ಕರ್ನಾಟಕ

karnataka

ETV Bharat / bharat

66 ರ ಹರೆಯದ ವೃದ್ಧೆ ಕೈ ಹಿಡಿದ 77 ರ ವೃದ್ಧ.. ಮಗನೇ ಮುಂದೆ ನಿಂತು ಮಾಡಿದರು ಕಲ್ಯಾಣ! - ನಿವೃತ್ತ ಶಿಕ್ಷಕ ಮದುವೆ

77 ವರ್ಷದ ವೃದ್ಧ 66 ವರ್ಷದ ವೃದ್ಧೆಯನ್ನು ವಿವಾಹವಾಗಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ.

66 ರ ಹರೆಯದ ಮಹಿಳೆ ಕೈ ಹಿಡಿದ 77 ರ ವೃದ್ಧ
66 ರ ಹರೆಯದ ಮಹಿಳೆ ಕೈ ಹಿಡಿದ 77 ರ ವೃದ್ಧ

By

Published : Sep 23, 2021, 11:00 AM IST

Updated : Sep 23, 2021, 11:11 AM IST

ಸಾಂಗ್ಲಿ (ಮಹಾರಾಷ್ಟ್ರ): ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತಾ ಹೇಳುತ್ತಾರೆ. ಆದರೆ, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ವಿಭಿನ್ನವಾದ ಮದುವೆಯೊಂದು ನಡೆದಿದೆ. 79 ವರ್ಷದ ನಿವೃತ್ತ ಶಿಕ್ಷಕ 66 ವರ್ಷದ ವಿಧವೆಯನ್ನು ಮದುವೆಯಾಗಿದ್ದಾರೆ. ದಾದಾಸಾಹೇಬ್​​ ಸಾಲುಂಖೆ ಹಾಗೂ ಶಾಲಿನಿ ನವ ವಿವಾಹಿತರು.

66 ರ ಹರೆಯದ ವೃದ್ಧೆ ಕೈ ಹಿಡಿದ 77 ರ ವೃದ್ಧ

ದಾದಾಸಾಹೇಬ್​ ಸಾಲುಂಖೆ(79) ಕಳೆದ ಹಲವು ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದು, ಇರುವ ಒಬ್ಬ ಮಗನಿಂದ ಪ್ರತ್ಯೇಕವಾಗಿ ವಾಸವಿದ್ದಾರೆ. ಒಂಟಿಯಾಗಿ ವಾಸವಿದ್ದ ಅವರಿಗೆ ಆಸರೆಯಾಗಿ ಮತ್ತೊಂದು ಜೀವ ಬೇಕೆನಿಸಿದೆ. ಹಾಗಾಗಿ ಅವರು, ಈ ವಿಚಾರವನ್ನು ಮಗನ ಮುಂದೆ ಪ್ರಸ್ತಾಪಿಸಿದ್ದಾರೆ. ತಂದೆಯ ಈ ಮಾತಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಮಗ, ವಧುವಿಗಾಗಿ ಹಲವೆಡೆ ವಿಚಾರಿಸಿದ್ದಾರೆ.

ಹಲವು ದಿನಗಳ ಕಾಲ ಹುಡುಕಾಟ ನಡೆಸಿದ್ರೂ, ವಧು ಸಿಗದಿದ್ದಾಗ ಸಾಲುಂಖೆಯವರಿಗೆ ಸಾಂಗ್ಲಿಯಲ್ಲಿ ಮೀರಜ್ ಮುನ್ಸಿಪಲ್ ಕಾರ್ಪೊರೇಷನ್ ನಡೆಸುತ್ತಿರುವ ಅಸ್ತಾ ಬೇಗಾರ್ ಕೇಂದ್ರದ ( ನಿರ್ಗತಿಕ ಮಹಿಳೆಯರ ಕೇಂದ್ರ) ಬಗ್ಗೆ ಮಾಹಿತಿ ತಿಳಿಯುತ್ತದೆ. ಅಲ್ಲಿಗೆ ಭೇಟಿ ನೀಡಿದ ಸಾಲುಂಖೆ, ಅಲ್ಲಿನ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತಾರೆ. ಬಳಿಕ ಅವರು 66 ವರ್ಷದ ಶಾಲಿನಿ ಎಂಬುವರನ್ನ ಇಷ್ಟ ಪಡುತ್ತಾರೆ.

ಇದನ್ನೂ ಓದಿ: ಬೆಚ್ಚಿಬಿದ್ದ ಸೇಡಂ... ಕೌಟುಂಬಿಕ ಕಲಹ - ಹೆಂಡತಿ, ಮಗಳನ್ನೇ ಕೊಂದ ಪಾಪಿ

ಪುಣೆಯ ಉಪನಗರವಾದ ಪಾಶಾನ್​ನಲ್ಲಿ ವಾಸವಿದ್ದ ಶಾಲಿನಿ, ಕಳೆದ ಹಲವು ವರ್ಷಗಳ ಹಿಂದೆ ಪತಿ ಮತ್ತು ಮಗನನ್ನು ಕಳೆದುಕೊಂಡು ಅಸ್ತ ಬೇಗಾರ್​ ಕೇಂದ್ರದಲ್ಲಿ ವಾಸವಿದ್ದರು. ಸಾಲುಂಖೆ ಹಾಗೂ ಶಾಲಿನಿ ಪರಸ್ಪರ ಒಪ್ಪಿದ ನಂತರ ಕುಟುಂಬಸ್ಥರು ಅವರಿಗೆ ಮದುವೆ ಮಾಡಿಸಿದ್ದಾರೆ.

Last Updated : Sep 23, 2021, 11:11 AM IST

ABOUT THE AUTHOR

...view details