ರೋಗಿಗಳ ಪಾಲಿಗೆ ‘ಸಂಜೀವಿನಿ’ಯಾದ ಟೆಲಿಮೆಡಿಸಿನ್ ಯೋಜನೆ.. ರಾಜ್ಯದಲ್ಲಿ ಈ ಸೇವೆ ಪಡೆದವರೆಷ್ಟು? - ಇ - ಸಂಜೀವಿನಿ ಬಳಕೆಯಲ್ಲಿ ಟಾಪ್ 10 ರಾಷ್ಟ್ರಗಳು
ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಕೋವಿಡ್ ಹಾಗೂ ಕೋವಿಡ್ಯೇತರ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಇಲಾಖೆ ರಾಷ್ಟ್ರೀಯ ಟೆಲಿಮಿಡಿಸಿನ್ ಯೋಜನೆಯನ್ನು ಜಾರಿಗೆ ತಂದಿತ್ತು. ಇದು ರೋಗಿಗಳ ಪಾಲಿಗೆ ಸಂಜೀವಿನಿಯಂತಾಗಿದೆ.
ಸಂಜೀವಿನಿ
By
Published : Jul 4, 2021, 10:21 AM IST
ನವದೆಹಲಿ: ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರ ಆರೋಗ್ಯದ ಹಿತಕ್ಕಾಗಿ ಜಾರಿಗೆ ತಂದ ಇ- ಸಂಜೀವಿನಿ ಎಂಬ ರಾಷ್ಟ್ರೀಯ ಟೆಲಿಮೆಡಿಸಿನ್ ಸೇವೆಯು ಈವರೆಗೆ 7 ಮಿಲಿಯನ್(70 ಲಕ್ಷ) ಜನರ ಜತೆ ಸಮಾಲೋಚನೆ ನಡೆಸಿದೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಜೂನ್ನಲ್ಲಿ ಇ-ಸಂಜೀವಿನಿ ಯೋಜನೆಯ ಸೇವೆಯನ್ನು 12.5 ಲಕ್ಷ ರೋಗಿಗಳು ಪಡೆದಿದ್ದಾರೆ. ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಈ ಯೋಜನೆ ಜಾರಿಯಲ್ಲಿದೆ ಎಂದು ತಿಳಿಸಿದೆ.
ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ಜನ ಇ-ಸಂಜೀವಿನಿ ಪ್ರಯೋಜನ ಪಡೆದಿದ್ದಾರೆ ?
ಇ-ಸಂಜೀವಿನಿಯೊಂದು ಟೆಲಿಮೆಡಿಸಿನ್ ಪ್ಲಾಟ್ಫಾರ್ಮ್. ಇಲ್ಲಿ 100ಕ್ಕೂ ಹೆಚ್ಚು ಅನುಭವಿ ವೈದ್ಯರು, ನುರಿತ ತಜ್ಞರು ಸೇವೆ ಸಲ್ಲಿಸುತ್ತಿದ್ದಾರೆ. 2020 ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಕೊರೊನಾ ಕಾಣಿಸಿಕೊಂಡಾಗ, ಕೇಂದ್ರ ಮತ್ತು ಆರೋಗ್ಯ ಸಚಿವಾಲಯ ಇ ಸಂಜೀವಿನಿ ಒಪಿಡಿಯನ್ನು ಪ್ರಾರಂಭಿಸಿತು. ಸಾರ್ವಜನಿಕರು ತಮ್ಮ ಮನೆಗಳಲ್ಲಿಯೇ ಇದ್ದು, ವೈದ್ಯರನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಈ ಯೋಜನೆಯ ಉದ್ದೇಶವಾಗಿತ್ತು.
ಇ-ಸಂಜೀವಿನಿಯಲ್ಲಿ 420 ಒಪಿಡಿಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಸೂಪರ್ ಸ್ಪೆಷಾಲಿಟಿ ಒಪಿಡಿಗಳೂ ಇದ್ದು, ಏಮ್ಸ್ನಂತಹ ಪ್ರೀಮಿಯಂ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತವೆ. ಕಳೆದ ಎರಡು ವಾರಗಳಲ್ಲಿ 50 ಸಾವಿರಕ್ಕೂ ಹೆಚ್ಚು ರೋಗಿಗಳು ಈ ಸೇವೆಯ ಲಾಭ ಪಡೆದಿದ್ದಾರೆ. ಈ ಅತ್ಯಾಧುನಿಕ ರಾಷ್ಟ್ರೀಯ ಟೆಲಿಮೆಡಿಸಿನ್ ಸೇವೆಯ ವ್ಯಾಪ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸತತವಾಗಿ ಕಾರ್ಯನಿರ್ವಹಿಸುತ್ತಿದೆ.
ಜೂನ್ನಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮೊಹಾಲಿಯಲ್ಲಿರುವ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಮತ್ತು ಸಿ-ಡಿಎಸಿ ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿದೆ. ಇದರ ಭಾಗವಾಗಿ ಇ-ಸಂಜೀವಿನಿ ಸೇವೆಗಳನ್ನು ದೇಶಾದ್ಯಂತ ವಿಸ್ತರಿಸಲು ಅನುವು ಮಾಡಿಕೊಟ್ಟಿತು. ಜುಲೈ 1, 2021 ರಂದು, ಡಿಜಿಟಲ್ ಇಂಡಿಯಾದ ಆರನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ, ಇ ಸಂಜೀವಿನಿಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯರನ್ನು ಶ್ಲಾಘಿಸಿದ್ದರು.
ಅಲ್ಪಾವಧಿಯಲ್ಲಿಯೇ ರಾಷ್ಟ್ರೀಯ ಟೆಲಿಮೆಡಿಸಿನ್ ಸೇವೆಯು ನಗರ ಮತ್ತು ಗ್ರಾಮೀಣ ಭಾರತದಲ್ಲಿ ಅಸ್ತಿತ್ವದಲ್ಲಿರುವ ಡಿಜಿಟಲ್ ಆರೋಗ್ಯ ಪ್ಲಗ್ ಮಾಡುವ ಮೂಲಕ ಭಾರತೀಯ ಆರೋಗ್ಯ ವಿತರಣಾ ವ್ಯವಸ್ಥೆಗೆ ಸಹಾಯ ಮಾಡಲು ಪ್ರಾರಂಭಿಸಿದೆ. ದ್ವಿತೀಯ ಮತ್ತು ತೃತೀಯ ಹಂತದ ಆಸ್ಪತ್ರೆಗಳ ಮೇಲಿನ ಹೊರೆ ಕಡಿಮೆ ಮಾಡುತ್ತಿದೆ.
ಇ - ಸಂಜೀವಿನಿ ಬಳಕೆಯಲ್ಲಿ ಟಾಪ್ 10 ರಾಷ್ಟ್ರಗಳ ಪಟ್ಟಿ ಇಲ್ಲಿದೆ.