ಕರ್ನಾಟಕ

karnataka

ETV Bharat / bharat

ಕಂದಕಕ್ಕೆ ಬಿತ್ತು ಮದುವೆಗೆ ಅತಿಥಿಗಳ ಕರೆದೊಯ್ಯುತ್ತಿದ್ದ ವಾಹನ: 7 ಜನರ ದುರ್ಮರಣ - ಕಂದಕಕ್ಕೆ ಬಿದ್ದ ಟಾಟಾ ಸುಮೋ

ಸುರನಕೋಟ್​ಯಿಂದ ಬುಫ್ಲಿಯಾಜ್​ಗೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಟಾಟಾ ಸುಮೋ ಬಿದ್ದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ಪರಿಹಾರ ಕಾರ್ಯ ನಡೆಯುತ್ತಿದೆ.

ಜಮ್ಮು-ಕಾಶ್ಮೀರದ ಪೂಂಚ್​​ ಜಿಲ್ಲೆಯಲ್ಲಿ ರಸ್ತೆ ಅಪಘಾತ
Road accident in Poonch

By

Published : Mar 31, 2022, 7:18 PM IST

ಶ್ರೀನಗರ (ಜಮ್ಮು-ಕಾಶ್ಮೀರ): ಮದುವೆಗೆ ಅತಿಥಿಗಳನ್ನು ಕರೆದೊಯ್ಯುತ್ತಿದ್ದ ಟಾಟಾ ಸುಮೋವೊಂದು ಕಂದಕಕ್ಕೆ ಉರುಳಿ ಬಿದ್ದು, 7 ಜನರು ಸಾವನ್ನಪ್ಪಿರುವ ದುರ್ಘಟನೆ ಜಮ್ಮು-ಕಾಶ್ಮೀರದ ಪೂಂಚ್​​ ಜಿಲ್ಲೆಯಲ್ಲಿ ಸಂಭವಿಸಿದೆ. ಈ ಘಟನೆಯಲ್ಲಿ ಇನ್ನೂ ಕೆಲವರು ಗಾಯಗೊಂಡಿದ್ದಾರೆ.

ಗುರುವಾರ ಬುಫ್ಲಿಯಾಜ್​ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಅತಿಥಿಗಳನ್ನು ಟಾಟಾ ಸುಮೋದಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಸುರನಕೋಟ್​ಯಿಂದ ತೆರಳುತ್ತಿದ್ದಾಗ ತರನ್​ ವಾಲಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಸುಮೋ ಬಿದ್ದಿದೆ ಎಂದು ತಿಳಿದುಬಂದಿದೆ.

ಇದರಿಂದ ಏಳು ಜನರು ದುರ್ಮರಣ ಹೊಂದಿದ್ದು, ಇನ್ನೂ ಕೆಲವರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಪರಿಹಾರ ಕಾರ್ಯ ನಡೆಯುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಭ್ರಷ್ಟಾಚಾರ: 45 ಇಲಾಖೆಗಳ 715 ಕೇಂದ್ರ ಸರ್ಕಾರಿ ನೌಕರರ ವಿರುದ್ಧ'ಸಿಬಿಐ' ಕೇಸ್

ABOUT THE AUTHOR

...view details