿನ ವಿ.ಎಂ.ಬಂಜಾರ್ ಎಂಬಲ್ಲಿ ಎರಡು ಲಾರಿಗಳು ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಲಾರಿಗಳ ಚಾಲಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.