ಕರ್ನಾಟಕ

karnataka

ETV Bharat / bharat

ಟೆರೇಸ್​ಗೆ ಕರೆದೊಯ್ದು 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಇಬ್ಬರು ಅಪ್ರಾಪ್ತರು - ಮೆರ್ಟಾ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯಲ್ಲಿ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ

ಬಾಲಕಿಯನ್ನು ಟೆರೇಸ್​​​​ಗೆ ಕರೆದೊಯ್ದು ಇಬ್ಬರು ಅಪ್ರಾಪ್ತ ಬಾಲಕರು ಅತ್ಯಾಚಾರ ನಡೆಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಾಗಿದೆ.

ಮೆರ್ಟಾ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯಲ್ಲಿ 7 ವರ್ಷದ ಬಾಲಕಿ ಮೇಲೆ  ಅತ್ಯಾಚಾರ ಎಸಗಲಾಗಿದೆ
ಮೆರ್ಟಾ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯಲ್ಲಿ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ

By

Published : Jul 7, 2022, 8:36 PM IST

ನಾಗೌರ್ (ರಾಜಸ್ಥಾನ್​) : ಮೆರ್ಟಾ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯಲ್ಲಿ 7 ವರ್ಷದ ಬಾಲಕಿ ಮೇಲೆ ಇಬ್ಬರು ಅಪ್ರಾಪ್ತರು ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ 6 ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇಬ್ಬರು ಅಪ್ರಾಪ್ತ ಆರೋಪಿಗಳು ಟೆರೇಸ್​ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಆರೋಪಿಗಳಿಬ್ಬರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ವಿಷಯದ ಗಂಭೀರತೆ ಗಮನಿಸಿದ ಪೊಲೀಸ್ ವರಿಷ್ಠಾಧಿಕಾರಿ ರಾಮಮೂರ್ತಿ ಜೋಶಿ ಅವರು ಮೆರ್ಟಾ ರೋಡ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಆರೋಗ್ಯ ಹದಗೆಟ್ಟಾಗ ಘಟನೆ ಬಹಿರಂಗ:ವರದಿ ಪ್ರಕಾರ ಜುಲೈ 4 ರಂದು ಬಾಲಕಿಯ ಆರೋಗ್ಯ ಹದಗೆಟ್ಟಾಗ ಪೋಷಕರು ಆಸ್ಪತ್ರೆಗೆ ದಾಖಲು ಮಾಡಿದ್ದರು. ನಂತರ ಬಾಲಕಿಗೆ ಹೊಟ್ಟೆನೋವಿಗೆ ಔಷಧ ನೀಡಲಾಗಿದೆ. ಮರುದಿನ ಅಂದರೆ ಜುಲೈ 5 ರಂದು ಯಾವುದೇ ಸುಧಾರಣೆ ಕಾಣಲಿಲ್ಲ, ಆಗ ಹೆದರಿದ ಹುಡುಗಿ ತನಗೆ ಆದ ಘಟನೆಯನ್ನು ತನ್ನ ತಂದೆಗೆ ತಿಳಿಸಿದ್ದಾಳೆ.

ಬಾವಿಗೆ ಕರೆದೊಯ್ದು ಕೃತ್ಯ: ಸುಮಾರು 5 - 6 ದಿನಗಳ ಹಿಂದೆ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಇಬ್ಬರು ಅಪ್ರಾಪ್ತ ಆರೋಪಿಗಳು ಬಾಲಕಿಗೆ ಆಮಿಷ ಒಡ್ಡಿ ತಾರಸಿಗೆ ಕರೆದೊಯ್ದಿದ್ದಾರೆ. ಬಾಲಕಿ ಅಳುವುದಕ್ಕೆ ಮುಂದಾದಾಗ ನಿನ್ನ ತಾಯಿ ನಿನ್ನ ತಂದೆಯನ್ನು ಚಾಕುವಿನಿಂದ ಕೊಚ್ಚಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬೆದರಿಕೆಯಿಂದ ಬೆದರಿದ ಬಾಲಕಿ ಸುಮ್ಮನಾಗಿ ನಾಲ್ಕು ದಿನಗಳ ವರೆಗೂ ಘಟನೆ ಮುಚ್ಚಿಟ್ಟಿದ್ದಾಳೆ.

ತನಿಖೆಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ ಮೆರ್ಟಾ ಅವರಿಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಸಂತ್ರಸ್ತೆಗೆ ವೈದ್ಯಕೀಯ ಚಿಕಿತ್ಸೆ ನೀಡಿದ್ದಾರೆ. ಹಾಗೆ ಅಪ್ರಾಪ್ತ ಮಕ್ಕಳ ವಯಸ್ಸಿನ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:ದೇಶದಲ್ಲಿ ತೆರಿಗೆ ಕಟ್ಟುವುದನ್ನು ತಪ್ಪಿಸಲು ಶೇ 50ರಷ್ಟು ವಹಿವಾಟು ಚೀನಾಕ್ಕೆ ರವಾನಿಸಿದ ವಿವೋ

ABOUT THE AUTHOR

...view details