ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಬಂಪರ್ ನೀಡಿದೆ. 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ನೀಡಿಬೇಕಿದ್ದ ಡಿಎ ಹೆಚ್ಚಳ ನೀಡಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ. ಹೀಗಾಗಿ ನೌಕರರ ದೀರ್ಘಕಾಲೀನ ಕಾಯುವಿಕೆಗೆ ತೆರೆ ಬೀಳಲಿದೆ. 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಬಲ್ ಬೋನಂಜಾ ಸಿಗಲಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ತಾತ್ಕಾಲಿಕವಾಗಿ ನಿಂತಿದ್ದ ಈ ಪ್ರಕ್ರಿಯೆ ಕೊನೆಗೊಳ್ಳಲಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರ ಮುಂದಿನ ತಿಂಗಳಿಂದ ಜಾರಿಗೆ ಬರಲಿದೆ. ಡಿಎ ಹೆಚ್ಚಳ ಜುಲೈ ತಿಂಗಳ ವೇತನದೊಂದಿಗೆ ದೊರೆಯಲಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಜೆಸಿಎಂ (ಸ್ಟಾಫ್ ಸೈಡ್) ಡಿಎ ಬಗ್ಗೆ ಪತ್ರವೊಂದನ್ನು ಬಿಡುಗಡೆ ಕೂಡಾ ಮಾಡಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.