ನವದೆಹಲಿ :75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಭಾರತ ಜ.26ರ ಗಣರಾಜ್ಯೋತ್ಸವದಂದು 75 ಸೇನಾ ವಿಮಾನಗಳು ಆಗಸದಲ್ಲಿ ಹಾರಾಟ ನಡೆಸುವ ಮೂಲಕ ಅತಿದೊಡ್ಡ ವೈಮಾನಿಕ ಪ್ರದರ್ಶನ ನೀಡಲಿವೆ. ಸೇನೆಗೆ ಹೊಸದಾಗಿ ಸೇರಿಕೊಂಡ 5 ರಾಫೆಲ್ ಯುದ್ಧ ವಿಮಾನಗಳೂ ಪ್ರದರ್ಶನದಲ್ಲಿ ಮೈನವಿರೇಳಿಸಲಿವೆ.
ವಾಯುಸೇನೆ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, 75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಹಿನ್ನೆಲೆ ದೆಹಲಿಯ ರಾಜಪಥದಲ್ಲಿ ಭಾರತೀಯ ವಾಯುಸೇನೆ, ನೌಕಾದಳ, ಭೂಸೇನೆಯ 75 ಯುದ್ಧ ವಿಮಾನಗಳು ಅದ್ಭುತ ವೈಮಾನಿಕ ಪ್ರದರ್ಶನಕ್ಕೆ ಸಜ್ಜಾಗಿವೆ. 5 ರಾಫೆಲ್ ಯುದ್ಧ ವಿಮಾನಗಳು ಗಮನ ಸೆಳೆಯಲಿವೆ ಎಂದು ತಿಳಿಸಿದ್ದಾರೆ.