ಕರ್ನಾಟಕ

karnataka

ETV Bharat / bharat

ನವಜಾತ ಶಿಶುವಿನ ಹೊಟ್ಟೆಯಿಂದ 8 ಭ್ರೂಣ ಹೊರತೆಗೆದ ರಾಂಚಿ ವೈದ್ಯರು.. ಇದು ವಿಶ್ವದಲ್ಲೇ ಮೊದಲ ಪ್ರಕರಣ - ನವಜಾತ ಮಗುವಿನ ಜೀವ ಉಳಿಸುವಲ್ಲಿ ಯಶಸ್ವಿ

21 ದಿನದ ನವಜಾತ ಹೆಣ್ಣು ಮಗುವಿನ ಹೊಟ್ಟೆಯ ಅನ್ನನಾಳದ ಗೆಡ್ಡೆಗೆ ಎಂಟು ಭ್ರೂಣಗಳಿರುವ ಪ್ರಕರಣ ಜಾರ್ಖಂಡ್ ನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಬೆಳೆಕಿಗೆ ಬಂದಿದೆ. ಏಕಕಾಲದಲ್ಲಿ ಈ ಎಂಟು ಭ್ರೂಣಗಳನ್ನು ಹೊರತೆಗೆದು ನವಜಾತ ಶಿಶುವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ ವ್ಯದ್ಯರು. ಇದು ವಿಶ್ವದಲ್ಲೇ ಮೊದಲ ಪ್ರಕರಣವೆಂದು ಮಾಹಿತಿ ನೀಡಿದ್ದಾರೆ.

Eight fetuses removed from stomach of  newborn girl in Ranchi
ಮಗುವಿನ ಹೊಟ್ಟೆಯಿಂದ 8 ಭ್ರೂಣ ಹೊರತೆಗೆದ ರಾಂಚಿ ವೈದ್ಯರು

By

Published : Nov 3, 2022, 1:48 PM IST

Updated : Nov 3, 2022, 1:58 PM IST

ರಾಂಚಿ(ಜಾರ್ಖಂಡ್​):ವೈದ್ಯಕೀಯ ಲೋಕಕ್ಕೆ ಸವಾಲೆಸೆಯುವ ಬರೀ 21 ದಿನದ ನವಜಾತ ಹೆಣ್ಣು ಮಗುವಿನ ಹೊಟ್ಟೆಯಲ್ಲಿ ಎಂಟು ಭ್ರೂಣ ಇರುವ ಪ್ರಕರಣ ಬುಧವಾರ ಜಾರ್ಖಂಡ್ ನ ರಾಂಚಿಯ ಖಾಸಗಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.

ನವಜಾತ ಹೆಣ್ಣುಮಗು ಅಕ್ಟೋಬರ್ 10, 2022 ರಂದು ರಾಮಗಢದಲ್ಲಿ ಜನಿಸಿತ್ತು. ಮಗುವಿನ ಆರೋಗ್ಯ ಹದಗೆಟ್ಟಾಗ, ರಾಮಗಢದ ಆಸ್ಪತ್ರೆಗೆ ದಾಖಲಿಸಿ, ಸಿಟಿ ಸ್ಕ್ಯಾನ್ ಮಾಡಲಾಯಿತು. ಸಿಟಿ ಸ್ಕ್ಯಾನ್ ವರದಿ ನೋಡಿದ ವೈದ್ಯರು ಹೊಟ್ಟೆಯಲ್ಲಿ ಗಡ್ಡೆ ಇದೆ ಎಂದು ಭಾವಿಸಿದ್ದರು. ಆದರೆ, ನಂತರ ಹೊಟ್ಟೆನೋವು ಕಾಣಿಸಿಕೊಂಡ ತಕ್ಷಣ ನವಜಾತ ಶಿಶುವನ್ನು ಹೆಚ್ಚಿನ ಚಿಕಿತ್ಸೆಗೆ ರಾಂಚಿಗೆ ಕರೆತರಲಾಯಿತು.

ನವಜಾತ ಶಿಶುವಿಗೆ ನವೆಂಬರ್ 1 ರಂದು ರಾಂಚಿ ಖಾಸಗಿ ಆಸ್ಪತ್ರೆಯಲ್ಲಿ ಮುಖ್ಯಮಂತ್ರಿ ಆಯುಷ್ಮಾನ್ ಭಾರತ್ ಯೋಜನೆಯಡಿ ಹೊಟ್ಟೆ ನೋವಿನ ಮೇಲೆ ಶಸ್ತ್ರಚಿಕಿತ್ಸೆ ನಡೆಯಿತು. ಈ ಮಗುವಿನ ಅನ್ನನಾಳದ ಗಡ್ಡೆಗೆ ಸಂಬಂಧಿಸಿದ ಎಂಟು ಭ್ರೂಣಗಳಿರುವುದು ಖಚಿತವಾಯಿತು. ತಕ್ಷಣ ಆಘಾತಕ್ಕೊಳಗಾದ ವೈದ್ಯರು ಈ ಎಂಟು ಭ್ರೂಣಗಳನ್ನು ತೆಗೆದುಹಾಕುವಲ್ಲಿ ಯಶಸ್ವಿಯಾದರು.

