ಕರ್ನಾಟಕ

karnataka

ETV Bharat / bharat

ಅಲ್ಕೊಹಾಲ್​ ನೀಡಿ, ಏಳು ಜನರಿಂದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ - ರಾಜಸ್ಥಾನದ ಇತ್ತೀಚಿನ ಸುದ್ದಿ

ಅಪ್ರಾಪ್ತೆಗೆ ಅಲ್ಕೊಹಾಲ್​ ನೀಡಿ ಸುಮಾರು ಐದು ದಿನಗಳ ಕಾಲ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

Gang rape
Gang rape

By

Published : Mar 8, 2021, 5:02 PM IST

ಕೋಟಾ (ರಾಜಸ್ಥಾನ): ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ರಾಜಸ್ಥಾನದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಏಳು ಮಂದಿ ದುಷ್ಕರ್ಮಿಗಳು ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದಾರೆ.

ರಾಜಸ್ಥಾನದ ಕೋಟಾದಲ್ಲಿನ ರಾಮಗಂಜ್ಮಂಡಿ ಉಪವಿಭಾಗದ ಸುಕೇಟ್​ ಪೊಲೀಸ್​​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಏಳು ದುಷ್ಕರ್ಮಿಗಳು 15 ವರ್ಷದ ಅಪ್ರಾಪ್ತೆಗೆ ಅಲ್ಕೊಹಾಲ್​ ನೀಡಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇದೇ ವಿಚಾರವಾಗಿ ಬಾಲಕಿ ಕುಟುಂಬಸ್ಥರು ಪೊಲೀಸರ ಮೇಲೆ ಅಪವಾದ ಮಾಡಿದ್ದು, ಬಾಲಕಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ನಕಲಿ ಆಧಾರ್​ ಕಾರ್ಡ್ ತೋರಿಸಿ ಅಪ್ರಾಪ್ತೆ ಮದುವೆ: ವರನ ಕುಟುಂಬ ಪರಾರಿ!

ಸುಕೇಟ್​ ಪೊಲೀಸ್ ಠಾಣೆ ಅಧಿಕಾರಿ ನಾರಾಯಣ್ ಸಿಂಗ್​ ತಿಳಿಸಿರುವ ಪ್ರಕಾರ, ಮಾರ್ಚ್​ 6ರಂದು ಅಪ್ರಾಪ್ತೆ ಕುಟುಂಬಸ್ಥರು ದೂರು ನೀಡಿದ್ದು, ಅದರ ಪ್ರಕಾರ ಫೆಬ್ರವರಿ 25ರಂದು ಮಹಿಳೆಯೋರ್ವಳು ಅಪ್ರಾಪ್ತೆಯನ್ನ ಕರೆದುಕೊಂಡು ಇಲಾವಾಡ್​ಗೆ ಹೋಗಿದ್ದಾಳೆ. ಅಲ್ಲಿ ಮಾದಕ ವಸ್ತು ನೀಡಿ, ನಂತರ ಅತ್ಯಾಚಾರ ನಡೆಸಲಾಗಿದ್ದು, ಏಳು ಜನರು ಸುಮಾರು ಐದು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ತದನಂತರ ಸುಕೇಟ್​ಗೆ ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದಿದ್ದಾರೆ.

ABOUT THE AUTHOR

...view details