ಕರ್ನಾಟಕ

karnataka

ETV Bharat / bharat

75ನೇ ವರ್ಷದ ಸ್ವಾತಂತ್ರ್ಯೋತ್ಸವ; ಕ್ವಿಟ್ ಇಂಡಿಯಾ ಚಳುವಳಿಗೆ ಒಡಿಶಾ ಬುಡಕಟ್ಟು ಜನರ ಕೊಡುಗೆ ಸ್ಮರಣೀಯ - ಒಡಿಶಾ ಬುಡಕಟ್ಟು

ಸುಮಾರು 200 ವರ್ಷಗಳ ಬ್ರಿಟಿಷ್ ಆಳ್ವಿಕೆಯನ್ನು ಕೊನೆಗೊಳಿಸಲು ಮಹಾತ್ಮ ಗಾಂಧಿಯವರು 1942 ರಲ್ಲಿ 'ಕ್ವಿಟ್ ಇಂಡಿಯಾ ಚಳುವಳಿ'ಯನ್ನು ಪ್ರಾರಂಭಿಸಿದ್ದರು. ಆ ಸಮಯದಲ್ಲಿ ಒಡಿಶಾದ ಸಾವಿರಾರು ಬುಡಕಟ್ಟು ಜನಾಂಗದವರ ಕೊಡುಗೆಯನ್ನು ಯಾರೂ ಮರೆಯುಂತಿಲ್ಲ.

75 years of Indian Independence: Unsung heroes of the freedom movement from Odisha deserve recognition
75ನೇ ವರ್ಷದ ಸ್ವಾತಂತ್ರ್ಯೋತ್ಸವ; ಕ್ವಿಟ್ ಇಂಡಿಯಾ ಚಳುವಳಿಗೆ ಒಡಿಶಾ ಬುಡಕಟ್ಟು ಜನರ ಕೊಡುಗೆ ಸ್ಮರಣೀಯ

By

Published : Nov 6, 2021, 1:17 AM IST

ಭುವನೇಶ್ವರ್‌: ಭಾರತೀಯ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಅಂಶವೆಂದರೆ ಬುಡಕಟ್ಟು ಸಮುದಾಯದ ಸಕ್ರಿಯ ಭಾಗವಹಿಸಿರುವುದು. ದೇಶವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವಾಗ, ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಒಡಿಶಾ ಬುಡಕಟ್ಟು ಜನಾಂಗದವರ ಕೊಡುಗೆಯನ್ನು ಸ್ಮರಿಸಬೇಕಿದೆ.

ಎಲ್ಲರಿಗೂ ತಿಳಿದಿರುವಂತೆ, ಮಹಾತ್ಮ ಗಾಂಧಿಯವರು 1942 ರಲ್ಲಿ 'ಕ್ವಿಟ್ ಇಂಡಿಯಾ ಚಳುವಳಿ'ಯನ್ನು ಪ್ರಾರಂಭಿಸಿದರು, ಸುಮಾರು 200 ವರ್ಷಗಳ ಬ್ರಿಟಿಷ್ ಆಳ್ವಿಕೆಯನ್ನು ಕೊನೆಗೊಳಿಸಲು ಅಂದು ಸ್ಪಷ್ಟವಾದ ಕರೆ ನೀಡಿದ್ದರು. ಇದೇ ಸಮಯದಲ್ಲಿ, ಒಡಿಶಾದ ಕೊರಾಪುಟ್ ಪ್ರದೇಶದ ಬುಡಕಟ್ಟು ಜನರು (ಗುಣಪುರದಿಂದ ಪಾಪದಹಂಡಿ ಮತ್ತು ಮಥಿಲಿವರೆಗೆ) ಬ್ರಿಟಿಷರ ವಿರುದ್ಧ ತಮ್ಮ ಕೆಚ್ಚೆದೆಯ ಚಳುವಳಿಯನ್ನು ಮುಂದುವರೆಸಿದ್ದರು.

ಹುತಾತ್ಮ ಯೋಧ ಲಕ್ಷ್ಮಣ ನಾಯಕ್ ನೇತೃತ್ವದ ಮತ್ತಿಲಿ ಪೊಲೀಸ್ ಠಾಣೆಯ ಮೇಲಿನ ದಾಳಿ, ಗುಣುಪುರ ಬಳಿ ಬುಡಕಟ್ಟು ಬಂಡಾಯ ಹಾಗೂ ಪಾಪದಹಂಡಿಯ ತುರಿ ನದಿಯ ದಡದಲ್ಲಿ ನೂರಾರು ಆದಿವಾಸಿಗಳ ಬಲಿದಾನ ಬ್ರಿಟಿಷರಿಗೆ ಬಲವಾದ ಸಂದೇಶವನ್ನು ರವಾನಿಸಿತ್ತು. 1942 ರಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಕೋರಾಪುಟ್ ಭಾಗವಹಿಸಿದ್ದು ಇಂದಿಗೂ ಯಾರೂ ಮರೆಯುಂತಿಲ್ಲ. ಅವಿಭಜಿತ ಕೋರಾಪುಟ್ ಜಿಲ್ಲೆಯ ಬುಡಕಟ್ಟು ಜನರು ಒಡಿಶಾದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಯಶಸ್ಸಿನಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ ಎಂದು ಸರ್ವೋದಯ ಕಾರ್ಯಕರ್ತ ಕೃಷ್ಣ ಸಿಂಗ್ ಹೇಳಿದ್ದಾರೆ.

