ವೈಶಾಲಿ (ಬಿಹಾರ): ಹಣ್ಣು ಮಾರಾಟ ಮಾಡುವ ವ್ಯಕ್ತಿಯೊಬ್ಬರ ಬಳಿ ಎಂಟು ಜೀವಂತ ಬಾಂಬ್‌ಗಳನ್ನು ಬಿಹಾರ ಪೊಲೀಸರು ಪತ್ತೆ ಹೆಚ್ಚಿ, ಅವುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವೈಶಾಲಿ ಜಿಲ್ಲೆಯ ಹಾಜಿಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಣ್ಣು ಮಾರಾಟಗಾರನ ಬಳಿಯಿದ್ದ ಮೀನು ಸಾಗಣೆ ಕಂಟೈನರ್‌ನಲ್ಲಿ ಈ ಜೀವಂತ ಬಾಂಬ್‌ಗಳನ್ನು ಇಡಲಾಗಿತ್ತು. ಅದರಲ್ಲೂ, ಪೊಲೀಸ್ ಠಾಣೆಯಿಂದ 200 ಮೀಟರ್ ದೂರದಲ್ಲೇ ಬಾಂಬ್‌ಗಳನ್ನು ಅಡಗಿಸಿ ಇಡಲಾಗಿತ್ತು ಎನ್ನಲಾಗಿದೆ.
ವೈಶಾಲಿ ಜಿಲ್ಲೆಯಲ್ಲಿ ಹಣ್ಣು ಮಾರಾಟಗಾರರೊಬ್ಬರು ಹಲವು ಜೀವಂತ ಬಾಂಬ್‌ಗಳನ್ನು ಬಚ್ಚಿಟ್ಟಿದ್ದಾರೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ ಇವುಗಳ ಪತ್ತೆಗೆ ಪೊಲೀಸರು ತಂಡ ರಚಿಸಿದ್ದರು. ಅಂತೆಯೇ, ತಮಗೆ ಸಿಕ್ಕ ಗೌಪ್ಯ ಮಾಹಿತಿ ಮೇರೆಗೆ ಪೊಲೀಸರ ತಂಡವು ಹಣ್ಣು ಮಾರಾಟಗಾರನ ಮೇಲೆ ದಾಳಿ ನಡೆಸಿದೆ. ಈ ವೇಳೆ, ಶೋಧ ಕಾರ್ಯ ನಡೆಸಿದಾಗ ಮೀನು ಸಾಗಣೆ ಕಂಟೈನರ್‌ನಲ್ಲಿ ಒಟ್ಟು ಎಂಟು ಜೀವಂತ ಬಾಂಬ್ಗಳು ಪತ್ತೆಯಾಗಿವೆ.
ತಿರುಗಾಡುತ್ತಾ ಹಣ್ಣು ಮಾರುತ್ತಿದ್ದ ಆರೋಪಿ: ಜೀವಂತ ಬಾಂಬ್ಗಳ ಪತ್ತೆಯಾದ ಬೆನ್ನಲ್ಲೇ ಆರೋಪಿ, ಹಣ್ಣು ಮಾರಾಟಗಾರ ಮೊಹಮ್ಮದ್ ಮಾಸೂಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿ ತಿರುಗಾಡುತ್ತಾ ಹಣ್ಣು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈತನ ಮನೆಯ ಹಿಂದಿನ ಜಮೀನಿನಲ್ಲಿ ಈ ಬಾಂಬ್‌ಗಳನ್ನು ರಟ್ಟಿನಲ್ಲಿ ಸುತ್ತಿ ಇರಿಸಲಾಗಿತ್ತು. ಇವುಗಳನ್ನು ಮನೆಗೆ ತೆಗೆದುಕೊಂಡು ಬಂದಿದ್ದ ಎಂದೂ ಹೇಳಲಾಗುತ್ತಿದೆ.
