ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಇಂದು 73ನೇ ಗಣರಾಜ್ಯೋತ್ಸವ ಸಂಭ್ರಮ... ರಾಜಪಥ್​ನಲ್ಲಿ ಹೀಗಿರಲಿದೆ ಪಥಸಂಚಲನ - ಗಂತಂತ್ರ ದಿನ

ದೇಶದಲ್ಲಿ ಕೋವಿಡ್​​ ಅಬ್ಬರ ಜೋರಾಗಿರುವ ಕಾರಣ ನವದೆಹಲಿಯ ರಾಜಪಥ್​ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ವೀಕ್ಷಣೆಗೆ ಆನ್​ಲೈನ್​ ವ್ಯವಸ್ಥೆ ಮಾಡಲಾಗಿದೆ. ರಾಜಪಥ್​​ನಲ್ಲಿ ಗಣರಾಜ್ಯೋತ್ಸವ ವೀಕ್ಷಿಸಲು ಆಸನಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಮಾಡಲಾಗಿದೆ.

73rd Republic Day Celebration in india
ಗಣರಾಜ್ಯೋತ್ಸವ ಸಂಭ್ರಮ

By

Published : Jan 26, 2022, 2:44 AM IST

Updated : Jan 26, 2022, 2:56 AM IST

ನವದೆಹಲಿ:ದೇಶಾದ್ಯಂತ ಇಂದು 73ನೇ ಗಣರಾಜ್ಯೋತ್ಸವ ಆಚರಣೆ ಸಂಭ್ರಮ ಮನೆಮಾಡಿದೆ. 1949ರ ನವೆಂಬರ್ 26ರಂದು ರಚಿಸಲಾದ ದೇಶದ ಸಂವಿಧಾನವನ್ನು 1950ರ ಜನವರಿ 26ರಂದು ಅಂಗೀಕರಿಸಲಾಯಿತು. ಈ ದಿನವನ್ನು ದೇಶದ ಗಣರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ.

ಭಾರತದ ಗಣರಾಜ್ಯೋತ್ಸವವು ಕೇವಲ ಆಚರಣೆಯಾಗಿರದೆ, ಅದು ದೇಶದ ರಾಜತಾಂತ್ರಿಕ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ. ಈ ಬಾರಿ ಮಹಾಮಾರಿ ಕೊರೊನಾ ನಡುವೆಯೂ ಗಣತಂತ್ರ ದಿನದ ಆಚರಣೆಗೆ ಇಡೀ ದೇಶ ಸನ್ನದ್ಧವಾಗಿದೆ. ಈ ದಿನದ ಇಂದು ಭಾರತೀಯ ಸೇನಾ ಪಡೆಗಳು ಮತ್ತು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಉತ್ಸಾಹ ಪ್ರದರ್ಶನ ನಡೆಯುತ್ತದೆ.

ಡಿಜಿಟಲ್​​ ನೋಂದಣಿ:ದೇಶದಲ್ಲಿ ಕೋವಿಡ್​​ ಅಬ್ಬರ ಜೋರಾಗಿರುವ ಕಾರಣ ನವದೆಹಲಿಯ ರಾಜಪಥ್​ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ವೀಕ್ಷಣೆಗೆ ಆನ್​ಲೈನ್​ ವ್ಯವಸ್ಥೆ ಮಾಡಲಾಗಿದೆ. ರಾಜಪಥ್​​ನಲ್ಲಿ ಗಣರಾಜ್ಯೋತ್ಸವ ವೀಕ್ಷಿಸಲು ಆಸನಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಮಾಡಲಾಗಿದೆ. ಅಲ್ಲದೆ ಸಾಂಕ್ರಾಮಿಕದ ಕಾರಣದಿಂದ ಈ ವರ್ಷವೂ ಯಾವುದೇ ವಿದೇಶಿ ಅತಿಥಿಗಳಿಗೆ ಆಹ್ವಾನ ನೀಡಿಲ್ಲ.

ಪರೇಡ್​​ ಸಮಯ ಬದಲಾವಣೆ:ಪ್ರತಿ ವರ್ಷ ರಾಜಪಥ್​ನಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಬೆಳಗ್ಗೆ 10 ಗಂಟೆಗೆ ಪರೇಡ್​ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಇದರಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು, ಪರೇಡ್ ಕಾರ್ಯಕ್ರಮ 10:30ಕ್ಕೆ ಆರಂಭಗೊಳ್ಳಲಿದೆ. ಪರೇಡ್ ಪ್ರಾರಂಭವಾಗುವ ಮುನ್ನ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಾಣ ಕಳೆದುಕೊಂಡ ಭದ್ರತಾ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಶಹೀದೋಂ ಕೋ ಶತ ಶತ ನಮನ ಕಾರ್ಯಕ್ರಮ ಹೊಸದಾಗಿ ನಡೆಯಲಿದ್ದು, ರಾಷ್ಟ್ರೀಯ ಕೆಡೆಟ್​ ಕಾರ್ಪ್ಸ್‌ ಇದನ್ನ ನಡೆಸಿಕೊಡಲಿದೆ. ಇದರ ಜೊತೆಗೆ ಭಾರತೀಯ ವಾಯುಪಡೆಯ 75 ವಿಮಾನಗಳಿಂದ ವೈಮಾನಿಕ ಪ್ರದರ್ಶನ ನಡೆಯಲಿದೆ. ಪ್ರಮುಖವಾಗಿ ವಿವಿಧ ರಾಜ್ಯಗಳಿಂದ ಆಯ್ಕೆಯಾಗಿರುವ 480 ನೃತ್ಯಗಾರರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಅನೇಕ ವಿಭಿನ್ನ ಕಾರ್ಯಕ್ರಮಗಳು ಜರುಗಲಿವೆ.