ಹುತಾತ್ಮರನ್ನು ಗುರುತಿಸುವಲ್ಲಿ ವಿಫಲ!

ನೂರಾರು ಆದಿವಾಸಿಗಳು ಮಾಡಿದ ಪ್ರಯತ್ನಗಳು ಮತ್ತು ತ್ಯಾಗಗಳಿಂದ ಭಾರತದ ಸ್ವಾತಂತ್ರ್ಯ ಹೋರಾಟ ಸಾಧ್ಯವಾದರೂ, ಜೈಲಿಗೆ ಹೋದ ಅಥವಾ ಬ್ರಿಟಿಷರಿಂದ ಗಲ್ಲಿಗೇರಿಸಿದ ಕೆಲವರಿಗೆ ಮಾತ್ರ ಹುತಾತ್ಮರ ಸ್ಥಾನಮಾನವನ್ನು ನೀಡಲಾಯಿತು. ಆದರೆ, ಇತರರ ಹೆಸರುಗಳು ಇತಿಹಾಸದ ಪುಟಗಳಿಂದ ಕಣ್ಮರೆಯಾಯಿತು ಎಂಬುದು ವಿಪರ್ಯಾಸ.

ಹುತಾತ್ಮ ಯೋಧ ಲಕ್ಷ್ಮಣ್ ನಾಯಕ್ ಅವರ ಜನ್ಮಸ್ಥಳವಾದ ತೆಂತುಲಿಗುಮ್ಮಿನ ಜನರು ಹಾಡದ ಆದಿವಾಸಿ ವೀರರನ್ನು ಗೌರವಿಸಲಿ ಎಂದು ಹಾರೈಸುತ್ತಾರೆ. ಶಹೀದ್ ಲಕ್ಷ್ಮಣ್ ನಾಯಕ್ ಬಗ್ಗೆ ಎಲ್ಲರಿಗೂ ಗೊತ್ತಿತ್ತು. ನಮ್ಮ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಮಥಲಿಯಲ್ಲಿ ಬ್ರಿಟಿಷ್ ಪೊಲೀಸರ ಗುಂಡಿನ ದಾಳಿಯಲ್ಲಿ ಸತ್ತವರು ಯಾರು ಎಂದು ಮತಿಲಿಯ ಜನರು ಸಹ ಹೇಳಲು ಸಾಧ್ಯವಿಲ್ಲ. ಈ ಹುತಾತ್ಮರನ್ನು ಗುರುತಿಸದೆ ಇರುವುದು ದೊಡ್ಡ ಅನ್ಯಾಯ ಎಂದು ಕೋರಾಪುಟ್‌ನ ಮಾಜಿ ಜಿಲ್ಲಾಧಿಕಾರಿ ಗದಾಧರ್ ಪರಿದಾ ಹೇಳಿದ್ದಾರೆ.

ಈ ವರ್ಷ ನಾವು ಸ್ವಾತಂತ್ರ್ಯದ 75 ನೇ ವರ್ಷಾಚರಣೆಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಹುತಾತ್ಮರ ಕುಟುಂಬ ಸದಸ್ಯರನ್ನು ಗುರುತಿಸಬೇಕು ಎಂದು ಪರಿದಾ ಹೇಳಿದ್ದಾರೆ.