ಠಾಣೆಯಿಂದ 200 ಮೀಟರ್ ದೂರದಲ್ಲೇ ಬಾಂಬ್ಗಳು ಪತ್ತೆ: ಹಾಜಿಪುರ ನಗರ ಪೊಲೀಸ್ ಠಾಣೆಯಿಂದ ಕೇವಲ 200 ಮೀಟರ್ ದೂರದಲ್ಲೇ ಈ ಬಾಂಬ್ಗಳು ಪತ್ತೆಯಾಗಿವೆ. ಬಾಂಬ್‌ಗಳನ್ನು ಬಚ್ಚಿಟ್ಟಿರುವ ಮಾಹಿತಿ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದಾಗ ಹಣ್ಣು ಮಾರಾಟಗಾರನ ಸುಳಿವು ಸಿಕ್ಕಿದೆ. ಆಗ ಆತನ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿ, ಮನೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಆರೋಪಿ ಮನೆಯಲ್ಲಿ ಈ ಜೀವಂತ ಬಾಂಬ್ಗಳು ಪತ್ತೆಯಾಗಿದ್ದು, ಈ ಮನೆಯು ಠಾಣೆಯಿಂದ ಸ್ವಲ್ವವೇ ದೂರದಲ್ಲಿತ್ತು ಎಂಬುವುದೇ ಆಘಾಕಕಾರಿ, ಅಚ್ಚರಿ ಸಂಗತಿ.
ಪೊಲೀಸರ ಕಂಡ ಓಡಲು ಯತ್ನಿಸಿದ ಆರೋಪಿ: ಜೀವಂತ ಬಾಂಬ್ಗಳು ಜಾಡು ಹಿಡಿದು ಪೊಲೀಸ್ ವ್ಯಾನ್ ತಲುಪುತ್ತಿದ್ದಂತೆ ಆರೋಪಿಯು ಸ್ಥಳದಿಂದ ಓಡಿ ಹೋಗಲು ಯತ್ನಿಸಿದ್ದಾನೆ. ಆಗ ಬೆನ್ನಟ್ಟಿ ಹೋಗಿ ಪೊಲೀಸರು ಆತನನ್ನು ಹಿಡಿದಿದ್ದಾರೆ. ಅಲ್ಲಿಂದ ನೇರವಾಗಿ ಮನೆಗೆ ಕರೆದುಕೊಂಡು ಹೋಗಿ ಶೋಧ ಕಾರ್ಯ ನಡೆಸಿದ್ದಾರೆ. ಆಗ ಮನೆಯ ಛಾವಣಿಯಲ್ಲಿ ಮೀನು ಸಾಗಣೆ ಕಂಟೈನರ್‌ನಲ್ಲಿ ಬಾಂಬ್ಗಳು ಇರಿಸಲಾಗಿರುವುದು ಕಂಡು ಬಂದಿದೆ. ಅವುಗಳನ್ನು ವಶಕ್ಕೆ ಪಡೆದು ಪೊಲೀಸರು ನಿಷ್ಕ್ರಿಯಗೊಳಿಸಿ, ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣಾಧಿಕಾರಿ ಸುಬೋಧ್ ಕುಮಾರ್ ಮಾತನಾಡಿ, ಜೀವಂತ ಬಾಂಬ್ಗಳು ಕುರಿತ ಸಿಕ್ಕಿ ಮಾಹಿತಿ ಮೇರೆಗೆ ಎಸ್‌ಐ ಪಂಕಜ್ ಕುಮಾರ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಎಸ್‌ಐ ಮತ್ತುವರ ಪೊಲೀಸ್ ತಂಡ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ, ಎಂಟು ಜೀವಂತ ಬಾಂಬ್‌ಗಳನ್ನು ವಶಪಡಿಸಿಕೊಂಡಿದೆ. ಜೊತೆ ಆರೋಪಿ ಹಣ್ಣು ಮಾರಾಟಗಾರನನ್ನು ಬಂಧಿಸಲಾಗಿದೆ. ಈ ಬಾಂಬ್ಗಳ ಬಗ್ಗೆ ನಿಖರವಾ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಯೂಟ್ಯೂಬ್ ನೋಡಿ ಸ್ಫೋಟಕ ತಯಾರಿಸಿ, ಪ್ರಯೋಗಿಸಿದ ಬಾಲಕರು: ಶಾಲಾ ವಾಹನಕ್ಕೆ ಹಾನಿ