ಗಣರಾಜ್ಯೋತ್ಸವ

ಕೋವಿಡ್ ಸುರಕ್ಷತೆಗೆ ಆದ್ಯತೆ:ಪರೇಡ್​ನಲ್ಲಿ ಭಾಗಿಯಾಗಲಿರುವ ಎಲ್ಲರೂ ಕೋವಿಡ್​ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಎರಡು ಡೋಸ್ ಪಡೆದ ವಯಸ್ಕರು ಮತ್ತು ಒಂದು ಡೋಸ್​​ ಲಸಿಕೆ ಪಡೆದ 15 ವರ್ಷ ಮತ್ತು ಮೇಲ್ಪಟ್ಟ ಮಕ್ಕಳಿಗೆ ಮೆರವಣಿಗೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಈ ಬಾರಿಯ ಗಣರಾಜ್ಯೋತ್ಸವ ಪರೇಡ್​​ನಲ್ಲಿ 15 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳಿಗೆ ಅನುಮತಿ ನೀಡಿಲ್ಲ. ಪರೇಡ್ ವೇಳೆ ಸಾಮಾಜಿಕ ಅಂತರದೊಂದಿಗೆ ಎಲ್ಲ ಕೋವಿಡ್ ನಿಯಮ ಪಾಲನೆ ಮಾಡುವುದು ಹಾಗೂ ಮಾಸ್ಕ್​ ಬಳಕೆ ಕಡ್ಡಾಯವಾಗಿದೆ.

ಶಹೀದೋಂ ಕೋ ಶತ ಶತ ನಮನ ಕಾರ್ಯಕ್ರಮ: ಈ ಸಲದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದೇಶ ರಕ್ಷಣೆಯಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೋಸ್ಕರ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶಹೀದೋಂ ಕೋ ಶತ ಶತ ನಮನ ಎಂಬ ಶೀರ್ಷಿಕೆಯಡಿ ಎನ್​​ಸಿಸಿ ಕೆಡೆಟ್​​ಗಳಿಗೆ ಕೃತಜ್ಞತಾ ಫಲಕ ನೀಡಲಾಗುವುದು. ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸಲಿದ್ದಾರೆ.

ಕಲಾ ಕುಂಭ - ರಾಜಪಥದಲ್ಲಿ ಸ್ಕ್ರಾಲ್​ ಪೇಂಟಿಂಗ್​:ಮೆರವಣಿಗೆ ಸಂದರ್ಭದಲ್ಲಿ ರಾಜಪಥದ ರಸ್ತೆ ಉದ್ದಕ್ಕೂ ಕಲಾ ಕುಂಭ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಕೇಂದ್ರ ರಕ್ಷಣಾ ಮತ್ತು ಸಂಸ್ಕೃತಿ ಸಚಿವಾಲಯ ಜಂಟಿಯಾಗಿ ಈ ಕಾರ್ಯಕ್ರಮ ಸಿದ್ಧಪಡಿಸಿವೆ. ಪೇಂಟಿಂಗ್​​ನಲ್ಲಿ 600ಕ್ಕೂ ಅಧಿಕ ಹೆಸರಾಂತ ಕಲಾವಿದರು ಮತ್ತು ದೇಶದ ಯುವ ಪ್ರತಿಭೆಗಳ ಚಿತ್ರ ಬಿಡಿಸಲಾಗಿದೆ. ಇದರಲ್ಲಿ ಭಾರತೀಯ ಸಾಂಸ್ಕೃತಿಕ ಪರಂಪರೆ ಸಹ ಅನಾವರಣಗೊಳ್ಳಲಿದೆ.

ವಂದೇ ಭಾರತಂ ನೃತ್ಯ ಉತ್ಸವ: ಗಣರಾಜ್ಯೋತ್ಸವದಲ್ಲಿ ಇದೇ ಮೊದಲ ಬಾರಿಗೆ ವಿವಿಧ ರಾಜ್ಯದ 480 ನೃತ್ಯಗಾರರು ವಂದೇ ಭಾರತಂ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅದಕ್ಕಾಗಿ ಕಳೆದ ಎರಡು ತಿಂಗಳಲ್ಲಿ ವಿವಿಧ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ ನಡೆಸಲಾಗಿತ್ತು. ಕೊನೆಯದಾಗಿ ಆಯ್ಕೆಯಾಗಿರುವ ಸ್ಪರ್ಧಿಗಳು ಪರೇಡ್​ನಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.

