ನವದೆಹಲಿ: ಕಳೆದ 75 ವರ್ಷಗಳ ಹಿಂದೆ ಡಿಸೆಂಬರ್ 9 ರಂದು ಮೊದಲ ಬಾರಿಗೆ ಸಂವಿಧಾನ ರಚನಾ ಸಭೆ ನಡೆಸಲಾಯಿತು. ಇದರ ಅಧ್ಯಕ್ಷತೆಯನ್ನು ಅಂದಿನ ಸದನದ ಹಿರಿಯ ಸದಸ್ಯರಾಗಿದ್ದ ಡಾ.ಸಚ್ಚಿದಾನಂದ ಸಿನ್ಹಾ ಅವರು ವಹಿಸಿದ್ದು, ಅವರನ್ನು ಆಚಾರ್ಯ ಕೃಪಲಾನಿ ಪೀಠಕ್ಕೆ ಪರಿಚಯಿಸಿದ್ದರು.
75 ವರ್ಷ ಪೂರೈಸಿದ ಭಾರತ ಸಂವಿಧಾನ ರಚನಾ ಸಭೆಯ ಮೊದಲ ಸಭೆ; ಮೋದಿ ಗೌರವ ನಮನ - Dr. Sachchidananda Sinha
1946ರಲ್ಲಿ ನಡೆದ ಸಂವಿಧಾನ ರಚನಾ ಸಭೆಯ ಮೊದಲ ಸಭೆ ಇಂದಿಗೆ 75 ವರ್ಷಗಳನ್ನು ಪೂರೈಸಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ನಲ್ಲಿ ಕೆಲ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ, ಭಾರತದ ಜನರಿಗೆ ಯೋಗ್ಯವಾದ ಸಂವಿಧಾನವನ್ನು ನೀಡಿರುವ ಮಹನೀಯರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಸಂವಿಧಾನ ರಚನಾ ಸಭೆಯ ಮೊದಲ ಸಭೆ
1946ರಲ್ಲಿ ನಡೆದ ಸಂವಿಧಾನ ರಚನಾ ಸಭೆಯ ಮೊದಲ ಸಭೆ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಜೊತೆಗೆ ಭಾರತದ ಜನರಿಗೆ ಯೋಗ್ಯವಾದ ಸಂವಿಧಾನವನ್ನು ನೀಡಿರುವ ಮಹನೀಯರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮೋದಿ, ನಮ್ಮ ಮೊದಲ ಸಂವಿಧಾನ ರಚನಾ ಸಭೆಯು ಇಂದಿಗೆ 75 ವರ್ಷಗಳನ್ನು ಪೂರೈಸಿದೆ. ಈ ಸಭೆಯಲ್ಲಿ ಕೈಗೊಂಡ ನಡಾವಳಿಗಳ ಕುರಿತು ಹಾಗೂ ಅದರ ಭಾಗವಾಗಿದ್ದ ಗಣ್ಯರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವಂತೆ ನಾನು ಯುವ ಜನತೆಗೆ ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.