ಲೈಂಗಿಕತೆ ಅನ್ನೋದು ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲೊಂದು. ಯಾವುದೇ ವ್ಯಕ್ತಿ ಪ್ರೌಢಾವಸ್ಥೆಗೆ ಕಾಲಿಟ್ಟಾಗ, ಅವರಿಗೆ ಸೆಕ್ಸ್ನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವಯಸ್ಸಾದಂತೆ ಜವಾಬ್ದಾರಿಗಳೂ ಹೆಚ್ಚಾಗಲಿದ್ದು, ಲೈಂಗಿಕತೆಯಿಂದ ವಂಚಿತರೂ ಆಗಬಹುದು. ದೀರ್ಘ ಕಾಲದವರೆಗೆ ಸೆಕ್ಸ್ ಮಾಡದಿದ್ದರೆ, ಅವರು ಅಡ್ಡ ಪರಿಣಾಮಗಳನ್ನು ಎದುರಿಸುತ್ತಾರೆ.
ಆತಂಕದ ಭಾವನೆ
ಸೆಕ್ಸ್, ವ್ಯಕ್ತಿಯಲ್ಲಿ ಉಂಟಾಗುವ ಆತಂಕ, ಕೋಪವನ್ನು ಕಡಿಮೆ ಮಾಡುತ್ತದೆ. ಲೈಂಗಿಕತೆಯಿಂದ ಆತಂಕಗಳು ದೂರಾಗಿ ನಿರಾಳ ಭಾವನೆ ಮೂಡುತ್ತದೆ. ಸಂಭೋಗದ ವೇಳೆ ಆಕ್ಸಿಟೋಸಿನ್ ಮತ್ತು ಎಂಡಾರ್ಫಿನ್ ಹಾರ್ಮೋನುಗಳು ಉತ್ಪತ್ತಿಯಾಗಲಿದ್ದು, ಇದು ಮನಸ್ಸಿಗೆ ಸಂತೋಷ ನೀಡುತ್ತದೆ. ಇದರಿಂದಾಗಿ ನಿಮ್ಮಲ್ಲಿರುವ ಒತ್ತಡಗಳು ದೂರವಾಗುತ್ತವೆ. ಉತ್ತಮ ನಿದ್ರೆ ಮಾಡಲು ಸಹಾಯವಾಗುತ್ತದೆ.
ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ
ಲೈಂಗಿಕತೆಯು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದೆ. ಏಕೆಂದರೆ ಲೈಂಗಿಕತೆಯು ದೇಹದಲ್ಲಿ ಇಮ್ಯುನೊಗ್ಲಾಬ್ಯುಲಿನ್ ಎ ಅಥವಾ ಐಜಿಎ ಮಟ್ಟವನ್ನು ಹೆಚ್ಚಿಸುತ್ತದೆ. ಇದು ರೋಗಾಣುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಮರೆಗುಳಿತನಕ್ಕೆ ಕಾರಣ
ಉತ್ತಮ ಜೀವನ ನಡೆಸಲು ಸೆಕ್ಸ್ ತುಂಬಾ ಸಹಕಾರಿ. ಸಕ್ರಿಯ ಲೈಂಗಿಕತೆಯು ಸಾಮಾನ್ಯ ಜೀವನ ನಡೆಸಲು ಸಹಕಾರಿ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಈ ಹೇಳಿಕೆ ಮೇಲೆ ಇನ್ನೂ ಹಲವು ಸಂಶೋಧನೆಗಳು ನಡೆಯುತ್ತಿವೆ. ಸೆಕ್ಸ್ ಮಾಡದಿದ್ದರೆ (ಅಥವಾ ಕಡಿಮೆ ಲೈಂಗಿಕ ಆಸಕ್ತಿ) ಮರೆಗುಳಿತನಕ್ಕೆ ಕಾರಣವಾಗಬಹುದು.
ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆ
ಒಂದು ವೇಳೆ ಸೆಕ್ಸ್ ಮಾಡದಿದ್ದರೆ, ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ನೀವು ಲೈಂಗಿಕತೆಯಲ್ಲಿ ತೊಡಗಿದರೆ, ನಿಮ್ಮ ಒತ್ತಡ, ಆತಂಕ ಎಲ್ಲವೂ ದೂರಾಗಲಿದೆ. ಸೆಕ್ಸ್ ಒಂದು ವ್ಯಾಯಾಮದಂತಿದ್ದು, ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ದೀರ್ಘಕಾಲದವರಗೆ ಲೈಂಗಿಕತೆಯಲ್ಲಿ ತೊಡಗಿಕೊಳ್ಳದಿದ್ದರೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆಯಿದೆ.
ಪುರುಷರಿಗೆ ಪ್ರಾಸ್ಟೇಟ್ ಕ್ಯಾನ್ಸರ್ (ಶಿಶ್ನದ ಕ್ಯಾನ್ಸರ್)
ಲೈಂಗಿಕತೆಯಲ್ಲಿ ಹೆಚ್ಚು ಸಕ್ರಿಯವಾಗಿರುವ ಪುರುಷರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಅಪಾಯ ಕಡಿಮೆ. ಈ ಬಗ್ಗೆ 30 ಸಾವಿರ ಪುರುಷರ ಮೇಲೆ ಅಧ್ಯಯನ ನಡೆಸಿದ್ದು, ತಿಂಗಳಿಗೆ ಒಬ್ಬ ವ್ಯಕ್ತಿ ಸರಾಸರಿ 21 ಕ್ಕಿಂತ ಹೆಚ್ಚು ಬಾರಿ ಸೆಕ್ಸ್ ಮಾಡಿದ್ರೆ ಈ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಎಂದು ತಿಳಿದುಬಂದಿದೆ. ಅಸುರಕ್ಷಿತ ಲೈಂಗಿಕ ಅಭ್ಯಾಸಗಳು ಕ್ಯಾನ್ಸರ್ಗೆ ಕಾರಣವಾಗಬಹುದು
ಸೆಕ್ಸ್ ಮಾಡದಿದ್ರೆ, ಯೋನಿಗೆ ಅಪಾಯ
ಮಹಿಳೆಯರು ದೀರ್ಘಕಾಲದವರೆಗೆ ಸೆಕ್ಸ್ ಮಾಡದಿದ್ರೆ ಯೋನಿಯಲ್ಲಿ ಬದಲಾವಣೆಯಾಗಬಹುದು. ಬಹು ದಿನಗಳ ನಂತರ ಸೆಕ್ಸ್ ಮಾಡಿದ್ರೆ, ಯೋನಿಯಲ್ಲಿ ನೋವು ಕಾಣಿಸಿಕೊಳ್ಳುವುದರ ಜತೆಗೆ ರಕ್ತಸ್ರಾವವಾಗುವ ಸಾಧ್ಯತೆಯಿದೆ. ಮುಟ್ಟು ನಿಂತ ನಂತರ ನಿಯಮಿತವಾಗಿ ಲೈಂಗಿಕತೆಯಲ್ಲಿ ತೊಡಗದಿದ್ದರೆ, ಯೋನಿ ಒಣಗಬಹುದು.