ಕರ್ನಾಟಕ

karnataka

ETV Bharat / bharat

ಆಟವಾಡುತ್ತಿದ್ದ ಬಾಲಕಿ ಅಪಹರಿಸಿ ಕೊಲೆ: ಬಿಡುವಂತೆ ಸ್ಥಳೀಯರು ಕೂಗಿದರೂ ಕೇಳದ ಹಂತಕ..ವಿಡಿಯೋ - ಮನೆಗೆ ಬಾಲಕಿಯನ್ನು ಹೊತ್ತೊಯ್ದು

ಬಾಲಕಿಯನ್ನು ಬಿಡುವಂತೆ ಸ್ಥಳೀಯರು ಕೂಗಿದರೂ ಸಹ ಆರೋಪಿ ಬಾಲಕಿಗೆ ಪದೇ ಪದೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ಜರುಗಿದೆ.

7-year-old-girl-abducted-stabbed-to-death-by-youth-cctv-footage
ಆಟವಾಡುತ್ತಿದ್ದ ಬಾಲಕಿಯ ಅಪಹರಿಸಿ ಕೊಲೆ: ಬಿಡುವಂತೆ ಸ್ಥಳೀಯರು ಕೂಗಿದರೂ ಕೇಳದ ಹಂತಕ

By

Published : Sep 28, 2022, 6:56 PM IST

ಇಂದೋರ್ (ಮಧ್ಯಪ್ರದೇಶ): ಆಟವಾಡುತ್ತಿದ್ದ ಬಾಲಕಿಯನ್ನು ಯುವಕನೊಬ್ಬ ಅಪಹರಿಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ. ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಇಲ್ಲಿನ ಆಜಾದ್ ನಗರದಲ್ಲಿ 7 ವರ್ಷದ ಬಾಲಕಿ ಆಟವಾಡುತ್ತಿದ್ದರು. ಅದೇ ಕಾಲೋನಿಯಲ್ಲಿ ವಾಸಿಸುವ 25 ವರ್ಷದ ಸದ್ದಾಂ ಎಂಬುವವ ತನ್ನ ಮನೆಗೆ ಬಾಲಕಿಯನ್ನು ಹೊತ್ತೊಯ್ದು ಚಾಕುವಿನಿಂದ ಇರಿಯಲಾಗಿದೆ.

ಆಟವಾಡುತ್ತಿದ್ದ ಬಾಲಕಿಯ ಅಪಹರಿಸಿ ಕೊಲೆ: ಬಿಡುವಂತೆ ಸ್ಥಳೀಯರು ಕೂಗಿದರೂ ಕೇಳದ ಹಂತಕ

ಮನೆಯೊಳಗಿಂದ ಬಾಲಕಿ ಸಹಾಯಕ್ಕಾಗಿ ಕೂಗುತ್ತಿದ್ದಾರೆ. ಇದನ್ನು ಕೇಳಿಸಿಕೊಂಡ ಸ್ಥಳೀಯರು ಬಾಲಕಿಯನ್ನು ಬಿಡುವಂತೆ ಬಾಗಿಲು ಬಡಿದಿದ್ದಾರೆ. ಅಲ್ಲದೇ, ಕಿಟಕಿಗಳಿಗೆ ಕಲ್ಲು ಒಡೆದಿದ್ದಾರೆ. ಆದರೆ, ಆರೋಪಿ ಬಾಲಕಿಗೆ ಪದೇ ಪದೆ ಚಾಕುವಿನಿಂದ ಇರಿದಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನಂತರ ಸ್ಥಳೀಯರು ಬಾಗಿಲು ಒಡೆದು ನೋಡಿದಾಗ ಬಾಲಕಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಇದಾದ ಬಳಿಕ ಸ್ಥಳೀಯರೇ ಸದ್ದಾಂನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಜೊತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಸಹ ನಡೆಸಿದ್ದಾರೆ.

ಕೆಲ ತಿಂಗಳ ಹಿಂದೆ ಬಾಲಕಿಯ ತಾಯಿ ಮೃತಪಟ್ಟಿದ್ದು, ತಂದೆಯೊಂದಿಗೆ ವಾಸವಾಗಿದ್ದರು. ಕೊಲೆ ಆರೋಪಿ ಸದ್ದಾಂ ಹಳೆಯ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ ಎಂದು ನಗರ ಪೊಲೀಸ್​ ನಿರೀಕ್ಷಕ ಇಂದ್ರೇಶ್ ತ್ರಿಪಾಠಿ ತಿಳಿಸಿದ್ದಾರೆ.

ಇದನ್ನೂ ಓದಿ:ಮಹಿಳಾ ಟ್ರಾಫಿಕ್ ಪೊಲೀಸ್ ಹತ್ಯೆಗೆ ವಕೀಲನಿಂದ ಯತ್ನ: ವಿಡಿಯೋ

ABOUT THE AUTHOR

...view details