ವಿಶ್ವದ ಮೊದಲ ಪ್ರಕರಣ:ಖ್ಯಾತ ಮಕ್ಕಳ ತಜ್ಞ ಡಾ.ರಾಜೇಶ್ ಕುಮಾರ್ ಈ ಕುರಿತು ಮಾತನಾಡಿ, ಸಿಟಿ ಸ್ಕ್ಯಾನ್ ವೇಳೆ ನವಜಾತ ಶಿಶುವಿನ ಹೊಟ್ಟೆಯಲ್ಲಿ ಗಡ್ಡೆ ಇರುವುದು ಕಂಡುಬಂದಿದ್ದು, ಆಪರೇಷನ್ ಮಾಡಿದ ವೇಳೆ ಮಗುವಿನ ಹೊಟ್ಟೆಯೊಳಗಿನ ಎಂಟು ಬೆಳವಣಿಗೆಯಾಗದಿರುವ ಭ್ರೂಣಗಳನ್ನು ಹೊರತೆಗೆಯಲಾಯಿತು. ಈ ಎಂಟು ಭ್ರೂಣಗಳನ್ನು ಏಕಕಾಲದಲ್ಲಿ ತೆಗೆದಿರುವುದು ಬಹುಶಃ ವಿಶ್ವದಲ್ಲೇ ಮೊದಲ ಪ್ರಕರಣವಾಗಲಿದೆ ಎಂದು ಅವರು ಹೇಳಿದರು. ವಿಶ್ವದಾದ್ಯಂತ ಕಡಿಮೆ ಭ್ರೂಣ ಇರುವ ಪ್ರಕರಣಗಳು ಪತ್ತೆಯಾಗಿವೆ. ಆದರೆ 21 ದಿನದ ನವಜಾತ ಹೆಣ್ಣು ಶಿಶುವಿನ ಹೊಟ್ಟೆಯಿಂದ ಎಂಟು ಭ್ರೂಣಗಳನ್ನು ಒಮ್ಮೆಲೆ ತೆಗೆದುಹಾಕುವುದು ಅಚ್ಚರಿಯ ಸಂಗತಿ ಎಂದು ತಿಳಿಸಿದ್ದಾರೆ.

ಎಂಟು ಭ್ರೂಣ ಹೊರತೆಗೆದಿದ್ದು ಅಶ್ಚರ್ಯಕರ..ನವಜಾತ ಶಿಶುವಿನ ಪೋಷಕರು ಗಡ್ಡೆ ಇದೆ ಎಂಬ ದೂರಿನೊಂದಿಗೆ ಆಸ್ಪತ್ರೆಗೆ ಬಂದಿದ್ದರು. 21 ದಿನಗಳ ನಂತರ ನವಜಾತ ಶಿಶುವನ್ನು ಗಮನಿಸಿದ ವೈದ್ಯರು, ಆ ಬಳಿಕ ಆಫರೇಷನ್ ಮಾಡಿ, ವೈದ್ಯರು ಎಂಟು ಭ್ರೂಣಗಳನ್ನು ಒಂದೊಂದಾಗಿ ತೆಗೆಯುವುದು ಒಂದು ಕುತೂಹಲ ಮೂಡಿಸಿತು. ಜಾರ್ಖಂಡ್ ನಲ್ಲಿ ಇಂಥ ಪ್ರಕಣ ಬೆಳಕಿಗೆ ಬಂದಿದ್ದು ಇದೇ ಮೊದಲು. ಇದನ್ನು ಜಗತ್ತಿಗೆ ತಿಳಿಸಲು ಇನ್ನಷ್ಟು ಸಂಶೋಧನೆ ನಡೆಸುತ್ತೇವೆ ಎಂದು ಡಾ ಇಮ್ರಾನ್ ಹೇಳಿದರು.

ಒಂದೂವರೆ ಗಂಟೆ ಆಪರೇಷನ್ ಕೈಗೊಂಡ ವೈದ್ಯರು: ಈ ಆಪರೇಷನ್ ಒಂದೂವರೆ ಗಂಟೆ ಪೀಡಿಯಾ ಸರ್ಜನ್ ಡಾ.ಮಹಮ್ಮದ್ ಇಮ್ರಾನ್ ನೇತೃತ್ವದಲ್ಲಿ ನಡೆದಿದೆ. ವೈದ್ಯರ ತಂಡದಲ್ಲಿ ಅರಿವಳಿಕೆ ತಜ್ಞ ಡಾ.ವಿಕಾಸ್ ಗುಪ್ತಾ, ಡಿಎನ್‌ಬಿ ವಿದ್ಯಾರ್ಥಿ ಡಾ.ಉದಯ್, ದಾದಿಯರು ನವಜಾತ ಶಿಶುವಿನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಮುದ್ದು ಕಂದಮ್ಮಗಳಿಗೆ ಹಾಲುಣಿಸಿ ಆರೈಕೆ ಮಾಡಿದ ಕೇರಳ ಪೊಲೀಸರು.. ವಿಡಿಯೋ ವೈರಲ್​

Last Updated : Nov 3, 2022, 1:58 PM IST

ABOUT THE AUTHOR

...view details