ದಾಮೋಹ್(ಮಧ್ಯಪ್ರದೇಶ):ಆಟವಾಡುತ್ತಿದ್ದಾಗ ತೆರೆದ ಬೋರ್ವೆಲ್ ಒಳಗೆ ಬಿದ್ದಿದ್ದ ಮೂರು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಸ್ಥಳೀಯ ಆಡಳಿತ ಮತ್ತು ಎಸ್‌ಡಿಆರ್‌ಎಫ್ ತಂಡದ ಸತತ 7 ಗಂಟೆಗಳ ಕಾರ್ಯಾಚರಣೆ ನಡುವೆಯೂ ಬಾಲಕ ಬದುಕುಳಿಯಲಿಲ್ಲ.
ಮಧ್ಯಪ್ರದೇಶದ ಬರಖೇರಾ ಘಟನೆ ಸಂಭವಿಸಿದ್ದು, ಬೋರ್ವೆಲ್ನ 15 ಅಡಿ ಆಳದಲ್ಲಿ ಬಾಲಕ ಸಿಲುಕಿಕೊಂಡಿದ್ದ. ದಾಮೋಹ್ ಜಿಲ್ಲೆಯ ಧರ್ಮೇಂದ್ರ ಅತ್ಯಾ ಎಂಬುವರ ಮಗ ಪ್ರಿನ್ಸ್ ಎಂಬಾತ ಮೃತ ಬಾಲಕ. 7 ಗಂಟೆಗಳ ಕಾರ್ಯಾಚರಣೆ ಬಳಿಕ ಈತನನ್ನು ಹೊರತೆಗೆಯಲಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದಾಗಲೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.