ವೀರ ಗಾಥಾ:ಶಾಲಾ ಮಕ್ಕಳಿಂದ ಶೌರ್ಯದ ಕಥೆ.. ಕೇಂದ್ರ ರಕ್ಷಣಾ ಸಚಿವಾಲಯ ಹಾಗೂ ಶಿಕ್ಷಣ ಸಚಿವಾಲಯದ ಸಹಯೋಗದಿಂದ ಆಯೋಜನೆಗೊಂಡಿದ್ದ ವೀರ ಗಾಥಾ(ಕಥೆ) ಸ್ಪರ್ಧೆಯಲ್ಲಿ ಸುಮಾರು 4,800 ಶಾಲೆಗಳಿಂದ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇದರಲ್ಲಿ ಕವನ, ಪ್ರಬಂಧ, ರೇಖಾಚಿತ್ರ ಸೇರಿದಂತೆ ಅನೇಕ ಸ್ಫೂರ್ತಿದಾಯಕ ಕಥೆ ಬರೆದಿದ್ದರು. ಕೊನೆಯದಾಗಿ 25 ವಿಜೇತರಿಗೆ ಆಯ್ಕೆ ಮಾಡಲಾಗಿದ್ದು, ನಾಳೆ ನಡೆಯುವ ಗಣರಾಜ್ಯೋತ್ಸವದಲ್ಲಿ 10 ಸಾವಿರ ರೂ. ನಗದು ನೀಡಲಾಗುವುದು.

ಕರ್ನಾಟಕದ ಸ್ತಬ್ಧಚಿತ್ರ:ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ 'ಕರ್ನಾಟಕದ ಸಾಂಪ್ರದಾಯಿಕ ಕರಕುಶಲತೆಯ ತೊಟ್ಟಿಲು' ಸ್ತಬ್ಧಚಿತ್ರವು ಪರೇಡ್‌ನಲ್ಲಿ ಭಾಗವಹಿಸಲಿದೆ. ಸತತ 13ನೇ ಬಾರಿಗೆ ನಮ್ಮ ಸ್ತಬ್ಧಚಿತ್ರವು ಆಯ್ಕೆಯಾಗಿದೆ. ದಕ್ಷಿಣ ಭಾರತದಿಂದ ಕರ್ನಾಟಕ ಮಾತ್ರ ಆಯ್ಕೆಯಾಗಿದೆ.

ಎಲ್​ಇಡಿ ಪರದೆ ವ್ಯವಸ್ಥೆ:ಗಣರಾಜ್ಯೋತ್ಸ ಕಾರ್ಯಕ್ರಮದಲ್ಲಿ 10ಕ್ಕೂ ಅಧಿಕ ಎಲ್​​ಇಡಿ ಪರದೆ ಆಯೋಜನೆ ಮಾಡಲಾಗಿದ್ದು, ಇದರ ಮೇಲೆ ವಿವಿಧ ರಾಷ್ಟ್ರ ಪ್ರೇಮ ಸಾರುವ ಸಿನಿಮಾ, ಸಶಸ್ತ್ರ ಪಡೆಗಳ ಕಿರುಚಿತ್ರ ಸೇರಿದಂತೆ ಮೆರವಣಿಗೆ ವಿಡಿಯೋ ಪ್ರದರ್ಶನಗೊಳ್ಳಲಿವೆ. ಇದರ ಜೊತೆಗೆ ಅನೇಕ ಡ್ರೋನ್​ಗಳಿಂದ ವಿಶೇಷ ಶೋ ನಡೆಯಲಿವೆ.

ಅಲ್ಲದೆ ಈ ವರ್ಷದ ಗಣರಾಜ್ಯೋತ್ಸವ ಪರೇಡ್​​ನ್ನು ಡಿಡಿ ನ್ಯೂಸ್ ಮತ್ತು ಅದರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ನೀವು ಲೈವ್ ವೀಕ್ಷಿಸಬಹುದು. ಬಹುತೇಕ ಖಾಸಗಿ ಸುದ್ದಿ ವಾಹಿನಿಗಳು ಗಣರಾಜ್ಯೋತ್ಸವ ಪರೇಡ್ ಅನ್ನು ನೇರ ಪ್ರಸಾರ ಮಾಡಲಿವೆ.

ಇದನ್ನೂ ಓದಿ:ಪದ್ಮಭೂಷಣ ಪ್ರಶಸ್ತಿ ತಿರಸ್ಕರಿಸಿದ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ

Last Updated : Jan 26, 2022, 2:56 AM IST

ABOUT THE AUTHOR

...view details