ದುರದೃಷ್ಟವಶಾತ್, ಲಕ್ಷ್ಮಣ್ ನಾಯಕ್ ಅವರಂತಹ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸಹ ಸರ್ಕಾರ ನೆನಪಿಸಿಕೊಳ್ಳುವುದು ಅಪರೂಪ. ಲಕ್ಷ್ಮಣ್ ನಾಯಕ್ ಅವರ ಜನ್ಮ ಮತ್ತು ಪುಣ್ಯತಿಥಿಯಂದು ಅಧಿಕಾರಿಗಳು, ರಾಜಕೀಯ ಮುಖಂಡರು ಹಾಗೂ ಸಮಾಜದ ನಾನಾ ವರ್ಗಗಳ ಜನರು ತೆಂತುಲಿಗುಮ್ಮನ ದರ್ಶನ ಪಡೆಯುತ್ತಾರೆ. ಆದರೆ ಹುತಾತ್ಮರು ಮತ್ತವರ ಗ್ರಾಮವನ್ನು ಮರೆತುಬಿಡುತ್ತಾರೆ. ತೆಂತುಲಿಗುಮ್ಮದಲ್ಲಿ ಹುತಾತ್ಮ ಯೋಧನ ಕುಟುಂಬದ ಸದಸ್ಯರ ಬಗ್ಗೆ ಸರ್ಕಾರ ತೋರುತ್ತಿರುವ ಅಸಡ್ಡೆ ಆಘಾತಕಾರಿಯಾಗಿದೆ. ಹುತಾತ್ಮರ ಕುಟುಂಬದ ಸದಸ್ಯರು ಮನ್ನಣೆ ಪಡೆಯಲು ಇನ್ನೂ ಕಾಯುತ್ತಿದ್ದಾರೆ. ಮೂರು ತಲೆಮಾರುಗಳು ಕಳೆದರೂ, ಹುತಾತ್ಮರ ಕುಟುಂಬಕ್ಕೆ ವಸತಿ ವ್ಯವಸ್ಥೆ ಕಲ್ಪಿಸಲು ಇಲ್ಲಿನ ಸರ್ಕಾರದಿಂದ ಸಾಧ್ಯವಾಗಿಲ್ಲ.

ಹುತಾತ್ಮ ಯೋಧ ಲಕ್ಷ್ಮಣ ನಾಯಕ್‌ ಕುಟುಂಬಕ್ಕೆ ಸಿಗದ ಸೌಲಭ್ಯ!

ಹುತಾತ್ಮರ ಕುಟುಂಬಗಳಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸುವ ಬಗ್ಗೆ ಸರ್ಕಾರ ಮಾತನಾಡುತ್ತದೆ. ಭರವಸೆಗಳನ್ನು ನೀಡುತ್ತಿದೆಯೇ ಹೊರತು ಯಾವುದೇ ಪರಿಹಾರ ಅವರಿಗೆ ತಲುಪಿಲ್ಲ. ಎಲ್ಲರೂ ಲಕ್ಷ್ಮಣ್ ನಾಯಕ್ ಬಗ್ಗೆ ದೊಡ್ಡದಾಗಿ ಮಾತನಾಡುತ್ತಾರೆ. ಆದರೆ ಅವರ ಕುಟುಂಬಕ್ಕೆ ಏನೂ ಮಾಡಿಲ್ಲ, ಸರ್ಕಾರ ಗಮನಹರಿಸಿಲ್ಲ, ನಮಗೆ ಮನೆ ಕೂಡ ಕೊಟ್ಟಿಲ್ಲ ಎಂದು ಹುತಾತ್ಮ ಯೋಧ ಲಕ್ಷ್ಮಣ ನಾಯಕ್ ಅವರ ಮೊಮ್ಮಗ ಮಧು ನಾಯಕ್ ಹೇಳಿದರು.

ಏತನ್ಮಧ್ಯೆ, ಜಿಲ್ಲಾಡಳಿತವು ತೆಂತುಲಿಗುಮ್ಮ ಮತ್ತು ಬೈಪಾರಿಗುಡಾ ಬ್ಲಾಕ್‌ನ ಎಲ್ಲಾ ದೂರದ ಪ್ರದೇಶಗಳ ಅಭಿವೃದ್ಧಿಗೆ ಕೆಲಸ ಪ್ರಾರಂಭಿಸಿದೆ ಎಂದು ಹೇಳುತ್ತದೆ.

ಹುತಾತ್ಮ ಯೋಧ ಲಕ್ಷ್ಮಣ ನಾಯಕರ ಗ್ರಾಮವಾದ ತೆಂತುಲಿಗುಮ್ಮ ನಮಗೆ ಪ್ರಮುಖ ಪಂಚಾಯಿತಿಯಾಗಿದ್ದು, ಕಳೆದ ವರ್ಷ ಆರ್‌ಡಿ ಡಿಇಪಿಟಿಯು ಕೋಲಾಬ್‌ ಮೇಲೆ ಬೃಹತ್ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಬೋಯಿಪರಿಗುಡ ಬ್ಲಾಕ್‌ನಿಂದ ಗ್ರಾಮಕ್ಕೆ ಸೇವೆ ಒದಗಿಸುವ ಗುರಿ ಹೊಂದಿದ್ದೇವೆ ಎಂದು ಜಿಲ್ಲಾಧಿಕಾರಿ ಅಬ್ದಲ್ ಅಕ್ತರ್ ಹೇಳಿದ್ದಾರೆ.

For All Latest Updates

ABOUT THE AUTHOR

...view details