ಗೋರಖ್‌ಪುರ (ಉತ್ತರ ಪ್ರದೇಶ):ಕೆಲ ವಿಚಿತ್ರ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಉತ್ತರ ಪ್ರದೇಶದ ಗೋರಖ್ಪುರನ ಗ್ರಾಮವೊಂದರಲ್ಲಿ ನಡೆದ ಮದುವೆ ಈ ಹಾಟ್ ಟಾಪಿಕ್. ಸುಮಾರು 70 ವರ್ಷದ ಮಾವ ತನ್ನ 28 ವರ್ಷದ ವಿಧವೆಯಾಗಿದ್ದ ಸೊಸೆಯನ್ನೇ ವಿವಾಹವಾಗಿದ್ದಾರೆ. ಬದಲ್‌ಗಂಜ್ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಇದು.
ಒಬ್ಬರಿಗೊಬ್ಬರು ಇಷ್ಟಪಟ್ಟು ದೇವಸ್ಥಾನದಲ್ಲಿ ಹಾರ ಬದಲಾಸಿ ಮದುವೆಯಾದರಂತೆ. ಸೊಸೆಯನ್ನು ಹೆಂಡತಿಯಾಗಿ ಸ್ವೀಕರಿಸಿದ ಮಾವ ಆಕೆಯ ಹಣೆಗೆ ಸಿಂಧೂರ ಹಚ್ಚಿದ್ದಾರೆ. ದೇವರ ದರ್ಶನ ಪಡೆದು ಮನೆಗೆ ಮರಳಿದ್ದಾರೆ. ಈ ಮದುವೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾವ ಮತ್ತು ಸೊಸೆಯ ನಡುವಿನ ಸಂಬಂಧದ ಬಗ್ಗೆ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿವೆ.
ಸಂಪೂರ್ಣ ವಿವರ: ಛಾಪಿಯಾ ಉಮ್ರಾವ್ ಗ್ರಾಮದ ನಿವಾಸಿ ಕೈಲಾಶ್ ಯಾದವ್ ಅವರಿಗೆ 70 ವರ್ಷ. ಮೃತಪಟ್ಟ ತನ್ನ ಮಗನ ಪತ್ನಿ ಪೂಜಾಳನ್ನೇ ಇವರು ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಪೂಜಾ ಅವರ ವಯಸ್ಸು 28. ಕೈಲಾಶ್ ಅವರ ಪತ್ನಿ 12 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇವರ ನಾಲ್ಕು ಮಕ್ಕಳಲ್ಲಿ ಮೂರನೇ ಮಗ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು. ಗಂಡನ ಮರಣಾ ನಂತರ ಸೊಸೆ ಪೂಜಾ ತನ್ನ ಜೀವನವನ್ನು ಬೇರೆಡೆ ಸಾಗಿಸಲು ಹೊರಟಿದ್ದರು. ಮನೆಯಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಆದರೆ ದಿನಕಳೆದಂತೆ ಸೊಸೆ ಮಾವನಿಗೆ ಮನಸೋತಳು.